India Vs Bangladesh test series: ಏಕದಿನ ಸರಣಿ ಸೋತ ಭಾರತಕ್ಕೆ ನಾಳೆಯಿಂದ “ಟೆಸ್ಟ್”, ಟೀಮ್ ಇಂಡಿಯಾಗೆ ರಾಹುಲ್ ನಾಯಕತ್ವ

ಛಟ್ಟೋಗ್ರಾಮ್: ಬಾಂಗ್ಲಾದೇಶ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯನ್ನು 1-2ರಿಂದ ಸೋತು ಅವಮಾನಕ್ಕೀಡಾಗಿರುವ ಪ್ರವಾಸಿ ಭಾರತ ತಂಡ ಇದೀಗ ಟೆಸ್ಟ್ ಸರಣಿ (India Vs Bangladesh test series) ಗೆಲುವಿನ ಮೇಲೆ ಕಣ್ಣಿಟ್ಟಿದೆ.ಭಾರತ ಮತ್ತು ಬಾಂಗ್ಲಾದೇಶ ನಡುವಿನ 2 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ನಾಳೆ (ಬುಧವಾರ) ಛಟ್ಟೋಗ್ರಾಮ್’ನಲ್ಲಿರುವ ಜಹೂರ್ ಅಹ್ಮದ್ ಚೌಧರಿ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ.

ಇದೇ ಮೈದಾನದಲ್ಲಿ ಶನಿವಾರ ನಡೆದಿದ್ದ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಭಾರತ 409 ರನ್’ಗಳ ಬೃಹತ್ ಮೊತ್ತ ಕಲೆ ಹಾಕಿ 227 ರನ್’ಗಳ ದೊಡ್ಡ ಅಂತರದಲ್ಲಿ ಪಂದ್ಯ ಗೆದ್ದುಕೊಂಡಿತ್ತು. ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕತ್ವ ವಹಿಸಿ ಪ್ರಸಕ್ತ ಬಾಂಗ್ಲಾ ಪ್ರವಾಸದಲ್ಲಿ ಭಾರತಕ್ಕೆ ಮೊದಲ ಗೆಲುವು ತಂದುಕೊಟ್ಟಿದ್ದ ಕನ್ನಡಿಗಗ ಕೆ.ಎಲ್ ರಾಹುಲ್ ಟೆಸ್ಟ್ ಸರಣಿಯಲ್ಲೂ ಟೀಮ್ ಇಂಡಿಯಾವನ್ನು ಮುನ್ನಡೆಸಲಿದ್ದಾರೆ.

ನಾಯಕ ರಾಹುಲ್ ಮತ್ತು ಯುವ ಬಲಗೈ ಓಪನರ್ ಶುಭಮನ್ ಗಿಲ್ ಟೀಮ್ ಇಂಡಿಯಾ ಇನ್ನಿಂಗ್ಸ್ ಆರಂಭಿಸಲಿದ್ದು, 3ನೇ ಕ್ರಮಾಂಕದಲ್ಲಿ ಉಪನಾಯಕ ಚೇತೇಶ್ವರ್ ಪೂಜಾರ ಆಡಲಿದ್ದಾರೆ. 4ನೇ ಕ್ರಮಾಂಕದಲ್ಲಿ ಮಾಜಿ ನಾಯಕ ವಿರಾಟ್ ಕೊಹ್ಲಿ, 5ನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಆಡಲಿದ್ದಾರೆ. 3ನೇ ಏಕದಿನ ಪಂದ್ಯದಲ್ಲಿ ಅಮೋಘ ಶತಕದೊಂದಿಗೆ ಅಬ್ಬರಿಸಿದ್ದ ರನ್ ಮಷಿನ್ ವಿರಾಟ್ ಕೊಹ್ಲಿ ಉತ್ತಮ ಫಾರ್ಮ್’ನಲ್ಲಿದ್ದು, ಟೆಸ್ಟ್ ಸರಣಿಯಲ್ಲೂ ಶತಕದ ಬೇಟೆ ಮುಂದುವರಿಸುವ ವಿಶ್ವಾಸದಲ್ಲಿದ್ದಾರೆ.

ಬಾಂಗ್ಲಾದೇಶ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯಕ್ಕೆ ಭಾರತದ ಸಂಭಾವ್ಯ XI
1.ಕೆ.ಎಲ್ ರಾಹುಲ್ (ನಾಯಕ), 2.ಶುಭಮನ್ ಗಿಲ್, 3.ಚೇತೇಶ್ವರ್ ಪೂಜಾರ, 4.ವಿರಾಟ್ ಕೊಹ್ಲಿ, 5.ಶ್ರೇಯಸ್ ಅಯ್ಯರ್, 6.ರಿಷಭ್ ಪಂತ್/ಕೆ.ಎಸ್ ಭರತ್ (ವಿಕೆಟ್ ಕೀಪರ್), 7.ರವಿಚಂದ್ರನ್ ಅಶ್ವಿನ್, 8.ಅಕ್ಷರ್ ಪಟೇಲ್, 9.ಮೊಹಮ್ಮದ್ ಸಿರಾಜ್, 10.ಉಮೇಶ್ ಯಾದವ್, 11.ಕುಲ್ದೀಪ್ ಯಾದವ್/ಶಾರ್ದೂಲ್ ಠಾಕೂರ್.

ಇದನ್ನೂ ಓದಿ : Ranji Trophy updates : ರಣಜಿ ಟ್ರೋಫಿ: ಕರ್ನಾಟಕಕ್ಕೆ ಸರ್ವಿಸಸ್ ಎದುರಾಳಿ, ಮೊದಲ ಪಂದ್ಯಕ್ಕೇ ವರುಣನ ಅಡ್ಡಿ

ಇದನ್ನೂ ಓದಿ : Arjun Tendulkar : ಗೋವಾ ತಂಡಕ್ಕೆ ಕನ್ನಡಿಗ ಕೋಚ್, ರಣಜಿ ತಂಡದಲ್ಲಿ ಸಚಿನ್ ಪುತ್ರ ಅರ್ಜುನ್ ತೆಂಡೂಲ್ಕರ್‌ಗೆ ಸ್ಥಾನ

ಇದನ್ನೂ ಓದಿ : Sanju Samson play Ireland: ಐರ್ಲೆಂಡ್ ಪರ ಆಡಲಿದ್ದಾರಾ ಸಂಜು ಸ್ಯಾಮ್ಸನ್.. ಐರ್ಲೆಂಡ್ ಆಫರ್‌ಗೆ ಸಂಜು ಹೇಳಿದ್ದೇನು ?

India Vs Bangladesh test series : ಭಾರತ Vs ಬಾಂಗ್ಲಾದೇಶ ಪ್ರಥಮ ಟೆಸ್ಟ್
ಪಂದ್ಯ ಆರಂಭ: ಬೆಳಗ್ಗೆ 9ಕ್ಕೆ
ಸ್ಥಳ: ಜಹೂರ್ ಅಹ್ಮದ್ ಚೌಧರಿ ಕ್ರೀಡಾಂಗಣ, ಛಟ್ಟೋಗ್ರಾಮ್
ನೇರ ಪ್ರಸಾರ: ಸೋನಿ ಸ್ಪೋರ್ಟ್ಸ್ ನೆಟ್ವರ್ಕ್ (Sony Sports Network)
ಲೈವ್ ಸ್ಟ್ರೀಮಿಂಗ್: Sony Liv app

India Vs Bangladesh test series: “Test” from tomorrow for India after losing the ODI series, Rahul captains Team India

Comments are closed.