Vamika’s pics : ವೈರಲ್​ ಆಗುತ್ತಿರುವ ವಮಿಕಾಳ ಫೋಟೋ ಬಗ್ಗೆ ಸ್ಪಷ್ಟನೆ ನೀಡಿದ ವಿರುಷ್ಕಾ ದಂಪತಿ

Vamika’s pics : ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್​ ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಶರ್ಮಾ ತಮ್ಮ ಪುತ್ರಿಯ ವಿಚಾರದಲ್ಲಿ ಮೊದಲಿನಿಂದಲೂ ಖಾಸಗಿತನವನ್ನೇ ಬಯಸುತ್ತಾ ಬಂದಿದ್ದಾರೆ. ಈಗಾಗಲೇ ಈ ಸಂಬಂಧ ಸಾಕಷ್ಟು ಪೋಸ್ಟ್​ಗಳನ್ನೂ ಶೇರ್​ ಮಾಡಿದ್ದ ವಿರುಷ್ಕಾ ದಂಪತಿ ಪುತ್ರಿಯ ಫೋಟೋ ಅಥವಾ ವಿಡಿಯೋಗಳನ್ನು ಜಗತ್ತಿಗೆ ತೋರಿಸುವ ಬಗ್ಗೆ ತಮಗೆ ಯಾವುದೇ ಆಸಕ್ತಿ ಇಲ್ಲ ಎಂಬಂತೆ ಮಾತನಾಡಿದ್ದಾರೆ. ಆದರೆ ನಿನ್ನೆ ನಡೆದ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಏಕದಿನ ಸರಣಿಯ ಮೂರನೇ ಪಂದ್ಯದಲ್ಲಿ ವಮಿಕಾ ಕೊಹ್ಲಿಯ ಮುಖ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿಬಿಟ್ಟಿದೆ.


ವಮಿಕಾ ಕೊಹ್ಲಿಯ ಫೋಟೋ ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದೇ ತಡ ಸೋಶಿಯಲ್​ ಮೀಡಿಯಾದ ಈ ವಿಡಿಯೋ ಮಿಂಚಿನ ವೇಗದಲ್ಲಿ ಹರಿದಾಡಿದೆ. ಸ್ಟಾರ್​ ಸ್ಪೋರ್ಟ್ಸ್​ ವಾಹಿನಿಯಲ್ಲಿ ಮೊದಲು ಪ್ರಸಾರವಾದ ಈ ದೃಶ್ಯ ಬಳಿಕ ಸೋಶಿಯಲ್​ ಮೀಡಿಯಾದಲ್ಲಿ ಹೊಸ ಸೆನ್ಸೇಶನ್​​ನ್ನೇ ಕ್ರಿಯೇಟ್​ ಮಾಡಿದೆ. ಅನುಷ್ಕಾ ಶರ್ಮಾ ತಮ್ಮ ಪುತ್ರಿಗೆ ಮೈದಾನದಲ್ಲಿದ್ದ ತಂದೆಯನ್ನು ತೋರಿಸುತ್ತಿದ್ದ ವೇಳೆಯಲ್ಲಿ ಈ ದೃಶ್ಯವನ್ನು ಚಿತ್ರೀಕರಿಸಲಾಗಿತ್ತು.
ಮಗಳ ಮುಖವನ್ನು ಇಡೀ ಜಗತ್ತಿಗೇ ತೋರಿಸಿದ ವಿಡಿಯೋದ ಬಗ್ಗೆ ಇದೀಗ ವಿರುಷ್ಕಾ ದಂಪತಿ ತಮ್ಮ ಸೋಶಿಯಲ್​ ಮೀಡಿಯಾ ಖಾತೆಯ ಮೂಲಕ ಸ್ಪಷ್ಟನೆಯನ್ನು ನೀಡಿದ್ದಾರೆ.ಪುತ್ರಿಯ ಮುಖವನ್ನು ಕ್ಯಾಮರಾ ಕಣ್ಣಲ್ಲಿ ಸೆರೆಹಿಡಿಯುತ್ತಿದ್ದ ಬಗ್ಗೆ ನಮಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ಕೊಹ್ಲಿ ದಂಪತಿ ಬರೆದುಕೊಂಡಿದ್ದಾರೆ .


