ಕನ್ನಡಿಗ ಕೆಎಲ್‌ ರಾಹುಲ್‌, ವಿರಾಟ್‌ ಕೊಹ್ಲಿ‌ ದಾಖಲೆಯ ಶತಕ : ಪಾಕಿಸ್ತಾನಕ್ಕೆ 357 ರನ್ ಸವಾಲು

ಏಷ್ಯಾಕಪ್‌ನ (asia Cup 2023 )ಸೂಪರ್‌ 4 ಹಂತದಲ್ಲಿ ಭಾರತ ಪಾಕಿಸ್ತಾನದ ( India vs Pakistan) ವಿರುದ್ದ ಆರ್ಭಟಿಸಿದೆ. ಕನ್ನಡಿಗ ಕೆಎಲ್‌ ರಾಹುಲ್‌ (KL Rahul ) ಹಾಗೂ ವಿರಾಟ್‌ ಕೊಹ್ಲಿ (Virat Kohli ) ಅವರ ಅಬ್ಬರದ ಶತಕದ ನೆರವಿನಿಂದ ಟೀಂ ಇಂಡಿಯಾ ಸವಾಲಿನ ಮೊತ್ತ ಕಲೆಹಾಕಿದೆ.

ಕೊಲಂಬೋ : ಏಷ್ಯಾಕಪ್‌ನ (asia Cup 2023 )ಸೂಪರ್‌ 4 ಹಂತದಲ್ಲಿ ಭಾರತ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ( India vs Pakistan) ವಿರುದ್ದ ಆರ್ಭಟಿಸಿದೆ. ಕನ್ನಡಿಗ ಕೆಎಲ್‌ ರಾಹುಲ್‌ (KL Rahul ) ಹಾಗೂ ವಿರಾಟ್‌ ಕೊಹ್ಲಿ (Virat Kohli ) ಅವರ ಅಬ್ಬರದ ಶತಕದ ನೆರವಿನಿಂದ ಟೀಂ ಇಂಡಿಯಾ ಸವಾಲಿನ ಮೊತ್ತ ಕಲೆಹಾಕಿದೆ. ಎರಡನೇ ವಿಕೆಟ್‌ಗೆ ರಾಹುಲ್‌ ಕೊಹ್ಲಿ ಜೋಡಿ ದ್ವಿಶತಕದ ಜೊತೆಯಾಟ ಆಡಿದ್ದಾರೆ.

Asia Cup 2023 India vs Pakistan match Live Updates KL Rahul and virat Kohli century kohli scored 13000 ODI runs
Imaeg Credit : BCCI

ಶ್ರೀಲಂಕಾದ ಕೊಲಂಬೋದ (Colombo ) ಪ್ರೇಮದಾಸ ಕ್ರೀಡಾಂಗಣದಲ್ಲಿ (Premadasa Stadium) ಮಳೆಯಿಂದಾಗಿ ಮೊದಲ ದಿನದ ಪಂದ್ಯದಲ್ಲಿ ಅರ್ಧಕ್ಕೆ ಸ್ಥಗಿತವಾಗಿತ್ತು. ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ ತಂಡಕ್ಕೆ ಆರಂಭಿಕ ಆಟಗಾರ ರೋಹಿತ್‌ ಶರ್ಮಾ ಹಾಗೂ ಶುಭಮನ್‌ ಗಿಲ್‌ ಆಕರ್ಷಕ ಅರ್ಧಶತಕ ಬಾರಿಸಿ ತಂಡಕ್ಕೆ ನೆರವಾಗಿದ್ದರು. ರೋಹಿತ್‌ ಶರ್ಮಾ 48 ಎಸೆತಗಳಲ್ಲಿ 56ರನ್‌ ಬಾರಿಸಿದ್ರೆ ಶುಭಮನ್‌ ಗಿಲ್‌ 56 ಎಸೆತಗಳಲ್ಲಿ 58 ರನ್‌ ಬಾರಿಸುವ ಮೂಲಕ ಶತಕದ ಜೊತೆಯಾಟ ಆಡಿದ್ದರು.

