Fans angry on Bumrah: “ಐಪಿಎಲ್’ಗೆ ಸದಾ ರೆಡಿ.. ವಿಶ್ವಕಪ್ ಬಂದ್ರೆ ಹೊರ ನಡಿ ; ಬುಮ್ರಾ ವಿರುದ್ಧ ಕ್ರಿಕೆಟ್ ಪ್ರಿಯರು ಫುಲ್ ಗರಂ

ಬೆಂಗಳೂರು: ಐಸಿಸಿ ಟಿ20 ವಿಶ್ವಕಪ್’ನಲ್ಲಿ ಆಡಬೇಕಿದ್ದ ಟೀಮ್ ಇಂಡಿಯಾದ ಪ್ರೀಮಿಯಂ ಫಾಸ್ಟ್ ಬೌಲರ್ ಜಸ್ಪ್ರೀತ್ ಬುಮ್ರಾ (Jasprit Bumrah T20 World Cup) ಬೆನ್ನು ನೋವಿನ ಗಾಯದ ಕಾರಣ ವಿಶ್ವಕಪ್ ಟೂರ್ನಿಯಿಂದ ( ICC T20 World Cup) ಹೊರ ಬಿದ್ದಿದ್ದಾರೆ.

ಗಾಯದ ಕಾರಣ ಇಂಗ್ಲೆಂಡ್ ಪ್ರವಾಸದ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್’ನಿಂದ ದೂರ ಉಳಿದಿದ್ದ ಜಸ್ಪ್ರೀತ್ ಬುಮ್ರಾ, ಇತ್ತೀಚೆಗೆಷ್ಟೇ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯ ಮೂಲಕ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡಿದ್ದರು. ಆದರೆ ಕೇವಲ 2 ಪಂದ್ಯಗಳನ್ನಾಡುವಷ್ಟರಲ್ಲಿ ಬುಮ್ರಾ ಮತ್ತೆ ಗಾಯಕ್ಕೊಳಗಾಗಿ ಟಿ20 ವಿಶ್ವಕಪ್’ನಿಂದಲೇ ಹೊರ ಬಿದ್ದಿದ್ದಾರೆ. ವಿಶ್ವಕಪ್ ಹೊಸ್ತಿಲಲ್ಲೇ ಟೀಮ್ ಇಂಡಿಯಾದ ಪ್ರಮುಖ ವೇಗಿ ಬುಮ್ರಾ ಗಾಯಕ್ಕೊಳಗಾಗಿ ಟೂರ್ನಿಗೆ ಅಲಭ್ಯರಾಗಿರುವುದು ಕ್ರಿಕೆಟ್ ಪ್ರಿಯರ ಪಿತ್ತ ನೆತ್ತಿಗೇರುವಂತೆ ಮಾಡಿದೆ. “ಐಪಿಎಲ್ ಸಂದರ್ಭದಲ್ಲಿ ಇವರಿಗೆ ಯಾವ ಗಾಯವೂ ಇರುವುದಿಲ್ಲ. ದೇಶದ ಪರ ಆಡುವ ಸಂದರ್ಭ ಎದುರಾದಾಗ ಎಲ್ಲಾ ಗಾಯಗಳು ಒಟ್ಟೊಟ್ಟಿಗೇ ಕಾಣಿಸಿಕೊಳ್ಳುತ್ತವೆ. ಮುಂದಿನ ಐಪಿಎಲ್ ಹೊತ್ತಿಗೆ ಎಲ್ಲಾ ಗಾಯಗಳು ಮಾಯವಾಗುತ್ತವೆ” ಎಂದು ಬುಮ್ರಾ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕಿಡಿ ಕಾರುತ್ತಿದ್ದಾರೆ.

28 ವರ್ಷದ ಬಲಗೈ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ, ಈ ವರ್ಷ 5 ಟೆಸ್ಟ್, 5 ಏಕದಿನ ಹಾಗೂ 5 ಟಿ20 ಪಂದ್ಯಗಳು ಸೇರಿದಂತೆ ಕೇವಲ 15 ಅಂತಾರಾಷ್ಟ್ರೀಯ ಪಂದ್ಯಗಳನ್ನಷ್ಟೇ ಆಡಿದ್ದಾರೆ. ಆದರೆ ಈ ವರ್ಷದ ಐಪಿಎಲ್ ಟೂರ್ನಿಯಲ್ಲಿ ಬುಮ್ರಾ ಕೇವಲ ಒಂದೂವರೆ ತಿಂಗಳ ಅವಧಿಯಲ್ಲಿ ಸತತ 14 ಪಂದ್ಯಗಳನ್ನಾಡಿದ್ದರು. ಐಪಿಎಲ್-2022 ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಪರ 14 ಪಂದ್ಯಗಳನ್ನಾಡಿದ್ದ ಬುಮ್ರಾ ಒಟ್ಟು 53.2 ಓವರ್ ಬೌಲಿಂಗ್ ಮಾಡಿ 15 ವಿಕೆಟ್ ಪಡೆದಿದ್ದರು. ಐಪಿಎಲ್’ನಲ್ಲಿ ಆಡುವಾಗ ಇಲ್ಲದ ಗಾಯ, ಈಗೇಕೆ ಎಂದು ಬುಮ್ರಾ ವಿರುದ್ಧ ಕ್ರಿಕೆಟ್ ಪ್ರಿಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ನಿಜವಾಯ್ತು ಅಖ್ತರ್ ನುಡಿದಿದ್ದ ಭವಿಷ್ಯ
ಜಸ್ಪ್ರೀತ್ ಬುಮ್ರಾ ಅವರಿಗೆ ಇನ್ನೊಂದೇ ವರ್ಷದಲ್ಲಿ ಗಂಭೀರ ಗಾಯದ ಸಮಸ್ಯೆ ಕಾಡಲಿದೆ ಎಂದು ಶೋಯೆಬ್ ಅಖ್ತರ್ 2021ರಲ್ಲಿ ಭವಿಷ್ಯ ನುಡಿದಿದ್ದರು. ಅದೀಗ ನಿಜವಾಗಿದೆ. ಖಾಸಗಿ ಸುದ್ದಿವಾಹಿತಿಯೊಂದಿಗೆ ಬುಮ್ರಾ ಅವರ ಬೌಲಿಂಗ್ action ಬಗ್ಗೆ ಮಾತನಾಡಿದ್ದ ಅಖ್ತರ್, ಇಂತಹ ಬೌಲಿಂಗ್ action ಆಟಗಾರರನ್ನು ಪದೇ ಪದೇ ಬೆನ್ನು ನೋವಿನ ಗಾಯಕ್ಕೀಡು ಮಾಡುತ್ತದೆ ಎಂದಿದ್ದರು.

