ಬಿಸಿಸಿಐ ಸೀನಿಯರ್ ಮಹಿಳಾ ಏಕದಿನ ಟ್ರೋಫಿ: ಫೈನಲ್‌ನಲ್ಲಿ ಮತ್ತೆ ನಿರಾಸೆ, ರನ್ನರ್ಸ್ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟ ಕರ್ನಾಟಕದ ವನಿತೆಯರು

ರಾಂಚಿ: ಕರ್ನಾಟಕ ಮಹಿಳಾ ಕ್ರಿಕೆಟ್ ತಂಡ ಬಿಸಿಸಿಐ ಸೀನಿಯರ್ ಮಹಿಳಾ ಏಕದಿನ ಟ್ರೋಫಿಯ (BCCI SENIOR WOMENS ONE DAY TROPHY) ಫೈನಲ್’ನಲ್ಲಿ ಮತ್ತೆ ನಿರಾಸೆ ಅನುಭವಿಸಿದ್ದು, ರನ್ನರ್ಸ್ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ.

ರಾಂಚಿಯ JSCA ಇಂಟರ್’ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ವೇದಾ ಕೃಷ್ಣಮೂರ್ತಿ ಸಾರಥ್ಯದ ಕರ್ನಾಟಕ ತಂಡ, ರೇಲ್ವೇಸ್ ವಿರುದ್ಧ 4 ವಿಕೆಟ್’ಗಳ ಸೋಲು ಅನುಭವಿಸಿತು. ಕಳೆದ ಬಾರಿಯೂ ಫೈನಲ್’ನಲ್ಲಿ ರೇಲ್ವೇಸ್ ವಿರುದ್ಧ ಸೋತಿದ್ದ ಕರ್ನಾಟಕದ ವನಿತೆಯರು ಸತತ 2ನೇ ಬಾರಿಯೂ ರನ್ನರ್ಸ್ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡರು.

ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕರ್ನಾಟಕ ತಂಡ 49.4 ಓವರ್’ಗಳಲ್ಲಿ 163 ರನ್’ಗಳ ಅಲ್ಪ ಮೊತ್ತಕ್ಕೆ ಆಲೌಟಾಯಿತು. ಅಮೋಘ ಫಾರ್ಮ್’ನಲ್ಲಿದ್ದ ಆರಂಭಿಕ ಬ್ಯಾಟರ್ ವೃಂದಾ ದಿನೇಶ್ ಫೈನಲ್’ನಲ್ಲಿ ಮುಗ್ಗರಿಸಿ 7 ರನ್ನಿಗೆ ಔಟಾದ್ರೆ, ಮೂರನೇ ಕ್ರಮಾಂಕದಲ್ಲಿ ದಿವ್ಯಾ ಜ್ಞಾನಾನಂದ 69 ರನ್ ಗಳಿಸಿದರು. 4ನೇ ಕ್ರಮಾಂಕದಲ್ಲಿ ಕ್ರೀಸ್’ಗಿಳಿದ ನಾಯಕಿ ವೇದಾ ಕೃಷ್ಣಮೂರ್ತಿ ಕೇವಲ 10 ರನ್ನಿಗೆ ಔಟಾಗಿದ್ದರಿಂದ ಕರ್ನಾಟಕ ಅಲ್ಪ ಮೊತ್ತಕ್ಕೆ ಕುಸಿಯುವಂತಾಯಿತು.

ನಂತರ 164 ರನ್’ಗಳ ಸುಲಭ ಗುರಿ ಬೆನ್ನಟ್ಟಿದ ರೇಲ್ವೇಸ್, 47.3 ಓವರ್’ಗಳಲ್ಲಿ 6 ವಿಕೆಟ್’ಗೆ 169 ರನ್ ಗಳಿಸುವ ಮೂಲಕ ಚಾಂಪಿಯನ್ ಪಟ್ಟಕ್ಕೇರಿತು. ಈ ಮೂಲಕ ದಾಖಲೆಯ 14ನೇ ಬಾರಿ ರೇಲ್ವೇಸ್ ತಂಡ ತಂಡ ಬಿಸಿಸಿಐ ಸೀನಿಯರ್ ಮಹಿಳಾ ಏಕದಿನ ಟ್ರೋಫಿಯಲ್ಲಿ ಪ್ರಶಸ್ತಿ ಗೆದ್ದ ಸಾಧನೆ ಮಾಡಿತು.

ಇದನ್ನೂ ಓದಿ : KL Rahul took Sai baba blessing : ಕಾಂಗರೂಬೇಟೆಗೆ ಮುನ್ನ ಸಾಯಿ ಬಾಬಾ ದರ್ಶನ ಪಡೆದ ರಾಹುಲ್, ಕನ್ನಡಿಗನಿಗೆ ಸಿಗಲಿದ್ಯಾ ಬಾಬಾ ಕೃಪೆ?

ಇದನ್ನೂ ಓದಿ : Border-Gavaskar Test series 2023 : ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಭಾರತವೇ ಕಿಂಗ್, ಹೇಗಿದೆ ಗೊತ್ತಾ ಕಾಂಗರೂ ವಿರುದ್ಧ ಟೀಮ್ ಇಂಡಿಯಾ ದಾಖಲೆ?

ಇದನ್ನೂ ಓದಿ : Ranji Semi final: ನಾಳೆಯಿಂದ ಚಿನ್ನಸ್ವಾಮಿಯಲ್ಲಿ ರಣಜಿ ಸೆಮಿಫೈನಲ್: ಸೌರಾಷ್ಟ್ರ ವಿರುದ್ಧ ಕರ್ನಾಟಕಕ್ಕೆ ಸೇಡಿನ ಸಮರ

164 ರನ್’ಗಳ ಚೇಸಿಂಗ್ ವೇಳೆ ಕರ್ನಾಟಕ ವನಿತೆಯರ ಸಂಘಟಿತ ದಾಳಿಗೆ ತತ್ತರಿಸಿ 65 ರನ್ನಿಗೆ 4 ವಿಕೆಟ್ ಕಳೆದುಕೊಂಡಿದ್ದ ರೇಲ್ವೇಸ್ ಒಂದು ಹಂತದಲ್ಲಿ ಸೋಲಿನ ಸುಳಿಗೆ ಸಿಲುಕಿತ್ತು. ಆದರೆ ಕೆಳ ಮಧ್ಯಮ ಕ್ರಮಾಂಕದಲ್ಲಿ ದಯಾಳನ್ ಹೇಮಲತಾ ಅಜೇಯ 38 ರನ್, ತನುಜಾ ಸರ್ಕಾರ್ 25 ರನ್ ಮತ್ತು ತನುಜಾ ಕನ್ವರ್ 31 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

BCCI SENIOR WOMENS ONE DAY TROPHY : BCCI Senior Women’s ODI Trophy: Disappointment again in final, Karnataka women satisfied with runners-up position

Comments are closed.