Job News: ಬ್ಯಾಂಕ್ ಆಫ್ ಬರೋಡಾದಲ್ಲಿ ಉದ್ಯೋಗಾವಕಾಶ; ಜವಾಬ್ದಾರಿ, ಸಂಬಳದ ವಿವರ ಇಲ್ಲಿದೆ

ಬ್ಯಾಂಕ್ ಆಫ್ ಬರೋಡಾ (BOB) ತನ್ನ ಕಾಶ್ ಮ್ಯಾನೇಜ್ಮೆಂಟ್ ಇಲಾಖೆ ಮತ್ತು ರಿಸಿವೆಬಲ್ ಮ್ಯಾನೇಜ್ಮೆಂಟ್ ವಿಭಾಗದ ಅಡಿಯಲ್ಲಿ ಅಸಿಸ್ಟೆಂಟ್ ವೈಸ್ ಪ್ರೆಸಿಡೆಂಟ್, ಹೆಡ್, ನ್ಯಾಷನಲ್ ಮ್ಯಾನೇಜರ್ ಟೆಲಿ ಕಾಲಿಂಗ್ ,ಮ್ಯಾನೇಜರ್, ಡೆಪ್ಯುಟಿ ವೈಸ್ ಪ್ರೆಸಿಡೆಂಟ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳುತ್ತಿದೆ. ಬ್ಯಾಂಕ್ ತನ್ನ ಅಧಿಕೃತ ವೆಬ್‌ಸೈಟ್ www.bankofbaroda.in ನಲ್ಲಿ ಒಟ್ಟು 198 ಖಾಲಿ ಹುದ್ದೆಗಳಿಗೆ ಎರಡು ಪ್ರತ್ಯೇಕ ನೇಮಕಾತಿ ಅಧಿಸೂಚನೆಗಳನ್ನು (Bank Of Baroda Job) ಬಿಡುಗಡೆ ಮಾಡಿದೆ. ಅಗತ್ಯವಿರುವ ಅರ್ಹತಾ ಮಾನದಂಡಗಳನ್ನು ಹೊಂದಿರುವ ಆಸಕ್ತ ಉದ್ಯೋಗ ಆಕಾಂಕ್ಷಿಗಳು 1ನೇ ಫೆಬ್ರವರಿ 2022 ರಂದು ಅಥವಾ ಮೊದಲು ಆನ್‌ಲೈನ್ ಮೋಡ್ ಮೂಲಕ ಪೋಸ್ಟ್‌ಗಳಿಗೆ ಅರ್ಜಿ ಸಲ್ಲಿಸಬಹುದು.

ಬ್ಯಾಂಕ್ ಆಫ್ ಬರೋಡಾ ಆನ್‌ಲೈನ್ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ: ಫೆಬ್ರವರಿ 01, 2022
ಬ್ಯಾಂಕ್ ಆಫ್ ಬರೋಡಾ ಹುದ್ದೆಯ ವಿವರಗಳು
ಕ್ಯಾಶ್ ಮ್ಯಾನೇಜ್ಮೆಂಟ್ ಇಲಾಖೆ- 53
ಅಸ್ಸಿಸ್ಟೆಂಟ್ ವೈಸ್ ಪ್ರೆಸಿಡೆಂಟ್ ಮತ್ತು ರಿಲೇಷನ್ ಶಿಪ್ ಮ್ಯಾನೇಜ್ಮೆಂಟ್- 50
ಅಸ್ಸಿಸ್ಟೆಂಟ್ ವೈಸ್ ಪ್ರೆಸಿಡೆಂಟ್ ಪ್ರೊಡಕ್ಟ್ ಮ್ಯಾನೇಜರ್ – 3
ರಿಸಿವೆಬಲ್ ಮ್ಯಾನೇಜ್ಮೆಂಟ್ :ಒಟ್ಟು ಹುದ್ದೆ 145

