ವಿಶ್ವ ಜಂಪ್-ರೋಪ್ ಚಾಂಪಿಯನ್‌ಶಿಪ್‌ನಲ್ಲಿ ವಿಶ್ವ ದಾಖಲೆ ಮುರಿದ ಚೀನಾದ ವ್ಯಕ್ತಿ !

ಜಪಾನಿನಲ್ಲಿ ನಡೆದ 2025 ರ ವಿಶ್ವ ಜಂಪ್-ರೋಪ್ ಚಾಂಪಿಯನ್ ಶಿಪ್ ( ಹಗ್ಗ ಜಿಗಿತ) ದಾಖಲೆಯನ್ನು ಮುರಿದು ಚೀನಾದ ಜಂಪ್ ರೋಪರ್ ಹೊಸ ದಾಖಲೆ ಬರೆದಿದ್ದಾರೆ. ಸೆನ್ ಕ್ಸಿಯಾಲಿನ್ ಅನ್ನೋ ಚೀನಾದ ವ್ಯಕ್ತಿ ಕೇವಲ 30 ಸೆಕೆಂಡುಗಳಲ್ಲಿ 238 ಸಿಂಗಲ್-ಅಂಡರ್ಗಳೊಂದಿಗೆ ವಿಶ್ವ ದಾಖಲೆಯನ್ನು ಮುರಿದು ಇತಿಹಾಸ ನಿರ್ಮಿಸಿದ್ದಾರೆ.
ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಅವರ ಪ್ರದರ್ಶನದ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ನೆಟ್ಟಿಗರು ಈ ವಿಡಿಯೊದಲ್ಲಿ ಹಿಂದೆಂದೂ ನೋಡಿರದ ಅವರ ಕೌಶಲ್ಯವನ್ನು ನೋಡಿ ಬೆರಗಾಗಿದ್ದಾರೆ.
ಸೆನ್ ಕ್ಸಿಯಾಲಿನ್ ವಿಶ್ವದ ಅತ್ಯಂತ ವೇಗದ ಜಂಪ್ ರೋಪರ್ ಎಂದು ಪ್ರಸಿದ್ಧರಾಗಿದ್ದಾರೆ. ಇದಕ್ಕೂ ಮೊದಲು, ಅವರು 30 ಸೆಕೆಂಡುಗಳ ಅದೇ ವಿಭಾಗದಲ್ಲಿ ಹಗ್ಗ ಜಿಗಿತದಲ್ಲಿ ತಮ್ಮ ದಾಖಲೆಗಳನ್ನು ಮುರಿಯುವ ಬಗ್ಗೆ ಮಾತನಾಡಿದ್ದರು.
ಈ ಬಾರಿ ಅವರು ಕೇವಲ 30 ಸೆಕೆಂಡುಗಳಲ್ಲಿ 228 ಜಿಗಿತಗಳನ್ನು ಗಳಿಸಿದ ಹಿಂದಿನ ದಾಖಲೆಯನ್ನು 238 ಕ್ಕೆ ಏರಿಸಿದ್ದಾರೆ. ಈ ವಿಡಿಯೊವನ್ನು ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡಲಾಗಿದ್ದು, ಇದು 21 ಸಾವಿರಕ್ಕೂ ಹೆಚ್ಚು ವ್ಯೂವ್ಸ್ ಪಡೆದುಕೊಂಡಿದೆ.
ಇದನ್ನೂ ಓದಿ : ಐಪಿಎಲ್ 2026 : ಕೆಕೆಆರ್ ತಂಡಕ್ಕೆ ಕೆಎಲ್ ರಾಹುಲ್ ನಾಯಕ
ಯಾರು ಈ ಸೆನ್ ಕ್ಸಿಯಾಲಿನ್ ?
ಸೆನ್ ಕ್ಸಿಯಾಲಿನ್ ದಕ್ಷಿಣ ಚೀನಾದ ಗುವಾಂಗ್ಡಾಂಗ್ ಪ್ರಾಂತ್ಯದ ರಾಜಧಾನಿ ಗುವಾಂಗ್ಝೌ ನಗರದ ಹುವಾಡು ಜಿಲ್ಲೆಯ ನಿವಾಸಿಯಾಗಿದ್ದಾರೆ. ಅವರು 2004 ರಲ್ಲಿ ಜನಿಸಿದರು ಮತ್ತು ನವೆಂಬರ್ 2015 ರಲ್ಲಿ ನಡೆದ ಮೊದಲ ವಿಶ್ವ ಅಂತರ-ಶಾಲಾ ರೋಪ್ ಸ್ಕಿಪ್ಪಿಂಗ್ ಚಾಂಪಿಯನ್ಶಿಪ್ನಲ್ಲಿ ಎರಡು ವಿಶ್ವ ದಾಖಲೆಗಳನ್ನು ಮುರಿದರು.
ಆಗ ಅವರು ಕೇವಲ 11 ವರ್ಷ ವಯಸ್ಸಿನವರಾಗಿದ್ದರು. ಅವರು 30 ಸೆಕೆಂಡುಗಳ ಸಿಂಗಲ್ ರೋಪ್ ಸ್ಪೀಡ್ ಈವೆಂಟ್ನಲ್ಲಿ ಎಲ್ಲರನ್ನು ಬೆರಗುಗೊಳಿಸುವಂತೆ 220 ಜಿಗಿತಗಳನ್ನು ಮತ್ತು 3 ನಿಮಿಷಗಳ ಸಿಂಗಲ್ ರೋಪ್ ಎಂಡ್ಯೂರೆನ್ಸ್ ಈವೆಂಟ್ನಲ್ಲಿ 548 ಜಿಗಿತಗಳನ್ನು ಸಾಧಿಸಿದರು.
ಇಲ್ಲಿಯವರೆಗೆ ನಿರಂತರವಾಗಿ 220 ಜಂಪ್‌ಗಳಿಂದ 222, 226, 228, 230 ಮತ್ತು ಈಗ 238 ಜಂಪ್‌ಗಳವರೆಗೆ ತಮ್ಮ ದಾಖಲೆಗಳನ್ನು ಮುರಿದಿದ್ದಾರೆ. ಸೆನ್ ಹಲವಾರು ಚಾಂಪಿಯನ್‌ಶಿಪ್‌ಗಳನ್ನು ಗೆದ್ದಿದ್ದಾರೆ. ಮತ್ತು 3-ನಿಮಿಷದ ಸಿಂಗಲ್ ರೋಪ್, 30-ಸೆಕೆಂಡ್ ಸಿಂಗಲ್ ರೋಪ್, 2×30-ಸೆಕೆಂಡ್ ಡಬಲ್ ಅಂಡರ್ಸ್, 4×30-ಸೆಕೆಂಡ್ ಡಬಲ್ ಡಚ್ ಮತ್ತು 60-ಸೆಕೆಂಡ್ ಡಬಲ್ ಡಚ್ನಂತಹ ಈವೆಂಟ್‌ನಲ್ಲಿ ಅನೇಕ ವಿಶ್ವ ದಾಖಲೆಗಳನ್ನು ಮುರಿದಿದ್ದಾರೆ.
ಇದನ್ನೂ ಓದಿ : ಬೆಂಗಳೂರು ತಂಡದ ಪರ ಆಡೋದಿಲ್ಲ ವಿರಾಟ್ ಕೊಹ್ಲಿ
Chinese man breaks world record at World Jump-Rope Championship



