Chetan Sharma resigns: ಸ್ಟಿಂಗ್ ಆಪರೇಷನ್’ಗೆ ತಲೆದಂಡ; ಬಿಸಿಸಿಐ ಆಯ್ಕೆ ಸಮಿತಿಯ ಮುಖ್ಯಸ್ಥನ ಸ್ಥಾನಕ್ಕೆ ಚೇತನ್ ಶರ್ಮಾ ರಾಜೀನಾಮೆ

ಮುಂಬೈ: Chetan Sharma resign : ಖಾಸಗಿ ವಾಹಿನಿ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಬಿಸಿಸಿಐ (BCCI) ಹಾಗೂ ಭಾರತ ಕ್ರಿಕೆಟ್ ತಂಡದ ಸಾಕಷ್ಟು ರಹಸ್ಯಗಳನ್ನು ಬಹಿರಂಗ ಬಿಸಿಸಿಐ ಆಯ್ಕೆ ಸಮಿತಿಯ ಮುಖ್ಯಸ್ಥ ಚೇತನ್ ಶರ್ಮಾ ತಲೆದಂಡವಾಗಿದೆ (BCCI selection committee chairman Chetan Sharma). ಸೀನಿಯರ್ ಆಯ್ಕೆ ಸಮಿತಿಯ ಮುಖ್ಯಸ್ಥನ ಸ್ಥಾನಕ್ಕೆ ಚೇತನ್ ಶರ್ಮಾ ರಾಜೀನಾಮೆ ನೀಡಿದ್ದಾರೆ. ಇದರ ಬೆನ್ನಲ್ಲೇ ಆಯ್ಕೆ ಸಮಿತಿ ಸದಸ್ಯ ಶಿವಸುಂದರ್ ದಾಸ್ ಅವರನ್ನು ಮಧ್ಯಂತರ ಆಯ್ಕೆ ಸಮಿತಿ ಮುಖ್ಯಸ್ಥರನ್ನಾಗಿ ಬಿಸಿಸಿಐ ನೇಮಕ ಮಾಡಿದೆ.

ಚೇತನ್ ಶರ್ಮಾ ರಾಜೀನಾಮೆಯ ಬಗ್ಗೆ ಪ್ರತಿಕ್ರಿಸಿಯಿರುವ ಬಿಸಿಸಿಐ ಅಧಿಕಾರಿಯೊಬ್ಬರು, “ರಾಜೀನಾಮೆ ನೀಡುವಂತೆ ಚೇತನ್ ಶರ್ಮಾಗೆ ಯಾರೂ ಕೂಡ ಒತ್ತಡ ಹೇರಿರಲಿಲ್ಲ. ಅವರು ಸ್ಟಿಂಗ್ ಆಪರೇಷನ್’ನಲ್ಲಿ ಆಡಿದ್ದ ಮಾತುಗಳ ಬಗ್ಗೆ ಆಂತರಿಕ ತನಿಖೆಗಾಗಿ ನಾವೊಂದು ಸಮಿತಿಯನ್ನು ರಚಿಸಿದ್ದೆವು. ಆದರೆ ಚೇತನ್ ಶರ್ಮಾ ನಿನ್ನೆ ರಾತ್ರಿ ತಮ್ಮ ರಾಜೀನಾಮೆ ಪತ್ರ ರವಾನಿಸಿದ್ದಾರೆ. ಹೌದು. ರಹಸ್ಯ ಕಾರ್ಯಾಚರಣೆಯಿಂದ ಬಿಸಿಸಿಐಗೆ ಮುಜುಗರವಾಗಿರುವುದು ನಿಜ. ಆದರೆ ಇದು ಮುಂದಕ್ಕೆ ಹೆಜ್ಜೆ ಇಡುವ ಸಮಯ. ಶಿವಸುಂದರ್ ದಾಸ್ ಆಯ್ಕೆ ಸಮಿತಿಯ ಮುಂದಿನ ಅಧ್ಯಕ್ಷರಾಗುವ ರೇಸ್’ನಲ್ಲಿದ್ದಾರೆ” ಎಂದಿದ್ದಾರೆ.

