BCCI sackc selection: ಟಿ20 ವಿಶ್ವಕಪ್ ವೈಫಲ್ಯಕ್ಕೆ ತಲೆದಂಡ, ಆಯ್ಕೆ ಸಮಿತಿಯನ್ನೇ ಡಿಸ್ಮಿಸ್ ಮಾಡಿದ ಬಿಸಿಸಿಐ

ಮುಂಬೈ: (BCCI sackc selection) ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ವೈಫಲ್ಯದ ಹಿನ್ನೆಲೆಯಲ್ಲಿ ಬಿಸಿಸಿಐ ಪೋಸ್ಟ್ ಮಾರ್ಟಮ್ ಆರಂಭಿಸಿದೆ. ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಸೆಮಿಫೈನಲ್’ನಲ್ಲಿ ಇಂಗ್ಲೆಂಡ್ ವಿರುದ್ಧ 10 ವಿಕೆಟ್’ಗಳ ಹೀನಾಯ ಸೋಲು ಕಂಡಿತ್ತು. ಆ ಸೋಲಿಗೆ ಮೊದಲ ತಲೆದಂಡವಾಗಿದೆ. ಭಾರತ ತಂಡದ ವೈಫಲ್ಯಕ್ಕೆ ಅಸಮರ್ಪಕ ಆಯ್ಕೆ ಕೂಡ ಕಾರಣ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಸೀನಿಯರ್ ಸೆಲೆಕ್ಷನ್ ಕಮಿಟಿಯನ್ನೇ ಬಿಸಿಸಿಐ ವಜಾ ಮಾಡಿದೆ. ಆಯ್ಕೆ ಸಮಿತಿ ಮುಖ್ಯಸ್ಥ ಚೇತನ್ ಶರ್ಮಾ ಸೇರಿದಂತೆ ಸಂಪೂರ್ಣ ಸಮಿತಿಯನ್ನೇ ಬಿಸಿಸಿಐ ಡಿಸ್ಮಿಸ್ ಮಾಡಿದೆ. ಹೊಸ ಆಯ್ಕೆ ಸಮಿತಿ ರಚಿಸಲು ಬಿಸಿಸಿಐ ಅರ್ಜಿ ಅಹ್ವಾನಿಸಿದೆ.

ಆಯ್ಕೆ ಸಮಿತಿಯ ಮುಖ್ಯಸ್ಥ ಚೇತನ್ ಶರ್ಮಾ (Chetan Sharma), ಸದಸ್ಯರಾದ ಕರ್ನಾಟಕದ ಸುನೀಲ್ ಜೋಶಿ (Sunil Joshi), ಒಡಿಶಾದ ದೇಬಾಶಿಶ್ ಮೊಹಂತಿ ಮತ್ತು ಪಂಜಾಬ್’ನ ಹರ್ವಿಂದರ್ ಸಿಂಗ್ ಹಾಲಿ ಆಯ್ಕೆ ಸಮಿತಿಯಲ್ಲಿದ್ದರು. ಇವರ ಜೊತೆ ಯಾವ ಮಾತುಕತೆಯನ್ನೂ ನಡೆಸದೆ ಏಕಾಏಕಿ ಆಯ್ಕೆ ಸಮಿತಿಯನ್ನೇ ಬಿಸಿಸಿಐ(BCCI sackc selection) ವಜಾ ಮಾಡಿದೆ. ಇದು ಬಿಸಿಸಿಐನಲ್ಲಿ ರೋಜರ್ ಬಿನ್ನಿ ನೇತೃತ್ವದ ಆಡಳಿತ ಮಂಡಳಿ ತೆಗೆದುಕೊಂಡ ಮೊದಲ ದೊಡ್ಡ ನಿರ್ಧಾರವಾಗಿದೆ.

ಇದನ್ನೂ ಓದಿ : Wimbledon dress code: ವಿಂಬಲ್ಡನ್ ಆಡುವ ಮಹಿಳಾ ಆಟಗಾರ್ತಿಯರಿಗೆ ಬಿಗ್ ರಿಲೀಫ್; ಡ್ರೆಸ್ ಕೋಡ್ ನಿಯಮದಲ್ಲಿ ಬದಲಾವಣೆ

ಇದನ್ನೂ ಓದಿ : India Vs New Zeeland match cancelled: ಭಾರತ Vs ನ್ಯೂಜಿಲೆಂಡ್ ಟಿ20 ಸರಣಿ: ಮೊದಲ ಪಂದ್ಯ ಮಳೆಯಿಂದ ರದ್ದು

ಇದನ್ನೂ ಓದಿ : Pandya T20 captain: ಭಾರತ ಟಿ20 ತಂಡದ ನಾಯಕತ್ವದಿಂದ ರೋಹಿತ್’ಗೆ ಕೊಕ್, ಹಾರ್ದಿಕ್ ಪಾಂಡ್ಯ ಹೊಸ ಕ್ಯಾಪ್ಟನ್

ಐದು ಮಂದಿ ಸದಸ್ಯರ ಹೊಸ ಆಯ್ಕೆ ಸಮಿತಿಗೆ ಬಿಸಿಸಿಐ ಅರ್ಜಿ ಆಹ್ವಾನಿಸಿದ್ದು, ಆಸಕ್ತರು ನವೆಂಬರ್ 28ರ ಒಳಗೆ ಅರ್ಜಿ ಸಲ್ಲಿಸಬೇಕಿದೆ. ಅದಕ್ಕಾಗಿ ಕೆಲ ಮಾನದಂಡಗಳನ್ನು ಬಿಸಿಸಿಐ ನಿಗದಿ ಪಡಿಸಿದೆ.

ಬಿಸಿಸಿಐ ಆಯ್ಕೆ ಸಮಿತಿಗೆ ಅರ್ಜಿ ಸಲ್ಲಿಸಲು ಮಾನದಂಡಗಳು

  1. ಕನಿಷ್ಠ ಏಳು ಟೆಸ್ಟ್ ಪಂದ್ಯಗಳನ್ನು ಆಡಿರಬೇಕು.
  2. ಅಥವಾ ಕನಿಷ್ಠ 30 ಪ್ರಥಮದರ್ಜೆ ಪಂದ್ಯಗಳನ್ನು ಆಡಿರಬೇಕು.
  3. ಅಥವಾ ಕನಿಷ್ಠ 10 ಏಕದಿನ ಅಂತಾರಾಷ್ಟ್ರೀಯ ಮತ್ತು 20 ಪ್ರಥಮದರ್ಜೆ ಪಂದ್ಯಗಳನ್ನು ಆಡಿರಬೇಕು.
  4. ಕ್ರಿಕೆಟ್’ನಿಂದ ನಿವೃತ್ತಿಯಾಗಿ ಕನಿಷ್ಠ 5 ವರ್ಷಗಳು ಪೂರ್ಣಗೊಂಡಿರಬೇಕು.
  5. ಬಿಸಿಸಿಐನ ಕ್ರಿಕೆಟ್ ಸಮಿತಿಗಳಲ್ಲಿ ಈ ಹಿಂದೆ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿರಬಾರದು.

(BCCI sackc selection) BCCI has started a post mortem in the wake of the failure of the Indian team in the ICC T20 World Cup tournament. In the T20 World Cup tournament, India suffered a crushing defeat by 10 wickets against England in the semi-finals. That defeat is the first beheading. The BCCI has dismissed the senior selection committee after hearing allegations that improper selection was also the reason for the failure of the Indian team.

Comments are closed.