“ಜಸ್ಪ್ರೀತ್ ಬುಮ್ರಾ ಅವರ ಬೌಲಿಂಗ್ action ದೇಹದ ಮುಂಭಾಗದ ಕ್ರಿಯೆಯ ಮೇಲೆಯೇ ಅವಲಂಬಿತವಾಗಿದೆ. ಇಂತಹ ಬೌಲಿಂಗ್ ಶೈಲಿ ಹೊಂದಿರುವವರು ಬೆನ್ನು ಮತ್ತು ಭುಜದ ಬಲದಿಂದಲೇ ಬೌಲಿಂಗ್ ಮಾಡಬೇಕು. ನಾವೆಲ್ಲಾ side-on ಶೈಲಿಯಲ್ಲಿ ಬೌಲಿಂಗ್ ಮಾಡುತ್ತಿದ್ದೆವು. ಅದು ಬೆನ್ನಿನ ಮೇಲೆ ಹೆಚ್ಚು ಒತ್ತಡ ಬೀಳುವುದನ್ನು ತಡಯುತ್ತದೆ. ಆದರೆ ಬುಮ್ರಾ ಬೌಲಿಂಗ್ ಶೈಲಿಯಲ್ಲಿ ಒತ್ತಡ ಸಂಪೂರ್ಣವಾಗಿ ಬೆನ್ನಿನ ಮೇಲೆಯೇ ಬೀಳುತ್ತದೆ. ವೆಸ್ಟ್ ಇಂಡೀಸ್’ನ ಇಯಾನ್ ಬಿಷಪ್, ನ್ಯೂಜಿಲೆಂಡ್’ನ ಶೇನ್ ಬಾಂಡ್ ಇದೇ ಶೈಲಿಯಲ್ಲಿ ಬೌಲಿಂಗ್ ಮಾಡುತ್ತಿದ್ದದ್ದನ್ನು ನೋಡಿದ್ದೇನೆ. ಇಬ್ಬರೂ ಬೆನ್ನು ನೋವಿನಿಂದ ಬಳಲಿದ್ದರು. ಬುಮ್ರಾ ಈಗ ತಮ್ಮ ವೃತ್ತಿಜೀವನದ ಬಗ್ಗೆ ಗಂಭೀರವಾಗಿ ಯೋಚಿಸಬೇಕಿದೆ. ಸರಣಿಯ ಎಲ್ಲಾ ಪಂದ್ಯಗಳನ್ನು ಆಡುವುದನ್ನು ಬಿಟ್ಟು, ಕೆಲ ಪಂದ್ಯಗಳಲ್ಲಷ್ಟೇ ಆಡಿ, ಸೂಕ್ತ ವಿರಾಮ ಪಡೆದುಕೊಳ್ಳಬೇಕಿದೆ. ವರ್ಷದಲ್ಲಿ ಎಲ್ಲಾ ಪಂದ್ಯಗಳನ್ನು ಆಡಿದರೆ, ನೆಲಕ್ಕೆ ಬೀಳುವುದರಲ್ಲಿ ಯಾವುದೇ ಅನುಮಾನವಿಲ್ಲ” ಎಂದು ಕಳೆದ ವರ್ಷ ಶೋಯೆಬ್ ಅಖ್ತರ್ ಹೇಳಿದ್ದರು. ಅಖ್ತರ್ ನುಡಿದಿದ್ದ ಭವಿಷ್ಯ ಈಗ ನಿಜವಾಗಿದೆ.

ಇದನ್ನೂ ಓದಿ : Siraj replaces Jasprit Bumrah: ಗಾಯಾಳು ಜಸ್ಪ್ರೀತ್ ಬುಮ್ರಾ ಬದಲು ಟೀಮ್ ಇಂಡಿಯಾ ಸೇರಿದ ಆರ್‌ಸಿಬಿ ವೇಗಿ ಸಿರಾಜ್

ಇದನ್ನೂ ಓದಿ : Dhoni vs Gambhir : ಧೋನಿ “ಓರಿಯೊ” ಅಂದ್ರೆ, ನಮ್ಮನೆ ನಾಯಿ ಓರಿಯೊ ಅಂದ್ರಲ್ಲಾ ಗಂಭೀರ್.. ಹೊಟ್ಟೆಕಿಚ್ಚಿನ ಮೊಟ್ಟೆಕೋಳಿಗೆ ಧೋನಿ ಮೇಲೇಕೆ ಇಷ್ಟೊಂದು ಕಿಚ್ಚು?

Always ready for IPL Walk out of ICC T20 World Cup Cricket lovers full swing against Jasprit Bumrah

Comments are closed.