Irfan Pathan: ಅರಬ್ ದೇಶದಲ್ಲಿ ಯುವ ಕ್ರಿಕೆಟಿಗರಿಗೆ ಕ್ರಿಕೆಟ್ ಪಾಠ ಹೇಳಿಕೊಟ್ಟ ಟೀಮ್ ಇಂಡಿಯಾ ಆಲ್ರೌಂಡರ್ ಇರ್ಫಾನ್‌ ಪಠಾಣ್

ದುಬೈ: ಭಾರತ ಕ್ರಿಕೆಟ್ ತಂಡ ( Team India) ಅರಬ್ ರಾಷ್ಟ್ರ ದುಬೈನಲ್ಲಿ ಏಷ್ಯಾ ಕಪ್ (Asia Cup) ಟೂರ್ನಿಯಲ್ಲಿ ಆಡುತ್ತಿದೆ. ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನವನ್ನು ಸೋಲಿಸಿ ಶುಭಾರಂಭ ಮಾಡಿರುವ (Team India)ಟೀಮ್ ಇಂಡಿಯಾ, ಬುಧವಾರ ನಡೆಯುವ ತನ್ನ 2ನೇ ಲೀಗ್ ಪಂದ್ಯದಲ್ಲಿ ಕ್ರಿಕೆಟ್ ಶಿಶು ಹಾಂಕಾಂಗ್ ತಂಡವನ್ನು ಎದುರಿಸಲಿದೆ.

ಹಾಂಕಾಂಗ್ ವಿರುದ್ಧದ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾದ ಆಲ್ರೌಂಡರ್ ಒಬ್ಬರು ಯುನೈಟೆಡ್ ಅರಬ್ ಎಮಿರೇಟ್ಸ್’ನಲ್ಲಿ ಯುವ ಕ್ರಿಕೆಟಿಗರನ್ನು ಭೇಟಿಯಾಗಿ ಕ್ರಿಕೆಟ್ ಪಾಠ ಹೇಳಿಕೊಟ್ಟಿದ್ದಾರೆ. ಅಂದ ಹಾಗೆ ಇವ್ರು ಟೀಮ್ ಇಂಡಿಯಾದ ಮಾಜಿ ಆಲ್ರೌಂಡರ್ (Irfan Pathan)ಇರ್ಫಾನ್ ಪಠಾಣ್. ಏಷ್ಯಾ ಕಪ್ (Asia Cup) ಟೂರ್ನಿಯಲ್ಲಿ ಕಾಮೆಂಟೇಟರ್ ಆಗಿ ಕಾರ್ಯನಿರ್ವಹಿಸುತ್ತಿರುವ (Irfan Pathan) ಇರ್ಫಾನ್ ಪಠಾಣ್, ಯುಎಇನಲ್ಲಿ ಯುವ ಕ್ರಿಕೆಟಿಗರನ್ನು ಭೇಟಿ ಮಾಡಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

2019ರಲ್ಲಿ ಸ್ಪರ್ಧಾತ್ಮಕ ಕ್ರಿಕೆಟ್’ನಿಂದ ನಿವೃತ್ತಿಯಾಗಿದ್ದ 37 ವರ್ಷದ (Irfan Pathan)ಇರ್ಫಾನ್ ಪಠಾಣ್ ಕ್ರಿಕೆಟ್ ವಿಶ್ಲೇಷಕರಾಗಿ, ಕಾಮೆಂಟೇಟರ್ ಆಗಿ ತಮ್ಮ 2ನೇ ಇನ್ನಿಂಗ್ಸ್ ಆರಂಭಿಸಿದ್ದಾರೆ. ಅಷ್ಟೇ ಅಲ್ಲ, ಸಿನಿಮಾ ಕ್ಷೇತ್ರಕ್ಕೂ ಕಾಲಿಟ್ಟಿರುವ ಪಠಾಣ್, “ಕೊಬ್ರಾ” ಎಂಬ ತಮಿಳು ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

2004ರಲ್ಲಿ ಭಾರತ ಕ್ರಿಕೆಟ್ ತಂಡದ ಪದಾರ್ಪಣೆ ಮಾಡಿದ್ದ (Irfan Pathan) ಇರ್ಫಾನ್ ಪಠಾಣ್, ತಮ್ಮ ಕ್ರಿಕೆಟ್ ವೃತ್ತಿಜೀವನದ ಆರಂಭದ ವರ್ಷಗಳಲ್ಲಿ ಅದ್ಭುತ ಸ್ವಿಂಗ್ ದಾಳಿಗೆ ಹೆಸರಾಗಿದ್ದರು. ಪಾಕಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯವೊಂದರಲ್ಲಿ ಹ್ಯಾಟ್ರಿಕ್ ವಿಕೆಟ್ ಕೂಡ ಪಡೆದಿದ್ದರು. ಭಾರತ ಪರ (Irfan Pathan)ಇರ್ಫಾನ್ ಪಠಾಣ್ ಒಟ್ಟು 29 ಟೆಸ್ಟ್ ಪಂದ್ಯಗಳನ್ನಾಡಿದ್ದು 1,105 ರನ್ ಹಾಗೂ 100 ವಿಕೆಟ್’ಗಳನ್ನು ಪಡೆದಿದ್ದಾರೆ. ಟೀಮ್ ಇಂಡಿಯಾ ಪರ ಆಡಿದ 120 ಏಕದಿನ ಪಂದ್ಯಗಳಿಂದ 1,544 ರನ್ ಮತ್ತು 173 ವಿಕೆಟ್, 24 ಟಿ20 ಪಂದ್ಯಗಳಿಂದ 172 ರನ್ ಹಾಗೂ 28 ವಿಕೆಟ್ ಕಬಳಿಸಿದ್ದಾರೆ.

ಇದನ್ನೂ ಓದಿ: ಕಡಲನಗರಿಗೆ ಪ್ರಧಾನಿ ಆಗಮನ ಬೆನ್ನಲ್ಲೇ ಗೊಂದಲ ಸೃಷ್ಟಿಸಲು ಯತ್ನ :2 ಎಫ್​ಐಆರ್​ ದಾಖಲು

ಇದನ್ನೂ ಓದಿ: ಐಪಿಎಲ್ ಟ್ರೋಫಿ, ಟೀಮ್ ಇಂಡಿಯಾ ನಾಯಕತ್ವ, ಪಾಕ್ ವಿರುದ್ಧ ಮ್ಯಾನ್ ಆಫ್ ದಿ ಮ್ಯಾಚ್.. ಕಂಬ್ಯಾಕ್ ನಂತರ ಪಾಂಡ್ಯ ಮುಟ್ಟಿದ್ದೆಲ್ಲಾ ಚಿನ್ನ

ಇದನ್ನೂ ಓದಿ: ನಟಿ ರಮ್ಯಾ ನಿರ್ಮಾಣ ಸಂಸ್ಥೆಗೆ ಆ್ಯಪಲ್​ ಬಾಕ್ಸ್​ ಎಂದೇ ಹೆಸರಿಟ್ಟಿದ್ದೇಕೆ ಗೊತ್ತಾ

2007ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಚೊಚ್ಚಲ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಇರ್ಫಾನ್ ಪಠಾಣ್ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಗೆದ್ದು ಭಾರತ ಚಾಂಪಿಯನ್ ಆಗಲು ಕಾರಣರಾಗಿದ್ದರು.‌

Team India all-rounder Irfan Pathan taught cricket lessons to young cricketers in Arab countries.

Comments are closed.