Adithi Ashok : ಕನ್ನಡತಿ ಅದಿತಿ ಅಶೋಕ್ ಟೋಕಿಯೋ ಒಲಿಂಪಿಕ್ಸ್ ಗೆ ಆಯ್ಕೆ

ಬೆಂಗಳೂರು :  ಕರ್ನಾಟಕದ ಖ್ಯಾತ ಗಾಲ್ಪರ್ ಅದಿತಿ ಅಶೋಕ್ ಅವರು ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಅರ್ಹತೆ ಪಡೆಯುವ ಮೂಲಕ ಭಾರತದ ಮೊದಲ ಮಹಿಳಾ ಗಾಲ್ಫರ್‌ ಅನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಒಲಿಂಪಿಕ್ಸ್ ಕ್ರೀಡಾಕೂಟ ಆರಂಭಕ್ಕೆ ಇನ್ನೊಂದು ತಿಂಗಳಿರುವಂತೆ ಬೆಂಗಳೂರಿನ 23 ವರ್ಷದ ಗಾಲ್ಫರ್‌ ಅದಿತಿ ಟೋಕಿಯೋ ಒಲಿಂಪಿಕ್ಸ್ ಗೆ ಅರ್ಹತೆ ಪಡೆದುಕೊಂಡಿದ್ದಾರೆ. 2018ರಲ್ಲಿ ಆರಂಭಗೊಂಡ ಅರ್ಹತಾ ಸುತ್ತಿನಲ್ಲಿ ಮುನ್ನಡೆ ಕಾಯ್ದಕೊಂಡು ಬಂದಿರುವ ಅದಿತಿ, ಮೂರು ವರ್ಷಗಳ ಹಿಂದೆ ಒಲಿಂಪಿಕ್ಸ್‌ ಶ್ರೇಯಾಂಕ ಪಟ್ಟಿಯಲ್ಲಿ 28ನೇ ಸ್ಥಾನ ಪಡೆದಿದ್ದರು.

ಇದೀಗ ಅಂತಾರಾಷ್ಟ್ರೀಯ ಗಾಲ್ಫ್ ಒಕ್ಕೂಟ ಮಂಗಳವಾರ ಬಿಡುಗಡೆ ಮಾಡಿದ ಪಟ್ಟಿಯಲ್ಲಿ 45ನೇ ಸ್ಥಾನ ಪಡೆಯುವ ಮೂಲಕ ಟೋಕಿಯೋ ಒಲಿಂಪಿಕ್ಸ್ ಗೆ ಆಯ್ಕೆಯಾಗಿದ್ದಾರೆ. ಈ ಬಗ್ಗೆ ಮಾತನಾಡಿರುವ ಆದಿತಿ 2016ರ ರಿಯೋ ಒಲಿಂಪಿಕ್ಸ್‌ಗೆ ಬಹಳಾ ಕಷ್ಟಪಟ್ಟು ಅರ್ಹತೆ ಪಡೆದಿದ್ದೆ. 2105ರಲ್ಲಿ ನನಗೆ ವಿಶ್ವ ಶ್ರೇಯಾಂಕದ ಟೂರ್ನಿಗಳು ಹೆಚ್ಚು ಸಿಕ್ಕಿರಲಿಲ್ಲ. ಹೀಗಾಗಿಯೇ ಟೋಕಿಯೋ ಒಲಿಂಪಿಕ್ಸ್‌ಗೆ ಆಯ್ಕೆಯಾಗುತ್ತೇನೆ ಅನ್ನುವುದು ಗೊತ್ತಿತ್ತು ಎಂದಿದ್ದಾರೆ.

Comments are closed.