Umran Malik : ಉಮ್ರಾನ್ ಮಲಿಕ್ ಶರವೇಗದ ಎಸೆತಕ್ಕೆ ರಿಷಬ್ ಪಂತ್ ಬ್ಯಾಟ್ ಪೀಸ್ ಪೀಸ್

ಕಟಕ್: ಜಮ್ಮು ಎಕ್ಸ್”ಪ್ರೆಸ್ ಖ್ಯಾತಿಯ ಶರವೇಗದ ಸರದಾರ ಉಮ್ರಾನ್ ಮಲಿಕ್ (Umran Malik) ಮತ್ತೆ ಸುದ್ದಿಯಲ್ಲಿದ್ದಾರೆ. ತಮ್ಮ ಅತೀ ವೇಗದ ಎಸೆತಗಳಲ್ಲಿ ಐಪಿಎಲ್ ಟೂರ್ನಿ ಯಲ್ಲಿ ಧೂಳೆಬ್ಬಿಸಿದ್ದ 22 ವರ್ಷದ ಯುವ ವೇಗಿ ಉಮ್ರಾನ್ ಮಲಿಕ್, ಗಂಟೆಗೆ ಸತತವಾಗಿ 150 ಕಿ.ಮೀಗೂ ವೇಗದಲ್ಲಿ ಬೌಲಿಂಗ್ ಮಾಡುವ ಮೂಲಕ ಸದ್ದು ಮಾಡಿದ್ದರು. ಇದೀಗ ಉಮ್ರಾನ್ ಮಲಿಕ್ ದಕ್ಷಿಣ ಆಫ್ರಿಕಾ (India Vs South Africa T20 Series) ವಿರುದ್ಧದ 2ನೇ ಟಿ20 ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಹಂಗಾಮಿ ನಾಯಕ ರಿಷಭ್ ಪಂತ್”ಗೆ (Rishabh Pant) ಶಾಕ್ ಕೊಟ್ಟಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾಗಿರುವ ಉಮ್ರಾನ್”ಗೆ ಮೊದಲ ಪಂದ್ಯದಲ್ಲಿ ಆಡುವ ಅವಕಾಶ ಸಿಕ್ಕಿರ್ಲಿಲ್ಲ. 2ನೇ ಟಿ20 ಪಂದ್ಯ ಕಟಕ್”ನಲ್ಲಿ ಭಾನುವಾರ ನಡೆಯಲಿದ್ದು, ಶನಿವಾರ ಟೀಮ್ ಇಂಡಿಯಾ ಅಭ್ಯಾಸ ನಡೆಸಿತು. ಅಭ್ಯಾಸದ ವೇಳೆ ಉಮ್ರಾನ್ ಮಲಿಕ್ ಎಸೆದ ಎಸೆತವೊಂದರ ವೇಗಕ್ಕೆ ನಾಯಕ ರಿಷಭ್ ಪಂತ್ ಬ್ಯಾಟನ್ನು ಎರಡು ತುಂಡಾದ ಘಟನೆ ನಡೆದಿದೆ. ಉಮ್ರಾನ್ ಮಲಿಕ್ ವೇಗಕ್ಕೆ ಸ್ವತಃ ರಿಷಭ್ ಪಂತ್ ಒಂದು ಕ್ಷಣ ಬೆಚ್ಚಿ ಬಿದ್ದು ಬಿಟ್ರು.

ಜಮ್ಮು ರಾಜಧಾನಿ ಶ್ರೀನಗರದವರಾಗಿರುವ ಉಮ್ರಾನ್ ಮಲಿಕ್, ತಮ್ಮ ಶರವೇಗದ ಬೌಲಿಂಗ್”ನಿಂದ ಕ್ರಿಕೆಟ್ ಜಗತ್ತಿನ ಗಮನ ಸೆಳೆದಿದ್ದಾರೆ. ಇತ್ತೀಚೆಗೆ ಅಂತ್ಯಗೊಂಡ ಐಪಿಎಲ್’ನ ಪಂದ್ಯವೊಂದರಲ್ಲಿ ಉಮ್ರಾನ್ ಗಂಟೆಗೆ 157 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಿದ್ದರು. ಟೂರ್ನಿಯಲ್ಲಿ 14 ಪಂದ್ಯಗಳನ್ನಾಡಿ 22 ವಿಕೆಟ್ ಪಡೆದಿದ್ದ ಜಮ್ಮು ಎಕ್ಸ್’ಪ್ರೆಸ್ ಅದೇ ಪ್ರದರ್ಶನದ ಆಧಾರದಲ್ಲಿ ಟೀಮ್ ಇಂಡಿಯಾಗೆ ಎಂಟ್ರಿ ಕೊಟ್ಟಿದ್ದರು.

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾಗಿರುವ ಉಮ್ರಾನ್ ಮಲಿಕ್, 2ನೇ ಪಂದ್ಯದಲ್ಲಿ ಅಂತರಾಷ್ಟ್ರೀಯ ಪದಾರ್ಪಣೆಯ ನಿರೀಕ್ಷೆಯಲ್ಲಿದ್ದಾರೆ. ಉಮ್ರಾನ್ ಮಲಿಕ್ ವೇಗಕ್ಕೆ ಸ್ವತಃ ಟೀಮ್ ಇಂಡಿಯಾ ಕೋಚ್ ದ್ರಾವಿಡ್ ಕೂಡ ಬೆರಗಾಗಿದ್ದಾರೆ. ಅಷ್ಟೇ ಅಲ್ಲ, ಇತ್ತೀಚೆಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕೂಡ ಜಮ್ಮು ವೇಗಿಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದರು.

ಇದನ್ನೂ ಓದಿ : ರಣಜಿ ಟ್ರೋಫಿಯಲ್ಲಿ ಶತಕ ಬಾರಿಸಿದ ಪಶ್ಚಿಮ ಬಂಗಾಳ ಮಿನಿಸ್ಟರ್ !

ಇದನ್ನೂ ಓದಿ : Fastest Ball in Cricket History : ಶೋಯೆಬ್ ಅಖ್ತರ್ ವಿಶ್ವದಾಖಲೆ ಉಡೀಸ್ ಮಾಡಿದನಾ ಜಮ್ಮು ಎಕ್ಸ್‌ಪ್ರೆಸ್

Rishabh Pant Bat Piece Piece to Umran Malik Bowling

Comments are closed.