Ajit Agarkar : ಬಿಸಿಸಿಐ ಆಯ್ಕೆ ಸಮಿತಿಗೆ ಅಜಿತ್ ಅಗರ್ಕರ್ ಚೇರ್ಮನ್ ? ರೇಸ್’ನಲ್ಲಿದ್ದಾರೆ ವೆಂಗ್ಸರ್ಕರ್, ಶಾಸ್ತ್ರಿ

ಮುಂಬೈ: ಬಿಸಿಸಿಐ (BCCI) ಸೀನಿಯರ್ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿ ಟೀಮ್ ಇಂಡಿಯಾದ ಮಾಜಿ ವೇಗದ ಬೌಲರ್ ಅಜಿತ್ ಅಗರ್ಕರ್ (Ajit Agarkar) ನೇಮಕಗೊಳ್ಳುವ ಸಾಧ್ಯತೆಯಿದೆ. ಐಪಿಎಲ್’ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೋಚಿಂಗ್ ಹುದ್ದೆಯಲ್ಲಿದ್ದ ಅಜಿತ್ ಅಗರ್ಕರ್ ಇತ್ತೀಚೆಗಷ್ಟೇ ತಮ್ಮ ಹುದ್ದೆ ತೊರೆದಿದ್ದಾರೆ. ಬಿಸಿಸಿಐ ಆಯ್ಕೆ ಸಮಿತಿಯ ಮುಖ್ಯಸ್ಥರ ರೇಸ್’ನಲ್ಲಿರುವುದರಿಂದ ಅಗರ್ಕರ್ ಐಪಿಎಲ್ ಜವಾಬ್ದಾರಿಯಿಂದ ಮುಕ್ತಿ ಪಡೆದಿದ್ದಾರೆ ಎನ್ನಲಾಗ್ತಿದೆ.

ಭಾರತ ಪರ 26 ಟೆಸ್ಟ್, 191 ಏಕದಿನ ಹಾಗೂ 4 ಟಿ20 ಪಂದ್ಯಗಳನ್ನಾಡಿರುವ ಅಜಿತ್ ಅಗರ್ಕರ್ ಮುಂದಿನ ಏಷ್ಯಾ ಕಪ್ ಒಳಗಾಗಿ ಬಿಸಿಸಿಐ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿ ನೇಮಕಗೊಳ್ಳುವ ಸಾಧ್ಯತೆಯಿದೆ. ಅಗರ್ಕರ್ ಅವರೊಂದಿಗೆ ಚೀಫ್ ಸೆಲೆಕ್ಟರ್ ಹುದ್ದೆಗೆ ಮುಂಬೈ ದಿಗ್ಗಜರಾದ ದಿಲೀಪ್ ವೆಂಗ್ಸರ್ಕರ್ (Dilip Vengsarkar) ಮತ್ತು ರವಿ ಶಾಸ್ತ್ರಿ (Ravi Shastri) ಕೂಡ ರೇಸ್’ನಲ್ಲಿದ್ದಾರೆ.

ಸೀನಿಯರ್ ಆಯ್ಕೆ ಸಮಿತಿಯ ಮುಖ್ಯಸ್ಥನಿಗೆ ಬಿಸಿಸಿಐ ವಾರ್ಷಿಕ 1 ಕೋಟಿ ರೂ. ಸಂಭಾವನೆ ನೀಡುತ್ತದೆ. ಸಮಿತಿಯ ಸದಸ್ಯರಿಗೆ ತಲಾ 90 ಲಕ್ಷ ರೂ.ಗಳ ಸಂಭಾವನೆ ನೀಡಲಾಗುತ್ತದೆ. ಆದರೆ ಕ್ರಿಕೆಟ್ ಕಾಮೆಂಟೇಟರ್ ಕೂಡ ಆಗಿರುವ ಅಜಿತ್ ಅಗರ್ಕರ್ ಮತ್ತು ರವಿಶಾಸ್ತ್ರಿ ಇದಕ್ಕಿಂತ ಹೆಚ್ಚಿನ ದುಡ್ಡನ್ನು ಸಂಪಾದಿಸುತ್ತಿದ್ದಾರೆ. ಹೀಗಾಗಿ ಇವರು ಒಂದು ವೇಳೆ ಬಿಸಿಸಿಐ ಆಯ್ಕೆ ಸಮಿತಿಯ ಮುಖ್ಯಸ್ಥರಾದರೆ ಸಂಭಾವನೆಯನ್ನು ಹೆಚ್ಚಿಸಬೇಕಾದ ಅನಿವಾರ್ಯತೆ ಬಿಸಿಸಿಐಗೆ ಸೃಷ್ಠಿಯಾಗಲಿದೆ ಎನ್ನಲಾಗ್ತಿದೆ.

ಈ ಹಿಂದೆ ಭಾರತ ತಂಡದ ಮಾಜಿ ಕ್ರಿಕೆಟಿಗ ಚೇತನ್ ಶರ್ಮಾ (Chetan Sharma) ಬಿಸಿಸಿಐ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿದ್ದರು. ಟಿವಿ ಸ್ಟಿಂಗ್ ಆಪರೇಷನ್ ವಿವಾದದಲ್ಲಿ ಸಿಲುಕಿಕೊಂಡ ಕಾರಣ ತಮ್ಮ ಹುದ್ದೆ ಕಳೆದುಕೊಂಡಿದ್ದರು. ಅಂದಿನಿಂದ ಬಿಸಿಸಿಐ ಚೀಫ್ ಸೆಲೆಕ್ಟರ್ ಹುದ್ದೆ ಖಾಲಿಯಿದೆ. ಸದ್ಯ ಬಿಸಿಸಿಐ ಆಯ್ಕೆ ಸಮಿತಿಯಲ್ಲಿ ಸುಬ್ರತೋ ಬ್ಯಾನರ್ಜಿ, ಸಲೀಲ್ ಅಂಕೋಲ, ಎಸ್.ಶರತ್ ಮತ್ತು ಶಿವಸುಂದರ್ ದಾಸ್ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ : KL Rahul Exclusive : ಕೆ.ಎಲ್ ರಾಹುಲ್ ಕಂಬ್ಯಾಕ್‌ಗೆ ಡೆಡ್‌ಲೈನ್ ಫಿಕ್ಸ್ ಮಾಡಿದ ಬಿಸಿಸಿಐ, ವಿಶ್ವಕಪ್‌ಗೆ ಅಯ್ಯರ್ ಡೌಟ್

ಇದನ್ನೂ ಓದಿ : Rishabh Pant : ರಿಷಭ್ ಪಂತ್’ಗೆ ಪುನರ್ಜನ್ಮ.. ಇದೇನಾಶ್ಚರ್ಯ? ಮರುಜನ್ಮದ ದಿನಾಂಕ ಪ್ರಕಟಿಸಿದ ಸ್ಟಾರ್ ವಿಕೆಟ್ ಕೀಪರ್

Comments are closed.