ನಂತರ ಕ್ರೀಸ್‌ಗೆ ಆಗಮಿಸಿದ ವಿರಾಟ್‌ ಕೊಹ್ಲಿ ಹಾಗೂ ಕನ್ನಡಿಗ ಕೆಎಲ್‌ ರಾಹುಲ್‌ ಆಟ ಆರಂಭಿಸಿದಾಗಲೇ ಭಾರೀ ಮಳೆ ಸುರಿದಿದ್ದು, ಪಂದ್ಯವನ್ನು ರದ್ದು ಮಾಡಲಾಗಿತ್ತು. ಆದ್ರೆ ಮೀಸಲು ದಿನವಾದ ಇಂದು ಕೂಡ ಆರಂಭದಲ್ಲಿ ಕ್ರೀಡಾಂಗಣದಲ್ಲಿ ಮಳೆ ಸುರಿದಿದೆ. ಆದರೆ ಪಂದ್ಯ ಆರಂಭವಾಗುತ್ತಲೇ ಕೊಹ್ಲಿ ಹಾಗೂ ರಾಹುಲ್‌ ಆರ್ಭಟಿಸೋದಕ್ಕೆ ಶುರು ಮಾಡಿದ್ರು.

ಇದನ್ನೂ ಓದಿ : ಏಷ್ಯಾ ಕಪ್ 2023: ಭಾರತ Vs ಪಾಕಿಸ್ತಾನ ಪಂದ್ಯ, ಸಚಿನ್ ತೆಂಡೂಲ್ಕರ್ ದಾಖಲೆ ಮುರಿದ ರೋಹಿತ್ ಶರ್ಮಾ

ಇಂದು ಪಂದ್ಯ ಆರಂಭವಾಗುತ್ತಲೇ ಆಕ್ರಮಣಕಾರಿ ಆಟಕ್ಕೆ ಮುಂದಾದ ಕೆಎಲ್‌ ರಾಹುಲ್‌ ಕೇವಲ 106 ಎಸೆತಗಳಲ್ಲಿ 12 ಬೌಂಡರಿ ಹಾಗೂ 2 ಸಿಕ್ಸರ್‌ ನೆರವಿನಿಂದ 111 ರನ್‌ ಬಾರಿಸಿದ್ರೆ, ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್‌ ಕೊಹ್ಲಿ ಅರ್ಧ ಶತಕಗಳಿಸುತ್ತಿದ್ದಂತೆಯೇ ಸ್ಪೋಟಕ ಆಟಕ್ಕೆ ಮನ ಮಾಡಿದ್ರು.

Asia Cup 2023 India vs Pakistan match Live Updates KL Rahul and virat Kohli century kohli scored 13000 ODI runs
Image credit : BCCI

ವಿರಾಟ್‌ ಕೊಹ್ಲಿ ಕೇವಲ ೯೪ ಎಸೆತಗಳಲ್ಲಿ 9 ಬೌಂಡರಿ ಹಾಗೂ 3 ಸಿಕ್ಸರ್‌ ನೆರವಿನಿಂದ 122 ರನ್‌ ಸಿಡಿಸಿದ್ದಾರೆ. ಈ ಮೂಲಕ ವಿರಾಟ್‌ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ 47ನೇ ಶತಕ ಸಿಡಿಸಿದ್ದು, 13000 ರನ್‌ ಪೂರೈಸಿದ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಅಂತಿಮವಾಗಿ ಭಾರತ ತಂಡ 50 ಓವರ್‌ಗಳಲ್ಲಿ 2 ವಿಕೆಟ್‌ ಕಳೆದುಕೊಂಡು ಸವಾಲಿನ 356 ರನ್‌ ಬಾರಿಸಿದೆ.

ಇದನ್ನೂ ಓದಿ : ಏಷ್ಯಾಕಪ್‌ 2023 : ಪಾಕಿಸ್ತಾನ ವಿರುದ್ದ ಪಂದ್ಯದಲ್ಲಿ ಕನ್ನಡಿಗ ಕೆಎಲ್‌ ರಾಹುಲ್‌ಗೆ ಅವಕಾಶ ನೀಡಬೇಡಿ : ರಾಬಿನ್‌ ಉತ್ತಪ್ಪ

ಏಷ್ಯಾಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದ ಪಾಕಿಸ್ತಾನದ ಬೌಲರ್‌ಗಳಾದ ಶಾಹಿನ್‌ ಆಫ್ರಿದಿ ಹಾಗೂ ಶಬಾಬ್‌ ಖಾನ್‌ ತಲಾ ಒಂದೊಂದು ವಿಕೆಟ್‌ ಪಡೆದುಕೊಂಡಿದ್ದಾರೆ. ಆದರೆ ಶಾಹಿನ್‌ ಆಫ್ರಿದಿ, ಫಾಹಿಮ್‌ ಆಸೀಫ್‌, ಶಬಾದ್‌ ಖಾನ್‌ ಎಸೆತಗಳನ್ನು ರಾಹುಲ್‌ ಹಾಗೂ ವಿರಾಟ್‌ ಕೊಹ್ಲಿ ಚೆಂಡಾಡಿದ್ದಾರೆ.

