Duleep Trophy: ದುಲೀಪ್ ಟ್ರೋಫಿ: ದಕ್ಷಿಣ ವಲಯ ತಂಡದಲ್ಲಿ ಕರ್ನಾಟಕದ ನಾಲ್ವರಿಗೆ ಸ್ಥಾನ; ಮಯಾಂಕ್ ಅಗರ್‌ವಾಲ್ ಉಪನಾಯಕ

ಬೆಂಗಳೂರು: ಪ್ರತಿಷ್ಠಿತ ದುಲೀಪ್ ಟ್ರೋಫಿ ಟೂರ್ನಿಯಲ್ಲಿ (Duleep Trophy) ಆಡಲಿರುವ ದಕ್ಷಿಣ ವಲಯ ತಂಡದಲ್ಲಿ ಕರ್ನಾಟಕದ ನಾಲ್ವರು ಆಟಗಾರರು ಸ್ಥಾನ ಪಡೆದಿದ್ದಾರೆ.‌ ದಕ್ಷಿಣ ವಲಯ ತಂಡಕ್ಕೆ ಮಯಾಂಕ್ ಅಗರ್ವಾಲ್ ಉಪನಾಯಕರಾಗಿ ಆಯ್ಕೆಯಾಗಿದ್ದು, ಕರ್ನಾಟಕ ತಂಡದ ನಾಯಕ ಮನೀಶ್ ಪಾಂಡೆ, ದೇವದತ್ ಪಡಿಕ್ಕಲ್ ಮತ್ತು ಕೆ.ಗೌತಮ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಸೆಪ್ಟೆಂಬರ್ 8ರಂದು ಚೆನ್ನೈನಲ್ಲಿ ಆರಂಭವಾಗಲಿರುವ ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಹೈದರಾಬಾದ್’ನ ಆಟಗಾರ ಹನುಮ ವಿಹಾರಿ ದಕ್ಷಿಣ ವಲಯ ತಂಡವನ್ನು ಮುನ್ನಡೆಸಲಿದ್ದಾರೆ.

ದಕ್ಷಿಣ ವಲಯ ತಂಡದ ನೇರವಾಗಿ ಸೆಮಿಫೈನಲ್’ಗೆ ಅರ್ಹತೆ ಪಡೆದಿದ್ದು, ಸೆಮಿಫೈನಲ್’ನಲ್ಲಿ ಉತ್ತರ ವಲಯ ಅಥವಾ ಪೂರ್ವವಲಯ ತಂಡವನ್ನು ಎದುರಿಸಲಿದೆ. ಈ ಪಂದ್ಯ ಸೆಪ್ಟೆಂಬರ್ 15ರಿಂದ 18ರವರೆಗೆ ಸೇಲಂನಲ್ಲಿ ನಡೆಯಲಿದೆ. ದುಲೀಪ್ ಟ್ರೋಫಿ ಟೂರ್ನಿಯೊಂದಿಗೆ ಪ್ರಸಕ್ತ ಸಾಲಿನ ದೇಶೀಯ ಕ್ರಿಕೆಟ್ ಋತು ಆರಂಭವಾಗಲಿದೆ. ದಕ್ಷಿಣ ವಲಯ, ಉತ್ತರ ವಲಯ, ಪೂರ್ವವಲಯ, ಪಶ್ಚಿಮ ವಲಯ, ಕೇಂದ್ರವಲಯ ಹಾಗೂ ಈಶಾನ್ಯ ವಲಯ ತಂಡಗಳು ಟೂರ್ನಿಯಲ್ಲಿ ಆಡಲಿವೆ.

ಫೈನಲ್ ಪಂದ್ಯ ಸೆಪ್ಟೆಂಬರ್ 21ರಿಂದ 25ರವರೆಗೆ ಕೊಯಂಬತ್ತೂರಿನಲ್ಲಿ ನಡೆಯಲಿದೆ. ಪಶ್ಚಿಮ ವಲಯ ತಂಡವನ್ನು ಅಜಿಂಕ್ಯ ರಹಾನೆ, ಪೂರ್ವವಲಯ ತಂಡವನ್ನು ಮನೋಜ್ ತಿವಾರಿ, ಉತ್ತರ ವಲಯ ತಂಡವನ್ನು ಮನ್’ದೀಪ್ ಸಿಂಗ್, ಕೇಂದ್ರ ವಲಯ ತಂಡವನ್ನು ಕರಣ್ ಶರ್ಮಾ ಮುನ್ನಡೆಸಲಿದ್ದಾರೆ.

ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಆಡಲಿರುವ ದಕ್ಷಿಣ ವಲಯ ತಂಡ
ಹನುಮ ವಿಹಾರಿ (ನಾಯಕ), ಮಯಾಂಕ್ ಅಗರ್ವಾಲ್ (ಉಪನಾಯಕ), ಮನೀಶ್ ಪಾಂಡೆ, ದೇವದತ್ತ್ ಪಡಿಕ್ಕಲ್, ಕೆ.ಗೌತಮ್, ರಿಕಿ ಭುಯಿ, ಬೇಸಿಲ್ ಥಂಪಿ, ಲಕ್ಷಯ್ ಗಾರ್ಗ್, ಬಾಬಾ ಇಂದ್ರಜಿತ್, ಏಕನಾಥ್ ಕೇರ್ಕರ್, ರೋಹನ್ ಕುನ್ನುಮ್ಮಲ್, ರವಿ ತೇಜ, ಆರ್. ಸಾಯಿ ಕಿಶೋರ್, ಚೀಪುರಪಲ್ಲಿ ಸ್ಟೀಫನ್, ತನಯ್ ತ್ಯಾಗರಾಜನ್.

ಇದನ್ನೂ ಓದಿ : Hardik Pandya: ಐಪಿಎಲ್ ಟ್ರೋಫಿ, ಟೀಮ್ ಇಂಡಿಯಾ ನಾಯಕತ್ವ, ಪಾಕ್ ವಿರುದ್ಧ ಮ್ಯಾನ್ ಆಫ್ ದಿ ಮ್ಯಾಚ್.. ಕಂಬ್ಯಾಕ್ ನಂತರ ಪಾಂಡ್ಯ ಮುಟ್ಟಿದ್ದೆಲ್ಲಾ ಚಿನ್ನ

ಇದನ್ನೂ ಓದಿ : Irfan Pathan: ಅರಬ್ ದೇಶದಲ್ಲಿ ಯುವ ಕ್ರಿಕೆಟಿಗರಿಗೆ ಕ್ರಿಕೆಟ್ ಪಾಠ ಹೇಳಿಕೊಟ್ಟ ಟೀಮ್ ಇಂಡಿಯಾ ಆಲ್ರೌಂಡರ್ ಇರ್ಫಾನ್‌ ಪಠಾಣ್

Duleep Trophy Four from Karnataka in the South Zone team

Comments are closed.