Hardik Pandya: ಐಪಿಎಲ್ ಟ್ರೋಫಿ, ಟೀಮ್ ಇಂಡಿಯಾ ನಾಯಕತ್ವ, ಪಾಕ್ ವಿರುದ್ಧ ಮ್ಯಾನ್ ಆಫ್ ದಿ ಮ್ಯಾಚ್.. ಕಂಬ್ಯಾಕ್ ನಂತರ ಪಾಂಡ್ಯ ಮುಟ್ಟಿದ್ದೆಲ್ಲಾ ಚಿನ್ನ

ದುಬೈ: ಟೀಮ್ ಇಂಡಿಯಾದ (Team India)ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ಈಗ ತಮ್ಮ ವೃತ್ತಿಜೀವನದ ಅಮೋಘ ಫಾರ್ಮ್’ನಲ್ಲಿದ್ದಾರೆ. ವಿಶೇಷ ಏನಂದ್ರೆ ಈ ವರ್ಷ ಗಾಯದಿಂದ ಚೇತರಿಸಿಕೊಂಡು (Asia Cup) ವಿಶ್ವಕಪ್ ಕ್ರಿಕೆಟ್ ಮೈದಾನದಲ್ಲಿ ಕಂಬ್ಯಾಕ್ ಮಾಡಿದ ನಂತರ ಹಾರ್ದಿಕ್ ಪಾಂಡ್ಯ ಮುಟ್ಟಿದ್ದೆಲ್ಲಾ ಚಿನ್ನವಾಗುತ್ತಿದೆ.

ಕೇವಲ 9 ತಿಂಗಳ ಹಿಂದಿನ ಮಾತು. 28 ವರ್ಷದ ಹಾರ್ದಿಕ್ ಪಾಂಡ್ಯ (Pandya)ತಮ್ಮ ಕಳಪೆ ಆಟದಿಂದ ಕ್ರಿಕೆಟ್ ಪ್ರಿಯರ ಆಕ್ರೋಶಕ್ಕೆ ಗುರಿಯಾಗಿದ್ದರು. ಅದೇ ಸಂದರ್ಭದಲ್ಲಿ ಪಾಂಡ್ಯ ಅವರನ್ನು ಬೆನ್ನು ನೋವು ಕೂಡ ಬಾಧಿಸಿತ್ತು. 2021ರ ನವೆಂಬರ್ 8ರಂದು ದುಬೈನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ನಮೀಬಿಯಾ ವಿರುದ್ಧ ಪಂದ್ಯದ ನಂತರ ಹಾರ್ದಿಕ್ ಪಾಂಡ್ಯ ಬೆನ್ನು ನೋವಿನ ಗಾಯದಿಂದ ಬಳಲಿದ್ದರು. ಗಾಯದ ಮಧ್ಯೆಯೇ ಟಿ20 ವಿಶ್ವಕಪ್’ನಲ್ಲಿ ಆಡಿದ್ದ ಪಾಂಡ್ಯ ವಿರುದ್ಧ ಭಾರೀ ಟೀಕೆಗಳು ವ್ಯಕ್ತವಾಗಿದ್ದವು.

ಗಾಯದಿಂದ ಚೇತರಿಸಿಕೊಂಡು ಕಠಿಣ ಅಭ್ಯಾಸ ನಡೆಸಿದ್ದ ಹಾರ್ದಿಕ್ ಪಾಂಡ್ಯ (Pandya) ಐಪಿಎಲ್-2022 ಟೂರ್ನಿಯ ಮೂಲಕ ಕ್ರಿಕೆಟ್ ಅಂಗಣಕ್ಕೆ ಮರಳಿದ್ದರು.(IPL) ಐಪಿಎಲ್’ನಲ್ಲಿ ಗುಜರಾತ್ ಟೈಟನ್ಸ್ ತಂಡದ ನಾಯಕತ್ವ ವಹಿಸಿದ್ದ ಹಾರ್ದಿಕ್ ಪಾಂಡ್ಯ, ತಮ್ಮ ಚಾಣಾಕ್ಷ ನಾಯಕತ್ವದಿಂದ ಗುಜರಾತ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ಅಷ್ಟೇ ಅಲ್ಲ, ಟೂರ್ನಿಯಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್’ನಲ್ಲಿ ಅಮೋಘ ಪ್ರದರ್ಶನ ತೋರಿದ್ದ ಹಾರ್ದಿಕ್ ಪಾಂಡ್ಯ 15 ಪಂದ್ಯಗಳಿಂದ 4 ಅರ್ಧಶತಕಗಳ ಸಹಿತ 487 ರನ್ ಮತ್ತು 10 ವಿಕೆಟ್ ಪಡೆದಿದ್ದರು.

