ಏಷ್ಯನ್ ಬಾಕ್ಸಿಂಗ್ ಚಾಂಪಿಯನ್​ಶಿಪ್​ : ಬೆಳ್ಳಿ ಗೆದ್ದ ಭಾರತದ ಮೇರಿ ಕೋಮ್​

ದುಬೈ : ಏಷ್ಯನ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ 6 ಬಾರಿ ವಿಶ್ವ ಚಾಂಪಿಯನ್​ ಆಗಿದ್ದ ಭಾರತದ ಮೇರಿ ಕೋಮ್​ (51 ಕೆಜಿ) ಬೆಳ್ಳಿ ಪದಕ ಗೆದ್ದಿದ್ದಾರೆ. ಈ ಮೂಲಕ ಏಷ್ಯನ್ ಚಾಂಪಿಯನ್​ಶಿಪ್​ನಲ್ಲಿ 7ನೇ ಪದಕ ಪಡೆದ ಖ್ಯಾತಿಗೆ ಪಾತ್ರರಾಗಿದ್ದಾರೆ.

ಏಷ್ಯನ್ ಚಾಂಪಿಯನ್​ಶಿಪ್​ನ ಫೈನಲ್​ ಪಂದ್ಯದಲ್ಲಿ ಕಜಕಿಸ್ತಾನದ ನಜಿಮ್‌ ಕಿಜೈಬಿ ಅವರ ವಿರುದ್ಧ ಸೋಲನ್ನು ಕಾಣುವ ಮೂಲಕ ಮೇರಿ‌ ಕೋಮ್ ನಿರಾಶೆ ಅನುಭವಿಸಿದ್ದಾರೆ. ಚಾಂಪಿಯನ್​ ಆದ ನಜಿಮ್​ 10 ಸಾವಿರ ಯುಎಸ್​ ಡಾಲರ್​ ಹಾಗೂ ಬೆಳ್ಳಿ ಪದಕ ಪಡೆದ ಮೇರಿ ಕೋಮ್ 5000 ಯುಎಸ್​ ಡಾಲರ್​ ಬಹುಮಾನ ಮೊತ್ತವನ್ನು ಪಡೆದಿದ್ದಾರೆ.

ಮೊದಲ ಸುತ್ತಿನಲ್ಲಿ ಗೆಲುವು ಪಡೆದುಕೊಂಡಿದ್ದ, ಮೇರಿಕೋಮ್ 2ನೇ ಸುತ್ತಿನಲ್ಲಿ ಸೋಲು ಕಂಡರು. ಅಂತಿಮವಾಗಿ  2-3 ರ ಅಂತರದಲ್ಲಿ ಸೋಲು ಕಾಣುವ ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ.

Comments are closed.