Asia Cup 2023 India vs Pakistan match Live Updates KL Rahul and virat Kohli century kohli scored 13000 ODI runs
Image Credit : BCCI

ಏಕದಿನ ಕ್ರಿಕೆಟ್‌ನಲ್ಲಿ ಕೊಹ್ಲಿ 13 ಸಾವಿರ ರನ್‌ ಸರದಾರ

ಏಷ್ಯಾಕಪ್‌ ಕ್ರಿಕೆಟ್‌ ಟೂರ್ನಿಗೂ ಮೊದಲೇ ವಿರಾಟ್‌ ಕೊಹ್ಲಿ ಅದ್ಬುತ ಬ್ಯಾಟಿಂಗ್‌ ಪ್ರದರ್ಶನ ನೀಡಿದ್ದಾರೆ. ಪಾಕಿಸ್ತಾನ ವಿರುದ್ದ ಪಂದ್ಯದಲ್ಲಿ ಸಿಡಿಲಬ್ಬರದ ಶತಕ ಸಿಡಿಸುವ ಮೂಲಕ ಪಾಕಿಸ್ತಾನ ತಂಡಕ್ಕೆ ಭರ್ಜರಿ ಸವಾಲು ಒಡ್ಡಿದ್ರೆ, ಇನ್ನೊಂದೆಡೆಯಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ.

ವಿರಾಟ್‌ ಕೊಹ್ಲಿ ಇದುವರೆಗೆ 278 ಪಂದ್ಯಗಳ ಪೈಕಿ 267 ಇನ್ನಿಂಗ್ಸ್‌ಗಳಲ್ಲಿ ಬರೋಬ್ಬರಿ 13024 ರನ್‌ ಬಾರಿಸುವ ಮೂಲಕ ಭಾರತದ ಪರ ಏಕದಿನ ಕ್ರಿಕೆಟ್‌ನಲ್ಲಿ ಎರಡನೇ ಅತೀ ಹೆಚ್ಚು ರನ್‌ ಬಾರಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ವಿರಾಟ್‌ ಕೊಹ್ಲಿ ಏಕದಿನ ಕ್ತಿಕೆಟ್‌ನಲ್ಲಿ ಒಟ್ಟು 46 ಶತಕ ಹಾಗೂ 65 ಅರ್ಧ ಶತಕ ಬಾರಿಸಿದ್ದಾರೆ.

Asia Cup 2023 India vs Pakistan match Live Updates KL Rahul and virat Kohli century kohli scored 13000 ODI runs
Image Credit : BCCI

ಇದನ್ನೂ ಓದಿ : ICC World Cup 2023: ಅಭ್ಯಾಸ ಪಂದ್ಯಗಳ ವೇಳಾಪಟ್ಟಿ ಪ್ರಕಟ, ಭಾರತಕ್ಕೆ ಯಾರು ಎದುರಾಳಿಗಳು? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಇನ್ನು ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಮೊದಲ ಸ್ಥಾನದಲ್ಲಿದ್ದಾರೆ. ಸಚಿನ್‌ ತೆಂಡೂಲ್ಕರ್‌ 463 ಪಂದ್ಯಗಳ ಪೈಕಿ 452 ಇನ್ನಿಂಗ್ಸ್‌ಗಳಲ್ಲಿ 18,465 ರನ್‌ ಬಾರಿಸುವ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಭಾರತದ ಮೊದಲ ಆಟಗಾರ ಹಾಗೂ ವಿಶ್ವದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ವಿಶ್ವದಲ್ಲಿ ಸಂಗಕ್ಕರ ಎರಡನೇ ಸ್ಥಾನದಲ್ಲಿದ್ರೆ, ರಿಕಿ ಪಾಂಟಿಂಗ್‌ ಮೂರು, ಸನತ್‌ ಜಯಸೂರ್ಯ ನಾಲ್ಕನೇ ಸ್ಥಾನ ಹಾಗೂ ವಿರಾಟ್‌ ಕೊಹ್ಲಿ ಐದನೇ ಸ್ಥಾನದಲ್ಲಿದ್ದಾರೆ.

Asia Cup 2023 India vs Pakistan match Live Updates KL Rahul and virat Kohli century kohli scored 13000 ODI runs

Comments are closed.