Bengaluru Bulls vs Bengal warriors : ಬೆಂಗಾಲ್ ವಿರುದ್ಧ ಬೆಂಗಳೂರು ಬುಲ್ಸ್‌ಗೆ ಸೋಲು, ಜೈಪುರ ವಿರುದ್ಧ ಗೆದ್ದ ಪುಣೇರಿ ಪಲ್ಟನ್

ಹೈದರಾಬಾದ್ : ಸತತ ಗೆಲುವುಗಳೊಂದಿಗೆ ಅಬ್ಬರಿಸುತ್ತಿದ್ದ ಬೆಂಗಳೂರು ಬುಲ್ಸ್ ತಂಡ, (Pro Kabaddi League) ಪ್ರೊ ಕಬಡ್ಡಿ ಲೀಗ್ 9ನೇ ಆವೃತ್ತಿಯಲ್ಲಿ ಸತತ 2ನೇ ಸೋಲು (Bengaluru Bulls vs Bengal warriors) ಕಂಡಿದೆ. ಹೈದರಾಬಾದ್’ನ ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ಬುಧವಾರ ನಡೆದ 97ನೇ ಲೀಗ್ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್, ಬೆಂಗಳೂರು ಬುಲ್ಸ್’ಗೆ 41-38ರ ಅಂತರದಲ್ಲಿ ಸೋಲುಣಿಸಿತು. ಕಳೆದ ಪಂದ್ಯದಲ್ಲಿ ಪುಣೇರಿ ಪಲ್ಟನ್ ವಿರುದ್ಧ 33-35ರಲ್ಲಿ ಸೋತಿದ್ದ ಬೆಂಗಳೂರು ಬುಲ್ಸ್, ಬೆಂಗಾಲ್ ವಾರಿಯರ್ಸ್ ವಿರುದ್ಧ ಗೆಲ್ಲುವ ಅವಕಾಶವನ್ನು ಕೈಚೆಲ್ ಸತತ 2ನೇ ಸೋಲು ಅನುಭವಿಸಿತು.

ಬೆಂಗಳೂರು ಬುಲ್ಸ್ ಪರ ಭರತ್ ಹೂಡ ಸೂಪರ್-10 ಸಾಧನೆ ಮಾಡಿದರೂ ತಂಡದ ಸೋಲನ್ನು ತಪ್ಪಿಸಲಾಗಲಿಲ್ಲ. ಬೆಂಗಾಲ್ ವಾರಿಯರ್ಸ್ ಪರ ನಾಯಕ ಮಣಿಂದರ್ ಸಿಂಗ್ 12 ರೇಡ್ ಪಾಯಿಂಟ್ಸ್ ಗಳಿಸಿ ತಂಡಕ್ಕೆ 8ನೇ ಗೆಲುವು ತಂದುಕೊಟ್ಟರು. ಈ ಗೆಲುವಿನೊಂದಿಗೆ ಅಂಕ ಗಳಿಕೆಯನ್ನು 48ಕ್ಕೆ ಏರಿಸಿಕೊಂಡ ಬೆಂಗಾಲ್ ಪಾಯಿಂಟ್ ಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದ್ರೆ, ಲೀಗ್’ನಲ್ಲಿ 6ನೇ ಸೋಲು ಕಂಡ ಬೆಂಗಳೂರು 58 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿ ಮುಂದುವರಿಯಿತು.

