Loan facility to street vendors : ಸಿಎಂ ಬೊಮ್ಮಾಯಿ ರಾಜ್ಯ ಬಜೆಟ್‌ 2023 : 69,000 ಬೀದಿ ವ್ಯಾಪಾರಿಗಳಿಗೆ 70 ಕೋಟಿ ಸಾಲ ಮಂಜೂರು

ಬೆಂಗಳೂರು: ಕರ್ನಾಟಕ ಬಜೆಟ್​​ಗೆ (Karnataka Budget 2023) ಆರಂಭವಾಗಿದ್ದು, ಇಂದು 10.15ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Bommai State Budget 2023) ಬಜೆಟ್ ಮಂಡನೆ ಮಾಡಿದ್ದಾರೆ. ಇದು ಈ ಸರಕಾರದ ಕೊನೆಯ ಬಜೆಟ್ ಆಗಿದ್ದು, ಬೊಮ್ಮಾಯಿ ಅವರು ಮಂಡನೆ ಮಾಡುತ್ತಿರುವ ಎರಡನೇ ಬಜೆಟ್ ಆಗಿದೆ. ಈ ಬಾರಿ ಸಿಎಂ ಬೊಮ್ಮಾಯಿ ರಾಜ್ಯ ಬಜೆಟ್‌ನಲ್ಲಿ ಬೀದಿ ವ್ಯಾಪಾರಿಗಳಿಗೂ ಪ್ರಾಶ್ಯತೆಯನ್ನು ನೀಡಿದ್ದಾರೆ. ರಾಜ್ಯ ಬಜೆಟ್‌ನಲ್ಲಿ 69,000 ಬೀದಿ ವ್ಯಾಪಾರಿಗಳಿಗೆ 70 ಕೋಟಿ ಸಾಲ ಮಂಜೂರು (Loan facility to street vendors) ಮಾಡಲಾಗುವುದು ಎಂದು ಸಿಎಂ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.

ರಾಜ್ಯ ಬಜೆಟ್‌ನಲ್ಲಿ 69,000 ಬೀದಿ ವ್ಯಾಪಾರಿಗಳಿಗೆ 70 ಕೋಟಿ ಸಾಲ ಮಂಜೂರಾತಿಯಿಂದ ಸಣ್ಣ ವ್ಯಾಪಾರಿಗಳಿಗೆ ಪ್ರೋತ್ಸಾಹ ನೀಡಿದ್ದಾರೆ. ಕರೋನದಂತಹ ಮಹಾಮಾರಿಯಿಂದ ತತ್ತರಿಸಿದ ಬೀದಿ ವ್ಯಾಪಾರಿಗಳಿಗೆ ಇದ್ದರಿಂದ ಚೇತರಿಕೆಗೆ ಪ್ರೋತ್ಸಾಹ ಸಿಕ್ಕಂತೆ ಆಗುತ್ತದೆ. ಕರೋನಾ ಮಹಾಮಾರಿ ಬಂದ ದಿನದಿಂದ ಎಷ್ಟೋ ಬೀದಿ ವ್ಯಾಪಾರಿಗಳು ಜೀವ ಕಳೆದುಕೊಳ್ಳುವಂತೆ ಆಗಿದೆ. ಆದರೆ ಇದೀಗ ರಾಜ್ಯ ಬಜೆಟ್‌ನಿಂದ ಜೀವ ಬಂದಂತೆ ಆಗಿದೆ. ಇದ್ದರಿಂದ ಬೀದಿ ವ್ಯಾಪಾರಿಗಳು ತಮ್ಮ ವ್ಯಾಪಾರದಲ್ಲಿ ಹೆಚ್ಚು ಹೆಚ್ಚು ತಮ್ಮನ್ನು ತೊಡಗಿಸಿಕೊಳ್ಳುವಂತೆ ಆಗಿದೆ.

ಇದನ್ನೂ ಓದಿ : Agriculture Budget 2023 : ಕೃಷಿಕರಿಗೆ ಬೆಲ್ಲದಂತ ಬಜೆಟ್: ಇದು ಬೊಮ್ಮಾಯಿ ಬೊಕ್ಕಸದ ಕೃಷಿ ಲೆಕ್ಕಾಚಾರ

ಇದನ್ನೂ ಓದಿ : ಬೊಮ್ಮಾಯಿ ರಾಜ್ಯ ಬಜೆಟ್‌ 2023 : ಎಸ್‌ಸಿ, ಎಸ್‌ಟಿ ಬಿಪಿಎಲ್‌ ಕಾರ್ಡ್‌ ಹೊಂದಿದವರಿಗೆ ಉಚಿತ ವಿದ್ಯುತ್

ಇದನ್ನೂ ಓದಿ : Karnataka Budget 2023 : CRZ ಮಾನದಂಡ ಸರಳೀಕರಣ : ಪರಿಸರ ಸ್ನೇಹಿ ಪ್ರವಾಸೋದ್ಯಮಕ್ಕೆ ವಿಶೇಷ ಯೋಜನೆ

ರಾಜ್ಯದಾದ್ಯಂತ ಇರುವ ಬೀದಿ ವ್ಯಾಪಾರಿಗಳಿಗೆ ಮೂಲಭೂತ ಸೌಲಭ್ಯ ಇಲ್ಲದೇ ತಮ್ಮ ವ್ಯೌಹಾರದಲ್ಲಿ ಕಷ್ಟ ಪಡುವಂತೆ ಆಗಿತ್ತು. ಹಾಗೆಯೇ ಅದರಿಂದ ಬಂದ ಲಾಭದಿಂದ ತಮ್ಮ ಕುಟುಂಬ ಜೀವನವನ್ನು ಸಾಗಿಸುವುದು ಕಷ್ಟಕರವಾಗಿತ್ತು. ಆದರೆ ಈ ಬಾರಿ ಬಜೆಟ್‌ನಲ್ಲಿ ಸಾಲ ಸೌಲಭ್ಯದಿಂದ ತಮ್ಮ ವ್ಯಾಪಾರ ಹಾಗೂ ತಮ್ಮ ಜೀವನಕ್ಕೂ ಬೆಂಬಲ ನೀಡಿದಂತೆ ಆಗಿದೆ.

Loan facility to street vendors: CM Bommai State Budget 2023: 70 crore loan sanctioned to 69,000 street vendors

Comments are closed.