ಭಾರತ ಕ್ರಿಕೆಟ್ ತಂಡದ ಕೆಲ ಸ್ಟಾರ್ ಆಟಗಾರರು ಫಿಟ್’ನೆಸ್ ಸಾಬೀತು ಪಡಿಸಲು ಇಂಜೆಕ್ಷನ್ ತೆಗೆದುಕೊಳ್ಳುತ್ತಾರೆ ಎಂಗು ಬಿಸಿಸಿಐ ಆಯ್ಕೆ ಸಮಿತಿಯ ಮುಖ್ಯಸ್ಥ ಚೇತನ್ ಶರ್ಮಾ (BCCI selection committee chairman Chetan Sharma) ಖಾಸಗಿ ಸುದ್ದಿವಾಹಿನಿ ನಡೆದ ರಹಸ್ಯ ಕಾರ್ಯಾಚರಣೆಯಲ್ಲಿ (Chetan Sharma sting operation) ಬಾಯ್ಬಿಟ್ಟಿದ್ದರು. ಡೋಪಿಂಗ್ ಟೆಸ್ಟ್’ನಲ್ಲಿ ಸಿಕ್ಕಿಬೀಳದಂತಹ ಡ್ರಗ್ಸ್ ಅನ್ನು ಇಂಜೆಕ್ಷನ್ ಮೂಲಕ ಆಟಗಾರರು ಫಿಟ್’ನೆಸ್ ಪರೀಕ್ಷೆಗೂ ಮುನ್ನ ತೆಗೆದುಕೊಳ್ಳುತ್ತಾರೆ. ಇದರಿಂದಾಗಿ ಅವರು ಫಿಟ್’ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೆ. 80ರಿಂದ 85% ಅಷ್ಟೇ ಫಿಟ್ ಆಗಿರುವ ಆಟಗಾರ ಕೂಡ ಈ ಇಂಜೆಕ್ಷನ್ ಪರಿಣಾಮ ಫಿಟ್’ನೆಸ್ ಪರೀಕ್ಷೆಯಲ್ಲಿ ಪಾಸ್ ಆಗುತ್ತಾರೆ ಎಂದು ಸ್ಟಿಂಗ್ ಆಪರೇಷನ್’ನಲ್ಲಿ ಚೇತನ್ ಶರ್ಮಾ ಹೇಳಿದ್ದರು. ಮಾಜಿ ನಾಯಕ ವಿರಾಟ್ ಕೊಹ್ಲಿ ಟೀಮ್ ಇಂಡಿಯಾ ನಾಯಕತ್ವ ಕಳೆದುಕೊಳ್ಳಲು ಅಂದಿನ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ (Sourav Ganguly) ಕಾರಣ ಎಂದು ಇದೇ ವೇಳೆ ಚೇತನ್ ಶರ್ಮಾ ಹೇಳಿದ್ದರು.