ದಿನದ ಮತ್ತೊಂದು ಪಂದ್ಯದಲ್ಲಿ ಟೇಬಲ್ ಟಾಪರ್ ಪುಣೇರಿ ಪಲ್ಟನ್, ಮೊದಲ ಆವೃತ್ತಿಯ ಚಾಂಪಿಯನ್ ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ 39-32ರಲ್ಲಿ ಗೆದ್ದು ಲೀಗ್’ನಲ್ಲಿ 11ನೇ ಗೆಲುವು ತನ್ನದಾಗಿಸಿಕೊಂಡಿತು. ಒಟ್ಟಾರೆ 64 ಅಂಕ ಗಳಿಸಿರುವ ಪುಣೇರಿ ಪಲ್ಟನ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಮತ್ತಷ್ಟು ಭದ್ರ ಪಡಿಸಿಕೊಂಡಿದೆ. ಜೈಪುರ ಪಿಂಕ್ ಪ್ಯಾಂಥರ್ಸ್ ಪರ ಯುವ ರೇಡರ್ ಅರ್ಜುನ್ ದೇಶ್ವಾಲ್ 19 ರೇಡ್ ಪಾಯಿಂಟ್ಸ್ ಗಳಿಸಿ ಏಕಾಂಗಿ ಹೋರಾಟ ನಡೆಸಿದ್ರೆ, ಪುಣೇರಿ ಪಲ್ಟನ್ ಪರ ಯುವ ರೇಡರ್’ಗಳಾದ ಆಕಾಶ್ ಶಿಂಧೆ 6 ಅಂಕ, ಮೋಹಿತ್ ಗೊಯಾಟ್ 7 ಅಂಕ ಹಾಗೂ ಅಸ್ಲಾಂ ಇನಾಮ್ದಾರ್ 9 ಅಂಕಗಳನ್ನು ಗಳಿಸಿ ಪಲ್ಟನ್ ಗೆಲುವಿಗೆ ಕಾರಣರಾದರು. ಪ್ರೊ ಕಬಡ್ಡಿ ಲೀಗ್’ಗೆ ಗುರುವಾರ ವಿರಾಮದ ದಿನವಾಗಿದ್ದು ಶುಕ್ರವಾರ ಮೂರು ಪಂದ್ಯಗಳು ನಡೆಯಲಿವೆ.

Bengaluru Bulls vs Bengal warriors : ಪ್ರೊ ಕಬಡ್ಡಿ ಲೀಗ್-9: ಶುಕ್ರವಾರದ ಪಂದ್ಯಗಳು

  1. ಗುಜರಾತ್ ಜೈಂಟ್ಸ್ Vs ದಬಾಂಗ್ ಡೆಲ್ಲಿ ಕೆ.ಸಿ
  2. ಜೈಪುರ ಪಿಂಕ್ ಪ್ಯಾಂಥರ್ಸ್ Vs ತಮಿಳ್ ತಲೈವಾಸ್
  3. ಹರ್ಯಾಣ ಸ್ಟೀಲರ್ಸ್ Vs ಪಾಟ್ನಾ ಪೈರೇಟ್ಸ್

ಇದನ್ನೂ ಓದಿ : Pro Kabaddi League: ಇಂದು “ತ್ರಿಪಲ್ ಪಂಗಾ”, ಸತತ 6ನೇ ಸೋಲಿನ ಭೀತಿಯಲ್ಲಿ ಹಾಲಿ ಚಾಂಪಿಯನ್ಸ್ ದಬಾಂಗ್ ಡೆಲ್ಲಿ

ಇದನ್ನೂ ಓದಿ : Pro Kabaddi League-9 : ಕೆಂಪುಗೂಳಿಗಳ ಗೆಲುವಿನ ಓಟಕ್ಕಿಲ್ಲ ಬ್ರೇಕ್, 5 ಪಂದ್ಯಗಳಿಂದ ಬೆಂಗಳೂರು ಬುಲ್ಸ್ ಅಜೇಯ

ಇದನ್ನೂ ಓದಿ : Pro Kabaddi League: ದಕ್ಷಿಣ ಭಾರತ ಡರ್ಬಿಯಲ್ಲಿ ತಲೈವಾಸ್ ವಿರುದ್ಧ ಗೆದ್ದರೆ ಬೆಂಗಳೂರು ಬುಲ್ಸ್ ಟೇಬಲ್ ಟಾಪರ್

ಸ್ಥಳ: ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣ, ಹೈದರಾಬಾದ್
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್
ಲೈವ್ ಸ್ಟ್ರೀಮಿಂಗ್: ಡಿಸ್ನಿ+ಹಾಟ್ ಸ್ಟಾರ್

Bengaluru Bulls vs Bengal warriors : Bengaluru Bulls lose against Bengal, Puneri Paltan win against Jaipur

Comments are closed.