ಸೋಶಿಯಲ್​ ಮೀಡಿಯಾದಲ್ಲಿ ಒಂದೇ ರೀತಿಯ ಪೋಸ್ಟ್​ ಶೇರ್​ ಮಾಡಿರುವ ವಿರುಷ್ಕಾ ದಂಪತಿ, ಎಲ್ಲರಿಗೂ ಹಾಯ್​, ನಿನ್ನೆ ನಮ್ಮ ಪುತ್ರಿಯ ಫೋಟೋವನ್ನು ಸ್ಟೇಡಿಯಂನಲ್ಲಿ ಚಿತ್ರೀಕರಿಸಲಾಗಿದೆ. ಅಲ್ಲದೇ ಈ ದೃಶ್ಯವು ವೈರಲ್​ ಕೂಡ ಆಗಿದೆ. ನಮಗೆ ತಿಳಿಯದಂತೆ ಈ ದೃಶ್ಯವನ್ನು ಚಿತ್ರೀಕರಿಸಲಾಗಿದೆ. ಪುತ್ರಿಯ ವಿಚಾರದಲ್ಲಿ ನಮ್ಮ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ. ನಮ್ಮ ಮನವಿಯು ಈಗಲೂ ಕೂಡ ಮೊದಲಿನಂತೆಯೇ ಇರಲಿದೆ. ವಮಿಕಾಳ ಫೋಟೋಗಳನ್ನು ಕ್ಲಿಕ್​ ಮಾಡದೇ ಇರುವುದು ಹಾಗೂ ಅದನ್ನು ಎಲ್ಲಿಯೂ ಪ್ರಕಟಿಸದೇ ಇದ್ದರೆ ಅದಕ್ಕಾಗಿ ನಮ್ಮ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.


ವಮಿಕಾ ಜನಿಸಿದಾಗಿನಿಂದ ವಿರುಷ್ಕಾ ದಂಪತಿಯ ಆಕೆಯ ಮುಖವನ್ನು ಜಗತ್ತಿಗೆ ಪರಿಚಯ ಮಾಡಿಲ್ಲ. ಅಲ್ಲದೇ ತಮ್ಮ ನಿರ್ಧಾರದ ಬಗ್ಗೆ ಅನುಷ್ಕಾ ಶರ್ಮಾ ಹಾಗೂ ವಿರಾಟ್​ ಕೊಹ್ಲಿ ದಂಪತಿ ಸೋಶಿಯಲ್​ ಮೀಡಿಯಾ ಪೋಸ್ಟ್​ ಮೂಲಕ ಮಾಹಿತಿ ನೀಡಿದ್ದಾರೆ. ಇದೇ ಕಾರಣಕ್ಕೆ ಅವಕಾಶ ಸಿಕ್ಕರೂ ಸಹ ಪಾಪರಾಜಿಗಳು ವಮಿಕಾ ಫೋಟೋವನ್ನು ಕ್ಲಿಕ್ಕಿಸಿಲ್ಲ. ಆದರೆ ನಿನ್ನೆ ಮಾತ್ರ ವಿರುಷ್ಕಾ ದಂಪತಿಯ ಇಚ್ಛೆಯ ವಿರುದ್ಧವಾಗಿ ಸ್ಟಾರ್​ ಸ್ಪೋರ್ಟ್ಸ್​​ನಲ್ಲಿ ವಮಿಕಾಳ ಮುದ್ದು ಮುಖ ಜಗತ್ತಿನ ಕಣ್ಣಿಗೆ ಕಂಡಿದೆ.

Anushka Sharma reacts to Vamika’s pics going viral: We were caught off guard

ಇದನ್ನು ಓದಿ : Bank fraud : ಬ್ರಹ್ಮಾವರದಲ್ಲಿ ಸಾಲ ಪಡೆದು ಬ್ಯಾಂಕಿಗೆ ಕೋಟ್ಯಾಂತರ ರೂಪಾಯಿ ವಂಚನೆ

ಇದನ್ನೂ ಓದಿ : UP Crime: 3 ವರ್ಷದ ಕಂದಮ್ಮನ ಎದುರಲ್ಲೇ ಪತ್ನಿಯನ್ನು ಕೊಂದು ಪತಿ ಪರಾರಿ

Comments are closed.