WTC Final : ಟೀಂ ಇಂಡಿಯಾದ ಆಡುವ 11ರ‌ ಬಳಗ ಫೈನಲ್

ಸೌಥಾಂಪ್ಟನ್ : ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಟೆಸ್ಟ್ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಅದ್ರಲ್ಲೂ ಫೈನಲ್ ಪಂದ್ಯವನ್ನಾಡುವ 11 ಮಂದಿಯ ತಂಡವನ್ನು ಪ್ರಕಟಿಸಲಾಗಿದೆ.

ಟೀಂ ಇಂಡಿಯಾ ಅಗ್ರಸ್ಥಾನದೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್‌ನ ಫೈನಲ್ ಪ್ರವೇಶ ಪಡೆದಿದೆ. ನ್ಯೂಜಿಲೆಂಡ್‌ ವಿರುದ್ದದ ಫೈನಲ್ ಪಂದ್ಯಕ್ಕಾಗಿ ಭಾರತೀಯರು ಕಾದು ಕುಳಿತಿದ್ದಾರೆ. ಫೈನಲ್ ಪಂದ್ಯಕ್ಕೆ ಒಂದು ದಿನದ ಮೊದಲೇ ಆಡುವ 11ರ ಬಳಗವನ್ನು ಪ್ರಕಟಿಸಲಾಗಿದೆ.

ವಿರಾಟ್ ಕೊಯ್ಲಿ ನಾಯಕತ್ವದ ಟೀಂ ಇಂಡಿಯಾ ಬಲಿಷ್ಟವಾಗಿದೆ‌. ಅದ್ರಲ್ಲೂ ಆಡುವ 11 ರ ಬಳಗದಲ್ಲಿ ಆರಂಭಿಕರಾಗಿ ರೋಹಿತ್ ಶರ್ಮಾ ಹಾಗೂ ಶುಭಮನ್ ಗಿಲ್ ಆರಂಭಿಕರಾಗಿ ಕಣಕ್ಕೆ ಇಳಿಯಲಿದ್ದಾರೆ. ಅಶ್ವಿನ್ ಹಾಗೂ ಜಡೇಜಾ ಸ್ಪಿನ್ ಮೂಲಕ ಮೋಡಿ ಮಾಡೋದಂತೂ ಗ್ಯಾರಂಟಿ. ಅಷ್ಟೇ ಅಲ್ಲಾ ಬೂಮ್ರಾ, ಶಮಿ ಜೊತೆಗೆ ಇಶಾಂತ್ ಶರ್ಮಾ ವೇಗಿಗಳ ಕೋಟಾದಲ್ಲಿ ಸ್ಥಾನಪಡೆದಿದ್ದಾರೆ‌.

ಭಾರತ ತಂಡ : ವಿರಾಟ್ ಕೊಹ್ಲಿ(ನಾಯಕ), ರೋಹಿತ್ ಶರ್ಮಾ ಶುಭ್‌ಮನ್ ಗಿಲ್, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ರಿಷಬ್ ಪಂತ್, ರವೀಂದ್ರ ಜಡೇಜಾ, ಆರ್ ಅಶ್ವಿನ್, ಜಸ್ಪ್ರೀತ್ ಬುಮ್ರಾ, ಜಸ್ಪ್ರೀತ್ ಬುಮ್ರಾ, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ

Comments are closed.