ಐಪಿಎಲ್ (IPL) ನಂತರ ಐರ್ಲೆಂಡ್ ವಿರುದ್ಧದ ಟಿ20 (T20) ಸರಣಿಯಲ್ಲಿ ಭಾರತ ತಂಡದ ನಾಯಕತ್ವ ವಹಿಸುವ ಅವಕಾಶ ಪಾಂಡ್ಯಗೆ ಸಿಕ್ಕಿತ್ತು.(Hardik Pandya)ಹಾರ್ದಿಕ್‌ ಪಾಂಡ್ಯ ನಾಯಕತ್ವದಲ್ಲಿ ಟೀಮ್ ಇಂಡಿಯಾ 2 ಪಂದ್ಯಗಳ ಸರಣಿಯನ್ನು 2-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿತ್ತು. ನಂತರ ನಡೆದ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಮಿಂಚಿದ್ದ ಪಾಂಡ್ಯ 3 ಪಂದ್ಯಗಳಲ್ಲಿ 100 ರನ್ ಮತ್ತು 6 ವಿಕೆಟ್ ಪಡೆದು ಭಾರತತಕ್ಕೆ 2-1ರಿಂದ ಸರಣಿ ಗೆದ್ದು ಕೊಟ್ ಸರಣಿಶ್ರೇಷ್ಠರಾಗಿ ಹೊರಹೊಮ್ಮಿದ್ದರು. ನಂತರ ವೆಸ್ಟ್ ಇಂಡೀಸ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯ ಅಂತಿಮ ಪಂದ್ಯದಲ್ಲಿ ಟೀಮ್ ಇಂಡಿಯಾವನ್ನು ಗೆಲುವಿನತ್ತ ಮುನ್ನಡೆಸಿದ್ದರು.

ಇದನ್ನೂ ಓದಿ: ಭಾರತ Vs ಹಾಂಕಾಂಗ್ ಪಂದ್ಯದಲ್ಲಿ ಕೆ.ಎಲ್ ರಾಹುಲ್ ಮೇಲೆ ಬಿಗ್ ಪ್ರೆಶರ್

ಇದನ್ನೂ ಓದಿ: ಸಚಿನ್ ತೆಂಡೂಲ್ಕರ್, ಧೋನಿ, ಕೊಹ್ಲಿಗೂ ಸಾಧ್ಯವಾಗದ ದಾಖಲೆ ಬರೆದ ಹಿಟ್ ಮ್ಯಾನ್ ರೋಹಿತ್ ಶರ್ಮಾ!

ಇದನ್ನೂ ಓದಿ: ಸೋವಿಯತ್ ಒಕ್ಕೂಟದ ಕೊನೇ ನಾಯಕ ಮಿಖಾಯಿಲ್ ಗೋರ್ಬಚೇವ್ ಇನ್ನಿಲ್ಲ

ಇದೀಗ ಏಷ್ಯಾ ಕಪ್ (Asia Cup)ಟೂರ್ನಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಅಮೋಘ ಆಲ್ರೌಂಡ್ ಆಟದ ಮೂಲಕ ಹಾರ್ದಿಕ್ ಪಾಂಡ್ಯ, ಭಾರತಕ್ಕೆ 5 ವಿಕೆಟ್’ಗಳ ಭರ್ಜರಿ ಗೆಲುವು ತಂದುಕೊಟ್ಟಿದ್ದಾರೆ. ಪಾಕ್ ವಿರುದ್ಧ ಬೌಲಿಂಗ್’ನಲ್ಲಿ ಮಿಂಚಿ 25 ರನ್ನಿಗೆ 3 ವಿಕೆಟ್ ಪಡೆದಿದ್ದ ಹಾರ್ದಿಕ್ ಪಾಂಡ್ಯ, ನಂತರ ಬ್ಯಾಟಿಂಗ್’ನಲ್ಲೂ ಮಿಂಚಿ 17 ಎಸೆತಗಳಲ್ಲಿ ಅಜೇಯ 33 ರನ್ ಬಾರಿಸಿ ಭಾರತಕ್ಕೆ ರೋಚಕ ಜಯ ತಂದುಕೊಟ್ಟು‌, “ಹಿನ್ನಡೆಗಿಂತ ಪುನರಾಗಮನ ದೊಡ್ಡದು” ಎಂದು ಟೀಮ್‌ ಇಂಡಿಯಾದ ಆಲ್‌ ರೌಂಡರ್‌ ಹಾರ್ದಿಕ್‌ ಪಾಂಡ್ಯ ಹೇಳಿದ್ದಾರೆ.

IPL trophy, captaincy of Team India, man of the match against Pakistan.

Comments are closed.