Jofra Archer IPL 2022 : ಎಬಿ ಡಿವಿಲಿಯರ್ಸ್ ಬೆನ್ನಲ್ಲೇ ಐಪಿಎಲ್‌ ಮೆಗಾ ಹರಾಜಿನಿಂದ ಹೊರ ಬಿದ್ದ ಖ್ಯಾತ ಆಟಗಾರ

ಮುಂಬೈ : ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಮೆಗಾ ಹರಾಜಿಗೆ ದಿನಾಂಕ ಫಿಕ್ಸ್‌ ಆಗಿದೆ. ಈಗಾಗಲೇ ಯಾವ ಆಟಗಾರರು ಯಾವ ತಂಡವನ್ನು ಸೇರ್ತಾರೆ ಅನ್ನೋ ಕುತೂಹಲ ಸೃಷ್ಟಿಯಾಗಿದೆ. ಈ ನಡುವಲ್ಲೇ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನು ಪ್ರತಿನಿಧಿಸುತ್ತಿದ್ದ ಖ್ಯಾತ ಆಟಗಾರ ಎಬಿ ಡಿವಿಲಿಯರ್ಸ್‌ ಈಗಾಗಲೇ ಐಪಿಎಲ್‌ ಮೆಗಾ ಹರಾಜಿನಿಂದ (Jofra Archer IPL 2022) ದೂರವಾಗಿದ್ದಾರೆ. ಈ ನಡುವಲ್ಲೇ ಮತ್ತೋರ್ವ ಖ್ಯಾತ ಆಟಗಾರ ಈ ಬಾರಿ ಐಪಿಎಲ್‌ ಟೂರ್ನಿಯನ್ನು ಮಿಸ್‌ ಮಾಡಿಕೊಳ್ಳಲಿದ್ದಾರೆ.

ಬಿಸಿಸಿಐ ಫೆಬ್ರವರಿ 12 ಮತ್ತು 13 ರಂದು ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ನ ಆಟಗಾರರ ಮಹಾ ಹರಾಜು ನಡೆಯಲಿದೆ. ಎಂಟು ತಂಡಗಳು ಈಗಾಗಲೇ ತಮ್ಮಲ್ಲಿ ಉಳಿಸಿಕೊಳ್ಳುವ ಆಟಗಾರರ ಪಟ್ಟಿಯನ್ನು ಬಿಸಿಸಿಐ ಗೆ ಸಲ್ಲಿಕೆ ಮಾಡಿವೆ, ಉಳಿದಂತೆ ಹೊಸ ತಂಡಗಳಾದ ಲಕ್ನೋ ಅಹಮದಾಬಾದ್‌ ತಂಡಗಳು ಇನ್ನಷ್ಟೇ ಉಳಿಸಿಕೊಳ್ಳುವ ಆಟಗಾರರ ಪಟ್ಟಿಯನ್ನು ಸಲ್ಲಿಕೆ ಮಾಡಬೇಕಾಗಿದೆ. ನಂತರದಲ್ಲಿ ಉಳಿದ ಆಟಗಾರರು ಮೆಗಾ ಹರಾಜಿನಲ್ಲಿ ಭಾಗಿಯಾಗಲಿದ್ದಾರೆ.

ಈ ಬಾರಿ ಸಂಜೀವ್ ಗೋಯೆಂಕಾ ಅವರು ಲಕ್ನೋ ಸ್ಥಾಪನೆಯೊಂದಿಗೆ ಹೂಡಿಕೆ ಸಂಸ್ಥೆ ಸಿವಿಸಿ ಅಹಮದಾಬಾದ್ ತಂಡಗಳು ಐಪಿಎಲ್‌ ಟೂರ್ನಿಯಲ್ಲಿ ಕಾಣಿಸಿಕೊಳ್ಳಲಿವೆ. ಅಹಮದಾಬಾದ್‌ ತಂಡಕ್ಕೆ ಬಿಸಿಸಿಐ ಈಗಾಗಲೇ ಗ್ರೀನ್‌ ಸಿಗ್ನಲ್‌ ಕೊಟ್ಟಿದೆ. ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದ ಎಬಿ ಡಿವಿಲಿಯರ್ಸ್ ಐಪಿಎಲ್‌ ಪಂದ್ಯಾವಳಿಯಿಂದ ದೂರವಾಗಿದ್ದಾರೆ. ಈ ನಡುವಲ್ಲೇ ಇಂಗ್ಲಿಷ್ ಆಲ್ರೌಂಡರ್ ಜೋಫ್ರಾ ಆರ್ಚರ್ ಕೂಡ ಈ ಬಾರಿ ಮೆಗಾ ಹರಾಜಿನಿಂದ ಹೊರಬಿದ್ದಿದ್ದಾರೆ.