ಅರ್ಹತೆ
ಅಸಿಸ್ಟೆಂಟ್ ವೈಸ್ ಪ್ರೆಸಿಡೆಂಟ್ ಆಕ್ವಿಸಿಶನ್ ಹಾಗೂ ರಿಲೇಷನ್ ಶಿಪ್ ಮ್ಯಾನೇಜ್ಮೆಂಟ್ : ಅಭ್ಯರ್ಥಿಯು ಯಾವುದೇ ವಿಷಯದಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿಹೊಂದಿರಬೇಕು. ಜೊತೆಗೆ 5 ವರ್ಷಗಳ ಅನುಭವ ಇರಬೇಕು.
ಅಸಿಸ್ಟೆಂಟ್ ವೈಸ್ ಪ್ರೆಸಿಡೆಂಟ್- ಪ್ರೊಡಕ್ಟ್ ಮ್ಯಾನೇಜರ್
ಅಭ್ಯರ್ಥಿ ಬಿಎ, ಬೀಟೆಕ್, ಎಂಸಿಎ, ಸಿಎ, ಎಂಬಿಎ, ಅಥವಾ ಬ್ಯುಸಿನೆಸ್ ವಿಷಯದಲ್ಲಿ ಪಿಜಿ ಡಿಪ್ಲೊಮಾ ಹೊಂದಿರಬೇಕು. ಕನಿಷ್ಠ 5 ವರ್ಷಗಳ ಅನುಭವ ಇರಬೇಕು.
ರಿಸಿವೆಬಲ್ ಮ್ಯಾನೇಜ್ಮೆಂಟ್
ಅಭ್ಯರ್ಥಿಯು ಸರಕಾರಿ ಅಥವಾ ಉನ್ನತ ವಿದ್ಯಾಲಯದಿಂದ ಡಿಗ್ರಿ ಪೂರ್ತಿಗೊಳಿಸಿರಬೇಕು.
ವಯಸ್ಸು ಎಷ್ಟಿರಬೇಕು
ಅಸ್ಸಿಸ್ಟೆಂಟ್ ವೈಸ್ ಪ್ರೆಸಿಡೆಂಟ್ ಮತ್ತು ರಿಲೇಷನ್ ಶಿಪ್ ಮ್ಯಾನೇಜ್ಮೆಂಟ್- 26- 40 ವರ್ಷ
ಅಸ್ಸಿಸ್ಟೆಂಟ್ ವೈಸ್ ಪ್ರೆಸಿಡೆಂಟ್ ಪ್ರೊಡಕ್ಟ್ ಮ್ಯಾನೇಜರ್: 25-40 ವರ್ಷ
ಹೆಚ್ಚಿನ ಮಾಹಿತಿಗಾಗಿ ವೆಬ್ಸೈಟ್ ಭೇಟಿ ನೀಡಬಹುದು.

ಬ್ಯಾಂಕ್ ಆಫ್ ಬರೋಡಾ ನೇಮಕಾತಿ 2022 ಗೆ ಅರ್ಜಿ ಸಲ್ಲಿಸುವುದು ಹೇಗೆ?
ಅರ್ಹ ಮತ್ತು ಆಸಕ್ತ ಉದ್ಯೋಗಾಕಾಂಕ್ಷಿಗಳು ಮೊದಲು ಸೂಕ್ತವಾದ ಆನ್‌ಲೈನ್ ಅರ್ಜಿ ನಮೂನೆಯಲ್ಲಿ ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳಬಹುದು. ಪೋಸ್ಟ್‌ಗಳಿಗೆ ಅರ್ಜಿ ಸಲ್ಲಿಸಲು ಲಿಂಕ್ ಬ್ಯಾಂಕ್‌ನ ವೆಬ್‌ಸೈಟ್‌ನ ವೆಬ್ ತಾಣದಲ್ಲಿ ಲಭ್ಯವಿದೆ–www.bankofbaroda.co.in/Careers.htm. ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ 01, 2022.
ಅರ್ಜಿ ಶುಲ್ಕ: ಜನರಲ್, ಇ ಡಬ್ಲ್ಯೂಮತ್ತು ಒಬಿಸಿ ಅಭ್ಯರ್ಥಿಗಳು 600 ರೂಪಾಯಿಗಳ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಮತ್ತು ಎಸ್‌ಸಿ, ಎಸ್. ಟಿ,ಪಿಡಬ್ಲ್ಯೂ ಡಿ ಮತ್ತು ಮಹಿಳಾ ಅಭ್ಯರ್ಥಿಗಳು 100 ರೂಪಾಯಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಇದನ್ನೂ ಓದಿ: Earn money from Apps: ಮನೆಯಿಂದಲೇ ಹಣ ಗಳಿಸಲು ಬೆಸ್ಟ್ ಆ್ಯಪ್‌ಗಳಿವು

(Bank of Baroda Recruitment 2022 Application invited for 198 vacant posts Check eligibility last date)

Comments are closed.