Mysore Dasara : ಮೈಸೂರು ದಸರಾ ಜಂಬೂಸವಾರಿಗೆ ಅಭಿಮನ್ಯ ತಾಲೀಮು

ಮೈಸೂರು : ಐತಿಹಾಸಿಕ ಮೈಸೂರು ದಸರಾ ಮಹೋತ್ಸವ 2021ದ ಜಂಬೂಸವಾರಿ ಅಕ್ಟೋಬರ್ 15ರಂದು ವಿಜಯದಶಮಿ ಜಂಬೂಸವಾರಿ ಮೆರವಣಿಗೆ ನಡೆಯಲಿದೆ. ಈ ಹಿನ್ನಲೆಯಲ್ಲಿ ಇಂದು‌ ಅಂತಿಮ‌ ಹಂತದ, ಮೂರನೇ ಹಂತದ ಅಂತಿಮ ಪೂರ್ವಾಭ್ಯಾಸ (ರಿಹರ್ಸಲ್) ಅರಮನೆಯಂಗಳದಲ್ಲಿ ನಡೆಸಲಾಗುತ್ತಿದೆ. ಅಭಿಮನ್ಯುಗೆ ಇಂದು ಕೂಡ ಮರದ ಅಂಬಾರಿ ಹೊರಿಸದೇ ರಿಹರ್ಸಲ್ ನಡೆಸಲಾಗುತ್ತಿದೆ.

ಅರಮನೆ ಆವರಣದಲ್ಲಿ ಪುಷ್ಪಾರ್ಚನೆ‌ ನಡೆಸಲಾಗುತ್ತಿದ್ದು, ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆ ಭಾಗಿಯಾಗಿದೆ. ಮೆರವಣಿಗೆಯ ದೂರ ಹಾಗೂ ಸಮಯ ಪಾಲಿಸುವ ಕುರಿತು ತಾಲೀಮು ನಡೆಸಲಾಗುತ್ತಿದೆ. ಈ ತಾಲೀಮಿನಲ್ಲಿ ಗಜಪಡೆ ಜೊತೆಗೆ ಅಶ್ವದಳವೂ ಭಾಗಿಯಾಗಿದೆ. ಪೋಲಿಸ್ ಆಯುಕ್ತ ಡಾ ಚಂದ್ರಗುಪ್ತ, ಡಿಸಿಎಫ್ ಕರಿಕಾಳನ್ ಸೇರಿದಂತೆ ಇತರರು ಭಾಗಿಯಾಗಿದ್ದಾರೆ.

ಇದನ್ನೂ ಓದಿ: Coal Crisis : ಕರ್ನಾಟಕಕ್ಕೆ ಆವರಿಸುತ್ತಾ ಕತ್ತಲು : ಇನ್ನೆರಡು ದಿನದಲ್ಲಿವಿದ್ಯುತ್ ಸ್ಥಾವರಗಳಲ್ಲಿನ ಕಲ್ಲಿದ್ದಲು ಖಾಲಿ

ಶ್ರೀರಂಗಪಟ್ಟಣದಲ್ಲಿ ಪಟಾಕಿ ಮತ್ತು ಕಲರ್ ಪೇಪರ್ ಕಣ್ಣಿಗೆ ಬಿದ್ದು ಬೆದರಿದ್ದಂತ ಗೋಪಾಲಸ್ವಾಮಿ ಆನೆ ಕೂಡ ಈ ಬಾರಿಯ ಮೈಸೂರು ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ಇರಲಿದೆ. ಗೋಪಾಲಸ್ವಾಮಿ 10 ವರ್ಷದಿಂದ ಮೆರವಣಿಗೆಯಲ್ಲಿ ಭಾಗವಹಿಸಿದ್ದಾನೆ.

ಗೋಪಾಲಸ್ವಾಮಿ ಅನುಭವಿ ಆನೆಯಾಗಿದೆ. ಒಂದು ಘಟನೆ ಇಟ್ಟುಕೊಂಡು ಆನೆಯನ್ನು ದೂರಲು ಸಾಧ್ಯವಿಲ್ಲ. ಜಂಬೂ ಸವಾರಿಯಲ್ಲಿ ಆರು ಆನೆಗಳು ಭಾಗವಹಿಸುತ್ತವೆ. ಮೊದಲ ಬಾರಿ ಬಂದಿರುವ ಅಶ್ವತ್ಥಾಮ ಭಾಗವಹಿಸುತ್ತಾನೆ. ಮೈಸೂರು ನಗರ ಪ್ರದೇಶದ ವಾತಾವರಣಕ್ಕೆ ಹೊಸ ಆನೆಗಳು ಹೊಂದಿಕೊಂಡಿವೆ.

ಇದನ್ನೂ ಓದಿ: 1000 Rs Murder : ಕೇವಲ ಸಾವಿರ ರೂಪಾಯಿಗೆ ಸ್ನೇಹಿತನ ಕೊಲೆ

ಈ ಕುರಿತು ಮಾಹಿತಿ ನೀಡಿದಂತ ಡಿಸಿಎಫ್ ಕರಿಕಾಳನ್, ನಾಳೆ ಗುರುವಾರ ಮಧ್ಯರಾತ್ರಿಯಿಂದಲೇ ಆನೆಗಳಿಗೆ ಅಲಂಕಾರ ಆರಂಭಿಸುತ್ತೇವೆ. ವಿಜಯದಶಮಿಯ ದಿನ ಮಧ್ಯಾಹ್ನ 2.30ಕ್ಕೆ ಚಿನ್ನದ ಅಂಬಾರಿ ಕಟ್ಟುವ ಕಾರ್ಯ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.

(Abhimanya workout for Mysore Dussehra Jamboosavari)

Comments are closed.