Ajinkya Rahane: ಅಶಿಸ್ತು ತೋರಿದ ಯಶಸ್ವಿ ಜೈಸ್ವಾಲ್‌ನನ್ನು ಮೈದಾನದಿಂದ ಹೊರಗಟ್ಟಿದ ಅಜಿಂಕ್ಯ ರಹಾನೆ

ಕೊಯಂಬತ್ತೂರ್: (Ajinkya Rahane) ದಕ್ಷಿಣ ವಲಯ ಹಾಗೂ ಪಶ್ಚಿಮ ವಲಯ ತಂಡಗಳ ನಡುವೆ ನಡೆದ ದುಲೀಪ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. ಎದುರಾಳಿ ಬ್ಯಾಟ್ಸ್’ಮನ್’ಗೆ ಪದೇ ಪದೇ ಸ್ಲೆಡ್ಜಿಂಗ್ ನಡೆಸಿದ ತನ್ನದೇ ತಂಡದ ಆಟಗಾರನನ್ನು ಪಶ್ಚಿಮ ವಲಯ ತಂಡದ ನಾಯಕ ಅಜಿಂಕ್ಯ ರಹಾನೆ ಮೈದಾನದಿಂದಲೇ ಹೊರ ಕಳುಹಿಸಿದ್ದಾರೆ.

ಕೊಯಂಬತ್ತೂರಿನಲ್ಲಿ ಅಂತ್ಯಗೊಂಡ ದುಲೀಪ್ ಟ್ರೋಫಿ ಫೈನಲ್ (Duleep Trophy Final) ಪಂದ್ಯದಲ್ಲಿ ಪಶ್ಚಿಮ ವಲಯ ತಂಡ (West Zone), ದಕ್ಷಿಣ ವಲಯವನ್ನು 294 ರನ್’ಗಳಿಂದ ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿತು. ಪಂದ್ಯದ 5ನೇ ದಿನದಾಟದಲ್ಲಿ ದಕ್ಷಿಣ ವಲಯ (South Zone) ತಂಡದ ರವಿ ತೇಜ ಬ್ಯಾಟಿಂಗ್ ಮಾಡುತ್ತಿದ್ದಾಗ ಶಾರ್ಟ್ ಸ್ಕ್ವೇರ್ ಲೆಗ್’ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಪಶ್ಚಿಮ ವಲಯ ತಂಡದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಪದೇ ಪದೇ ಸ್ಲೆಡ್ಜಿಂಗ್ ಮಾಡುತ್ತಿದ್ದರು. ಈ ಬಗ್ಗೆ ರವಿ ತೇಜ ಫೀಲ್ಡ್ ಅಂಪೈರ್ ಹಾಗೂ ಪಶ್ಚಿಮ ವಲಯ ತಂಡದ ನಾಯಕ ಅಜಿಂಕ್ಯ ರಹಾನೆ (Ajinkya Rahane) ಅವರಿಗೆ ದೂರನ್ನೂ ಕೊಟ್ಟರು. ಹೀಗಾಗಿ ಸಹ ಆಟಗಾರ ಯಶಸ್ವಿ ಜೈಸ್ವಾಲ್’ಗೆ ನಾಯಕ ಅಜಿಂಕ್ಯ ರಹಾನೆ ಎರಡು ಬಾರಿ ಎಚ್ಚರಿಕೆ ಕೂಡ ಕೊಟ್ಟಿದ್ದಾರೆ. ಶಿಸ್ತಿನ ಎಲ್ಲೆ ಮೀರದಂತೆ ಎಚ್ಚರಿಸಿದ್ದಾರೆ. ಆದರೆ ಜೈಸ್ವಾಲ್ ತಮ್ಮ ಚಾಳಿಯನ್ನು ಮುಂದುವರಿಸಿದಾಗ ಕ್ಯಾಪ್ಟನ್ ರಹಾನೆ ಮೂರನೇ ಬಾರಿ ಎಚ್ಚರಿಕೆ ನೀಡಲಿಲ್ಲ, ನೇರವಾಗಿ ಜೈಸ್ವಾಲ್’ನನ್ನು ಮೈದಾನದಿಂದ ಹೊರ ಕಳುಹಿಸಿದರು.

