Ashwin : ತಮಿಳುನಾಡಿನಲ್ಲಿ ಕ್ಲಬ್ ಕ್ರಿಕೆಟ್ ಆಡಿದ ಅಶ್ವಿನ್ : ದ್ರಾವಿಡ್ ಹಾದಿಯಲ್ಲಿ ಸ್ಪಿನ್ ಮಾಂತ್ರಿಕ

ಚೆನ್ನೈ: ಭಾರತ ತಂಡದ (India Cricket Team) ಪರ ಒಂದು ಮ್ಯಾಚ್ ಆಡಿದ್ರೆ ಸಾಕು ತುಂಬಾ ಮಂದಿ ಕ್ರಿಕೆಟಿಗರು ತಾವು ಬಂದ ಹಾದಿಯನ್ನೇ ಮರೆತು ಬಿಡ್ತಾರೆ. ಅದ್ರಲ್ಲೂ ಐಪಿಎಲ್ ಬಂದ ಮೇಲಂತೂ ಸಾಕಷ್ಟು ಕ್ರಿಕೆಟಿಗರಿಗೆ ಹಿಂದೆ ತಾವು ಏನಾಗಿದ್ದೆವು ಅನ್ನೋದೇ ಗೊತ್ತಿಲ್ಲ. ಆದರೆ ಟೀಮ್ ಇಂಡಿಯಾದ ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್ (Ravichandran Ashwin) ಹಾಗಲ್ಲ. ಟೆಸ್ಟ್ ಕ್ರಿಕೆಟ್’ನಲ್ಲಿ 442 ರನ್ ವಿಕೆಟ್ ಗಳಿಸಿದ ಮೇಲೂ ಅಶ್ವಿನ್ ತಾವು ಬಂದ ಹಾದಿಯನ್ನು ಮರೆತಿಲ್ಲ.

35 ವರ್ಷದ ರವಿಚಂದ್ರನ್ ಅಶ್ವಿನ್ ಭಾರತ ಪರ ಟೆಸ್ಟ್ ಕ್ರಿಕೆಟ್”ನಲ್ಲಿ ಅತೀ ಹೆಚ್ಚು ವಿಕೆಟ್ ಗಳಿಸಿದವರ ಸಾಲಿನಲ್ಲಿ 2ನೆಯವರು. ಇತ್ತೀಚೆಗಷ್ಟೇ ಮಾಜಿ ನಾಯಕ ಕಪಿಲ್ ದೇವ್ (kapil Dev) ದಾಖಲೆ ಮುರಿದಿರುವ ಅಶ್ವಿನ್, ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ (Anil Kumble) ನಂತರದ ಸ್ಥಾನದಲ್ಲಿದ್ದಾರೆ. ಏಕದಿನ ಕ್ರಿಕೆಟ್’ನಲ್ಲಿ 151 ವಿಕೆಟ್, ಅಂತರಾಷ್ಟ್ರೀಯ ಟಿ20ಯಲ್ಲಿ 61 ವಿಕೆಟ್. ಒಟ್ಟಾರೆ ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ 654 ವಿಕೆಟ್.

ಆಫ್ ಸ್ಪಿನ್ ಮಾಂತ್ರಿಕ ಅಶ್ವಿನ್ ಸದ್ಯ ಇಂಗ್ಲೆಂಡ್ (India Tour of England) ಪ್ರವಾಸಕ್ಕೆ ಸಜ್ಜಾಗುತ್ತಿದ್ದಾರೆ. ಹಾಗಾದ್ರೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯಕ್ಕೆ ಅಶ್ವಿನ್ ಸಿದ್ಧತೆ ಹೇಗಿದೆ ಗೊತ್ತಾ..? ಬಿಡುವಿನ ವೇಳೆ ಸಮಯ ವ್ಯರ್ಥ ಮಾಡಲು ಇಚ್ಛಿಸದ ಅಶ್ವಿನ್, ಚೆನ್ನೈನಲ್ಲಿ ಕ್ಲಬ್ ಕ್ರಿಕೆಟ್ (Club Cricket) ಆಡುತ್ತಿದ್ದಾರೆ. ಅಚ್ಚರಿಯಾದ್ರೂ ಇದು ಸತ್ಯ.

