ಬ್ರಿಸ್ಬೇನ್: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ (T20 World Cup 2022) ಅರ್ಹತಾ ಸುತ್ತಿನ ಪಂದ್ಯಗಳು ಆರಂಭವಾಗಿದ್ದು, ಮತ್ತೊಂದೆಡೆ ಈಗಾಗಲೇ ಪ್ರಧಾನ ಸುತ್ತಿನಲ್ಲಿ ಕಾಣಿಸಿಕೊಂಡಿರುವ ತಂಡಗಳ ಮಧ್ಯೆ ಅಭ್ಯಾಸ ಪಂದ್ಯಗಳು ನಡೆಯುತ್ತಿವೆ. ಸೋಮವಾರ ಗಾಬಾ ಮೈದಾನದಲ್ಲಿ ನಡೆದ ಅಭ್ಯಾಸ ಪಂದ್ಯದಲ್ಲಿ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ, ಭಾರತ ವಿರುದ್ಧ 6 ರನ್’ಗಳ ಸೋಲು ಕಂಡಿದೆ. ವಿಶ್ವಕಪ್ ಟೂರ್ನಿಯ ಮಧ್ಯದಲ್ಲೇ ಆಸ್ಟ್ರೇಲಿಯಾ ತಂಡಕ್ಕೆ ನೂತನ ನಾಯಕನನ್ನು (Australia new captain) ನೇಮಕ ಮಾಡಲಾಗಿದೆ. ಕ್ರಿಕೆಟ್ ಆಸ್ಟ್ರೇಲಿಯಾ (Cricket Australia) ಈ ಮಹತ್ವದ ಘೋಷಣೆ ಮಾಡಿದೆ.
ಅಂದ ಹಾಗೆ ಹೊಸ ನಾಯಕ ಬಂದಿರುವುದು ಟಿ20 ತಂಡಕ್ಕಲ್ಲ, ಬದಲಾಗಿ ಏಕದಿನ ತಂಡಕ್ಕೆ. ಟಿ20 ಹಾಗೂ ಏಕದಿನ ತಂಡಗಳ ನಾಯಕರಾಗಿದ್ದ ಆರೋನ್ ಫಿಂಚ್ (Aron Finch), ಏಕದಿನ ಕ್ರಿಕೆಟ್’ಗೆ ನಿವೃತ್ತಿ ಘೋಷಿಸಿದ್ದು ಟಿ20 ತಂಡದ ನಾಯಕರಾಗಿ ಮುಂದುವರಿದಿದ್ದಾರೆ. ಹೀಗಾಗಿ ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕ ಪ್ಯಾಟ್ ಕಮಿನ್ಸ್ (Pat Cummins) ಅವರನ್ನು ಏಕದಿನ ತಂಡದ ನೂತನ ನಾಯಕನನ್ನಾಗಿ ನೇಮಕ ಮಾಡಲಾಗಿದೆ. ಆಸ್ಟ್ರೇಲಿಯಾ ಏಕದಿನ ತಂಡದ 27ನೇ ನಾಯಕನಾಗಿ ನೇಮಕಗೊಂಡಿರುವ 29 ವರ್ಷದ ಪ್ಯಾಟ್ ಕಮಿನ್ಸ್, 2023ರ ಐಸಿಸಿ ವಿಶ್ವಕಪ್’ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಲಿದ್ದಾರೆ.
Pat Cummins has been named Australia's 27th ODI captain 🙌 pic.twitter.com/T0p02wwjiP
— Cricket Australia (@CricketAus) October 17, 2022
ಆರೋನ್ ಫಿಂಚ್ ನಾಯಕತ್ವದಲ್ಲಿ ಆಸ್ಟ್ರೇಲಿಯಾ ತಂಡ ಕಳೆದ ವರ್ಷ ದುಬೈನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಆಗಿತ್ತು. ಆ ಬಾರಿ ಟಿ20 ವಿಶ್ವಕಪ್ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿದ್ದು, ಚಾಂಪಿಯನ್ ಪಟ್ಟ ಉಳಿಸಿಕೊಳ್ಳುವ ವಿಶ್ವಾಸದಲ್ಲಿದೆ. ಆದರೆ ಮೊದಲ ಅಭ್ಯಾಸ ಪಂದ್ಯದಲ್ಲೇ ಭಾರತ ವಿರುದ್ಧ ಸೋಲು ಕಂಡಿರುವುದು ಕಾಂಗರೂಗಳ ವಿಶ್ವಕಪ್ ಕನಸಿಗೆ ಆರಂಭಿಕ ಪೆಟ್ಟು ಕೊಟ್ಟಿದೆ. ಆಸೀಸ್ ವಿರುದ್ಧ ಗೆದ್ದಿರುವ ಭಾರತ ಬುಧವಾರ ಬ್ರಿಸ್ಬೇನ್’ನ ಗಾಬಾ ಮೈದಾನದಲ್ಲಿ ನಡೆಯುವ ತನ್ನ 2ನೇ ಅಭ್ಯಾಸ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ಆಕ್ಟೋಬರ್ 22ರಂದು ನಡೆಯುವ ವಿಶ್ವಕಪ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ವಿಶ್ವಚಾಂಪಿಯನ್ ಆಸ್ಟ್ರೇಲಿಯಾ ಕಳೆದ ಬಾರಿಯ ಫೈನಲಿಸ್ಟ್ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ.
ಇದನ್ನೂ ಓದಿ : India Vs Australia warm-up Match : ಟಿ20 ವಿಶ್ವಕಪ್ ಅಭ್ಯಾಸ ಪಂದ್ಯ: ರಾಹುಲ್ ಅಬ್ಬರದ ಅರ್ಧಶತಕ, ಕ್ಟಾಪ್ಟನ್ ರೋಹಿತ್ ಫೇಲ್
ಇದನ್ನೂ ಓದಿ : India beat Australia in Warm-up game: ಲಾಸ್ಟ್ ಓವರ್‌ನಲ್ಲಿ ಶಮಿ ಬೆಂಕಿ ಬೌಲಿಂಗ್, ಆಸೀಸ್ ವಿರುದ್ಧ ಅಭ್ಯಾಸ ಪಂದ್ಯ ಗೆದ್ದ ಭಾರತ
Australia announced new captain Pat Cummins T20 World Cup 2022