Gopalakrishna Nairy: ರಾಷ್ಟ್ರೀಯ ರಂಗ ನಿರ್ದೇಶಕ ಗೋಪಾಲಕೃಷ್ಣ ನಾಯರಿ ನಿಧನ

ಮಂಗಳೂರು: (Gopalakrishna Nairy) ಕನ್ನಡ ರಂಗಭೂಮಿಯ ಹಿರಿಯ ರಂಗ ನಿರ್ದೇಶಕರಾದ ಗೋಪಾಲಕೃಷ್ಣ ನಾಯರಿ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಮಂಗಳ ಆಸ್ಪತ್ರೆಯಲ್ಲಿ ಶುಕ್ರವಾರ ಬೆಳಿಗ್ಗೆ ಸಾವನ್ನಪ್ಪಿದ್ದಾರೆ.

ಕೆಲವು ಸಮಯಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ನಾಯರಿ (Gopalakrishna Nairy) ಅವರು ಮಂಗಳೂರಿನ ಮಂಗಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಬೆಳಿಗ್ಗೆ ಸುಮಾರು 5:30 ರ ಹೊತ್ತಿಗೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಶುಕ್ರವಾರ ಮಧ್ಯಾಹ್ನ ಹನ್ನೆರಡು ಗಂಟೆಯ ಹೊತ್ತಿಗೆ ಸಾಲಿಗ್ರಾಮದ ಕಾರ್ಕಡದ;ಲ್ಲಿ ಅವರ ಅತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಕನ್ನಡ ರಂಗಭೂಮಿಯ ಹಿರಿಯ ರಂಗ ನಿರ್ದೇಶಕರಾದ ಇವರು ತನ್ನದೇ ಆದ ವಿಶಿಷ್ಟ ರೀತಿಯ ನಾಟಕಗಳಿಗೆ ನಿರ್ದೇಶನ ಮಾಡಿ ಹೆಸರುವಾಸಿಯಾಗಿದ್ದಾರೆ. ನಾಯರಿ ಅವರು ಎನ್‌ ಎಸ್‌ ಡಿಯಲ್ಲಿ ತರಬೇತಿ ಪಡೆದು ಬಳಿಕ ನಾಗೇಸ್‌ ನಿರ್ದೇಶನದ ತಾಮ್ರಪತ್ರ ನಾಟಕದಲ್ಲಿ ಮುಖ್ಯಪಾತ್ರದಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದರು. ನಂತರದಲ್ಲಿ ಗಂಗಾಧರ ಸ್ವಾಮಿ ನಿರ್ದೇಶನದ ಸಮುದಾಯದಲ್ಲಿ ಕೊಂದು ಕೂಗಿತ್ತು ನೋಡಾ ಎಂಬ ನಾಟಕದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು.

ಬೆಂಗಳೂರು ಮತ್ತು ತುಮಕೂರಿನ ನಾಟಕ ಮನೆ ಜೊತೆಗೆ ಗಾಢ ಸಂಬಂಧ ಇಟ್ಟುಕೊಂಡಿದ್ದ ನಾಯರಿ ಅವರು ಭಾಸನ ನಾಟಕಗಳಿಗೆ ಹೆಸರುವಾಸಿಯಾಗಿದ್ದರು. ಅಲ್ಲದೇ ಬೆಂಗಳೂರಿನ ಎನ್‌ ಎಸ್‌ ಡಿ ಗೆ ಕೆಲವು ಕಾರ್ಯಗಾರಗಳನ್ನು ಹಾಗೂ ಕೆಲವು ನಾಟಕಗಳನ್ನು ನಿರ್ದೇಶನ ಮಾಡಿದ್ದರು. ಇವರು ಬಹಳ ಗಂಭೀರ ಸ್ವಭಾವದವರಾಗಿದ್ದು, ಕನ್ನಡ ರಂಗಭೂಮಿಯಲ್ಲಿ ವಿಭಿನ್ನವಾಗಿ ಗುರುತಿಸಿಕೊಂಡಿದ್ದ ಒಬ್ಬ ಶ್ರೇಷ್ಠ ವ್ಯಕ್ತಿತ್ವವನ್ನು ಹೊಂದಿದ ರಂಗ ನಿರ್ದೇಶಕ ಹಾಗೂ ನಟ.

ಇದನ್ನೂ ಓದಿ : Kaavi art revival: ಕಾವಿ ಕಲೆಗೆ ಪುನರುಜ್ಜೀವನ : ಕದಿಕೆ ಟ್ರಸ್ಟ್‌ ಜೊತೆ ಕೈ ಜೋಡಿಸಿದ ವಿಶ್ವ ಕೊಂಕಣಿ ಕೇಂದ್ರ

ಇದನ್ನೂ ಓದಿ : High tech bus stand: ರಾಜ್ಯದ ಮೊದಲ ಹೈಟೆಕ್‌ ಬಸ್‌ ನಿಲ್ದಾಣ ಸುರತ್ಕಲ್‌ ನಲ್ಲಿ ಪ್ರಾರಂಭ

Gopalakrishna Nayari, a senior stage director of Kannada theatre, died on Friday morning at Mangal Hospital in Mangalore after he was suffering from ill health.

Comments are closed.