ನಾಯಕನಾಗಿ ಅಜಿಂಕ್ಯ ರಹಾನೆ ತೆಗೆದುಕೊಂಡ ಈ ನಿರ್ಧಾರ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಯಶಸ್ವಿ ಜೈಸ್ವಾಲ್ ಮೈದಾನ ತೊರೆದ ನಂತರ ಪಶ್ಚಿಮ ವಲಯ ತಂಡದ ಕೇವಲ 10 ಆಟಗಾರರೊಂದಿಗೆ ಆಡುವಂತಾಯಿತು. ಗೆಲ್ಲಲು ಪಶ್ಚಿಮ ವಲಯ ಒಡ್ಡಿದ್ದ 529 ರನ್’ಗಳ ಕಠಿಣ ಗುರಿಯನ್ನು ಬೆನ್ನಟಿದ ದಕ್ಷಿಣ ವಲಯ ತಂಡ 234 ರನ್ನಿಗೆ ಆಲೌಟಾಗಿ 294 ರನ್’ಗಳ ಹೀನಾಯ ಸೋಲು ಕಂಡಿತು. ದಕ್ಷಿಣ ವಲಯ ಪರ ಆಡಿದ ಕರ್ನಾಟಕದ ಆಟಗಾರರಾದ ಮಯಾಂಕ್ ಅಗರ್ವಾಲ್ (09, 14) ಮತ್ತು ಮನೀಶ್ ಪಾಂಡೆ (48, 14) ಎರಡೂ ಇನ್ನಿಂಗ್ಸ್’ಗಳಲ್ಲಿ ದೊಡ್ಡ ಮೊತ್ತ ಗಳಿಸುವಲ್ಲಿ ವಿಫಲರಾದರು.

ಪಶ್ಚಿಮ ವಲಯ ತಂಡದ 2ನೇ ಇನ್ನಿಂಗ್ಸ್’ನಲ್ಲಿ ಅಮೋಘ ದ್ವಿಶತಕ ಬಾರಿಸಿದ ಎಡಗೈ ಓಪನರ್ ಯಶಸ್ವಿ ಜೈಸ್ವಾಲ್ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಅಮೋಘ ಇನ್ನಿಂಗ್ಸ್ ಕಟ್ಟಿದ 20 ವರ್ಷದ ಜೈಸ್ವಾಲ್ 323 ಎಸೆತಗಳಲ್ಲಿ 30 ಬೌಂಡರಿಗಳು ಹಾಗೂ 4 ಸಿಕ್ಸರ್’ಗಳ ನೆರವಿನಿಂದ ಆಕರ್ಷಕ 265 ರನ್ ಗಳಿಸಿದರು.

ಇದನ್ನೂ ಓದಿ : ಭಾರತ Vs ಆಸೀಸ್ ಟಿ20 ಪಂದ್ಯದಲ್ಲಿ “ಆರ್‌ಸಿಬಿ, ಆರ್‌ಸಿಬಿ” ಎಂದು ಕೂಗಿದವರ ಬಾಯಿ ಮುಚ್ಚಿಸಿದ ವಿರಾಟ್ ಕೊಹ್ಲಿ

ಇದನ್ನೂ ಓದಿ : ಭಾರತ Vs ಆಸೀಸ್ ಟಿ20 ಪಂದ್ಯದಲ್ಲಿ “ಆರ್‌ಸಿಬಿ, ಆರ್‌ಸಿಬಿ” ಎಂದು ಕೂಗಿದವರ ಬಾಯಿ ಮುಚ್ಚಿಸಿದ ವಿರಾಟ್ ಕೊಹ್ಲಿ

Ajinkya Rahane runs off the undisciplined Yassav Jaiswal

Comments are closed.