ಜೋಪ್ರಾ ಆರ್ಚರ್‌ ಬಲ ಮೊಣಕೈ ಗಾಯಗೊಂಡಿದ್ದು, ಹಲವು ಸಮಯಗಳ ಕಾಲ ವಿಶ್ರಾಂತಿಯನ್ನು ಬಯಸಿದ್ದಾರೆ. ಜೊತೆಗೆ ಅಂತರಾಷ್ಟ್ರೀಯ ಪಂದ್ಯಾವಳಿಗಳ ಕುರಿತು ಹೆಚ್ಚಿನ ಗಮನಹರಿಸುವ ನಿಟ್ಟಿನಲ್ಲಿ ಇದೀಗ ಐಪಿಎಲ್‌ನಿಂದ ದೂರವಾಗಲು ಬಯಸಿದ್ದಾರೆ. ಇಂಗ್ಲೆಂಡ್‌ನ ತಂಡದ ಪ್ರಮುಖ ವೇಗಿ ಎನಿಸಿಕೊಂಡಿರುವ ಜೋಪ್ರಾ ಆರ್ಚರ್‌ ಅವರನ್ನು ರಾಜಸ್ಥಾನ ರಾಯಲ್ಸ್‌ ತಂಡ ಬರೋಬ್ಬರಿ 7.2 ಕೋಟಿ ರೂಪಾಯಿ ನೀಡಿ ಖರೀದಿಸಿತ್ತು. ಆದರೆ ಬೆರಳಿನ ಗಾಯದ ಹಿನ್ನೆಲೆಯಲ್ಲಿ ಅವರು ಇಡೀ ಐಪಿಎಲ್‌ ಋತುವನ್ನು ಮಿಸ್‌ ಮಾಡಿಕೊಂಡಿದ್ದರು. ಆರ್ಚರ್‌ ಇದುವರೆಗೆ ಒಟ್ಟು 35 ಐಪಿಎಲ್‌ ಪಂದ್ಯಗಳನ್ನು ಆಡಿದ್ದು 46 ವಿಕೆಟ್‌ ಕಬಳಿಸಿದ್ದಾರೆ.

ಮುಂದಿನ ವರ್ಷದ ಐಪಿಎಲ್‌ ಪಂದ್ಯಾವಳಿಗಾಗಿ ಈಗಾಗಲೇ ತಂಡಗಳು ಭಾರೀ ಸಿದ್ದತೆಯನ್ನು ಮಾಡಿಕೊಳ್ಳುತ್ತಿದೆ. ಆರ್‌ಸಿಬಿ ತಂಡದ ನಾಯಕನ ಸ್ಥಾನದಿಂದ ವಿರಾಟ್‌ ಕೊಯ್ಲಿ ಕೆಳಗೆ ಇಳಿಯುತ್ತಲೇ ಎಬಿ ಡಿವಿಲಿಯರ್ಸ್‌ ಕ್ರಿಕೆಟ್ ಗೆ ಗುಡ್‌ಬೈ ಹೇಳಿದ್ದಾರೆ. ಇದು ಆರ್‌ಸಿಬಿ ತಂಡಕ್ಕೆ ನುಂಗಲಾರದ ತುತ್ತಾಗಿದೆ. ಇನ್ನೊಂದೆಡೆಯಲ್ಲಿ ಆರ್ಚರ್‌ ಅವರನ್ನು ತಂಡಕ್ಕೆ ಸೆಳೆಯುವ ನಿಟ್ಟಿನಲ್ಲಿ ಹಲವು ತಂಡಗಳು ಯತ್ನಿಸುತ್ತಿದ್ದ ಬೆನ್ನೆಲ್ಲೇ ಇದೀಗ ಆರ್ಚರ್‌ ಗಾಯಗೊಂಡಿರುವುದು ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಇದನ್ನೂ ಓದಿ : ಲಕ್ನೋ ತಂಡದಲ್ಲಿ ರಾಹುಲ್, ರಶೀದ್ ಖಾನ್, ಸ್ಟೀವ್ ಸ್ಮಿತ್ ಮತ್ತು ಸುರೇಶ್ ರೈನಾ

ಇದನ್ನೂ ಓದಿ : ಅಹಮದಾಬಾದ್ ಸೇರ್ತಾರೆ ಶ್ರೇಯಸ್ ಅಯ್ಯರ್, ಡೇವಿಡ್ ವಾರ್ನರ್, ಹಾರ್ದಿಕ್‌ ಪಾಂಡ್ಯ

( After AB de Villiers another top player Jofra Archer out of IPL 2022 Mega Auction)

Comments are closed.