“ವಿರಾಟ್ ಕೊಹ್ಲಿ ಮತ್ತು ಸೌರವ್ ಗಂಗೂಲಿ ನಡುವಿನ “ಅಹಂ” ಕಾರಣದಿಂದ ಇಬ್ಬರ ಬಾಂಧವ್ಯ ಹಾಳಾಗಿತ್ತು. ಒಬ್ಬ ಆಟಗಾರ ದಿಗ್ಗಜನಾಗಿ ಬೆಳೆದು ನಿಂತಾಗ ಆತ ನಾನೇ ಎಲ್ಲರಿಗಿಂತ ದೊಡ್ಡವ, ನಾನೇನು ಮಾಡಿದರೂ ನಡೆಯುತ್ತದೆ ಎಂದು ಭಾವಿಸುತ್ತಾನೆ. ಹೀಗಾಗಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗಿಂತಲೂ ನಾನೇ ದೊಡ್ಡವ ಎಂದು ವಿರಾಟ್ ಕೊಹ್ಲಿ ಭಾವಿಸಿದರು. ಇದು ಸಂಪೂರ್ಣ ಅಹಂಗೆ ಸಂಬಂಧ ಪಟ್ಟ ವಿಚಾರ. ಟಿ20 ತಂಡದ ನಾಯಕತ್ವ ತ್ಯಜಿಸದಂತೆ ವಿರಾಟ್ ಕೊಹ್ಲಿಗೆ ಸೌರವ್ ಗಂಗೂಲಿ ವೀಡಿಯೊ ಕಾಲ್ ಮೂಲಕ ಹೇಳಿದ್ದರು. ಆದರೆ ದಕ್ಷಿಣ ಆಫ್ರಿಕಾದಲ್ಲಿ ನಡೆದ ಪ್ರೆಸ್ ಕಾನ್ಫರೆನ್ಸ್’ನಲ್ಲಿ ವಿರಾಟ್ ಕೊಹ್ಲಿ ಸುಳ್ಳು ಹೇಳಿದರು. ಟಿ20 ನಾಯಕತ್ವ ತ್ಯಜಿಸದಂತೆ ಬಿಸಿಸಿಐನಿಂದ ನನಗೆ ಯಾರೂ ಹೇಳಿಲ್ಲ ಎಂಬುದಾಗಿ ಕೊಹ್ಲಿ ಹೇಳಿದ್ದರು. ಇದಾದ ನಂತರ ಏಕದಿನ ತಂಡದ ನಾಯಕತ್ವದಿಂದ ಕೊಹ್ಲಿ ಅವರನ್ನು ಕೆಳಗಿಳಿಸಿ ರೋಹಿತ್ ಶರ್ಮಾಗೆ ಪಟ್ಟ ಕಟ್ಟಲಾಯಿತು. ಇದರ ಹಿಂದೆ ಸೌರವ್ ಗಂಗೂಲಿ ಅವರ ಕೈವಾಡವಿದೆ ಎಂದು ಕೊಹ್ಲಿ ಭಾವಿಸಿದ್ದರು. ಹೀಗಾಗಿ ಸೌರವ್ ಗಂಗೂಲಿ ಅವರನ್ನು ಗುರಿ ಮಾಡಿ ಮಾತನಾಡಿದ್ದರು. ಇದಾದ ನಂತರ ಕೊಹ್ಲಿ ಮೇಲೆ ಗಂಗೂಲಿ ವಿಶ್ವಾಸ ಕಳೆದುಕೊಂಡರು. ಪರಿಣಾಮ ಏಕದಿನ ತಂಡದ ನಾಯಕತ್ವವನ್ನೂ ಕಳೆದುಕೊಳ್ಳಬೇಕಾಯಿತು” ಎಂದು ಖಾಸಗಿ ವಾಹಿನಿಯ ರಹಸ್ಯ ಕಾರ್ಯಾಚರಣೆಯಲ್ಲಿ ಚೇತನ್ ಶರ್ಮಾ ಹೇಳಿದ್ದರು.

ಇದನ್ನೂ ಓದಿ : Chetan Sharma sting operation : ಫಿಟ್’ನೆಸ್‌ಗಾಗಿ ಇಂಜೆಕ್ಷನ್ ತೆಗೆದುಕೊಳ್ತಾರಂತೆ ಟೀಮ್ ಇಂಡಿಯಾ ಆಟಗಾರರು; ಶಾಕಿಂಗ್ ರಹಸ್ಯ ಬಿಚ್ಚಿಟ್ಟ ಆಯ್ಕೆ ಸಮಿತಿಯ ಮುಖ್ಯಸ್ಥ

ಇದನ್ನೂ ಓದಿ : Jasprit Bumrah : ಆಸೀಸ್ ವಿರುದ್ಧದ ಏಕದಿನ ಸರಣಿಗೂ ಟೀಮ್ ಇಂಡಿಯಾ ಸ್ಟಾರ್ ಔಟ್, ಐಪಿಎಲ್‌ನಲ್ಲಿ ಆಡಲು ಇಷ್ಟೆಲ್ಲಾ ನಾಟಕ

BCCI national selector Chetan Sharma resign after sting operation

Comments are closed.