ರಣಜಿ ಟ್ರೋಫಿಗೆ ಪದಾರ್ಪಣೆ ಮಾಡುವ ಮುನ್ನ ಅಶ್ವಿನ್ ತಮಿಳುನಾಡು ಕ್ರಿಕೆಟ್ ಸಂಸ್ಥೆಯ ಫಸ್ಟ್ ಡಿವಿಜನ್ ಟೂರ್ನಿಯಲ್ಲಿ ಎಂಆರ್”ಸಿ (MRC) ಕ್ಲಬ್ ಪರ ಆಡುತ್ತಿದ್ದರು. ಈಗ ಮತ್ತೆ ಅದೇ ಕ್ಲಬ್ ಪರ ಕಣಕ್ಕಿಳಿದಿರುವ ಅಶ್ವಿನ್, ಕ್ಲಬ್ ಟೂರ್ನಿಯ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳಲ್ಲಿ ಆಡಲಿದ್ದಾರೆ. ಇತ್ತೀಚೆಗಷ್ಟೇ ಐಪಿಎಲ್ ಫೈನಲ್ ಆಡಿ ಬಂದಿರುವ ಅಶ್ವಿನ್, ತಾವು ಕ್ಲಬ್ ಕ್ರಿಕೆಟ್ ಆಡುತ್ತಿರುವುದು ಯಾಕೆ ಎಂಬ ಪ್ರಶ್ನೆಗೆ ಉತ್ತರ ನೀಡಿದ್ದಾರೆ. “ಟಿ20ಯಿಂದ ರೆಡ್ ಬಾಲ್ ಕ್ರಿಕೆಟ್’ಗೆ ಶಿಫ್ಟ್ ಆಗುವ ಉದ್ದೇಶದಿಂದ ಫಸ್ಟ್ ಡಿವಿಜನ್ ಕ್ಲಬ್ ಕ್ರಿಕೆಟ್ ಆಡುತ್ತಿದ್ದೇನೆ. ವಯಸ್ಸಾಗುತ್ತಿದ್ದಂತೆ ಇನ್ನೂಹೆಚ್ಚೆಚ್ಚು, ಇನ್ನೂ ಸ್ಮಾರ್ಟ್ ಆಗಿ ಆಡಬೇಕೆಂದು ಎನಿಸುತ್ತಿದೆ. ಇಲ್ಲಿ ಆಡುವುದನ್ನು ತುಂಬಾ ಎಂಜಾಯ್ ಮಾಡುತ್ತಿದ್ದೇನೆ”.

  • ರವಿಚಂದ್ರನ್ ಅಶ್ವಿನ್, ಕ್ರಿಕೆಟಿಗ.

ಭಾರತ ತಂಡದ ಕೋಚ್ ಆಗಿರುವ ರಾಹುಲ್ ದ್ರಾವಿಡ್ (Rahul Dravid) ಈ ಹಿಂದೆ ಟೀಮ್ ಇಂಡಿಯಾದಲ್ಲಿದ್ದಾಗ್ಲೇ ಕೆಎಸ್”ಸಿಎ (KSCA) ಕ್ಲಬ್ ಪಂದ್ಯಗಳನ್ನಾಡಿದ್ದರು. ತಾವು ಬಾಲ್ಯದಿಂದಲೂ ಆಡಿದ್ದ ಬಿಯುಸಿಸಿ ಕ್ಲಬ್ ಪರ ಆಡಿದ್ದ ದ್ರಾವಿಡ್, ಯುವ ಕ್ರಿಕೆಟಿಗರಿಗೆ ಮಾದರಿಯಾಗಿ ನಿಂತಿದ್ದರು. ಈಗ ದ್ರಾವಿಡ್ ಹಾದಿಯಲ್ಲಿ ಅಶ್ವಿನ್ ಸಾಗುತ್ತಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯ ಜುಲೈ 1ರಂದು ಆರಂಭವಾಗಲಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಅಶ್ವಿನ್, ಟೀಮ್ ಇಂಡಿಯಾ ಜೊತೆ ಕ್ರಿಕೆಟ್ ಜನಕರ ನಾಡಿಗೆ ಪ್ರಯಾಣ ಬೆಳೆಸಲಿದ್ದಾರೆ.

ಇದನ್ನೂ ಓದಿ : Fastest Ball in Cricket History : ಶೋಯೆಬ್ ಅಖ್ತರ್ ವಿಶ್ವದಾಖಲೆ ಉಡೀಸ್ ಮಾಡಿದನಾ ಜಮ್ಮು ಎಕ್ಸ್‌ಪ್ರೆಸ್

ಇದನ್ನೂ ಓದಿ : Umran Malik : ಉಮ್ರಾನ್ ಮಲಿಕ್ ಶರವೇಗದ ಎಸೆತಕ್ಕೆ ರಿಷಬ್ ಪಂತ್ ಬ್ಯಾಟ್ ಪೀಸ್ ಪೀಸ್

Ashwin who played club cricket in Tamil Nadu, spin wizard on the Dravid path

Comments are closed.