ಮಾರ್ಚ್ 4ರಿಂದ ಮಹಿಳಾ ಐಪಿಎಲ್; ಫೆಬ್ರವರಿ 13ಕ್ಕೆ ಆಟಗಾರ್ತಿಯರ ಹರಾಜು, ಯಾರ ಮೂಲ ಬೆಲೆ ಎಷ್ಟು? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಮುಂಬೈ: ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ (Women IPL 2023 ) ಟೂರ್ನಿ ಮಾರ್ಚ್ 4ರಿಂದ 26ರವರೆಗೆ ನಡೆಯಲಿದ್ದು, ಫೆಬ್ರವರಿ 13ರಂದು ಮುಂಬೈನಲ್ಲಿ ಆಟಗಾರ್ತಿಯರ ಹರಾಜು ಪ್ರಕ್ರಿಯೆ ನಡೆಯಲಿದೆ (Women’s Premier League Player Auction). ಒಟ್ಟು 409 ಆಟಗಾರ್ತಿಯರು ಅಂತಿಮ ಹರಾಜು ಪಟ್ಟಿಯಲ್ಲಿದ್ದು, ಇದರಲ್ಲಿ 246 ಭಾರತೀಯರು ಮತ್ತು 163 ವಿದೇಶಿ ಆಟಗಾರ್ತಿಯರು.

ಮಹಿಳಾ ಐಪಿಎಲ್ ಆಟಗಾರ್ತಿಯರ ಹರಾಜು (Women IPL 2023 Player Auction)

  • ಒಟ್ಟು ಆಟಗಾರ್ತಿಯರು 409
  • ಭಾರತೀಯ ಆಟಗಾರ್ತಿಯರು 246
  • ವಿದೇಶೀ ಆಟಗಾರ್ತಿಯರು 163
  • 202 ಅಂತರಾಷ್ಟ್ರೀಯ ಆಟಗಾರ್ತಿಯರು
  • ಐದು ತಂಡಗಳಲ್ಲಿ ಒಟ್ಟು 90ಮಂದಿ ಆಟಗಾರ್ತಿಯರಿಗೆ ಅವಕಾಶ
  • ಐದು ತಂಡಗಳಲ್ಲಿ ಒಟ್ಟು 30 ಮಂದಿ ವಿದೇಶಿ ಆಟಗಾರ್ತಿಯರಿಗೆ ಅವಕಾಶ
  • ಗರಿಷ್ಠ ಮೂಲಬೆಲೆ 50 ಲಕ್ಷ ರೂಪಾಯಿ.

ಮಹಿಳಾ ಐಪಿಎಲ್ ಆಟಗಾರ್ತಿಯರ ಹರಾಜಿನಲ್ಲಿ 50 ಲಕ್ಷ ರೂಪಾಯಿ ಗರಿಷ್ಠ ಮೂಲ ಬೆಲೆ. ಭಾರತ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್, ಉಪನಾಯಕಿ ಸ್ಮೃತಿ ಮಂಧನ, ಆಲ್ರೌಂಡರ್ ದೀಪ್ತಿ ಶರ್ಮಾ, ಭಾರತ ಮಹಿಳಾ ಅಂಡರ್-19 ವಿಶ್ವಕಪ್ ವಿಜೇತ ತಂಡದ ನಾಯಕಿ ಶೆಫಾಲಿ ವರ್ಮಾ ಸಹಿತ ಒಟ್ಟು 24 ಆಟಗಾರ್ತಿಯರು 50 ಲಕ್ಷ ಮೂಲ ಬೆಲೆ ಹೊಂದಿದ್ದಾರೆ. ಕರ್ನಾಟಕ ತಂಡದ ನಾಯಕಿ ವೇದಾ ಕೃಷ್ಣಮೂರ್ತಿ ಸೇರಿದಂತೆ ರಾಜ್ಯದ ಒಟ್ಟು 21 ಆಟಗಾರ್ತಿಯರು ಅಂತಿಮ ಹರಾಜು ಪಟ್ಟಿಯಲ್ಲಿದ್ದಾರೆ.

50 ಲಕ್ಷ ಮೂಲ ಬೆಲೆಯ ಆಟಗಾರ್ತಿಯರು

ಭಾರತ: ಹರ್ಮನ್ ಪ್ರೀತ್ ಕೌರ್, ಸ್ಮೃತಿ ಮಂಧನ, ದೀಪ್ತಿ ಶರ್ಮಾ, ಶೆಫಾಲಿ ವರ್ಮಾ, ರೇಣುಕಾ ಸಿಂಗ್, ಜೆಮೈಮಾ ರಾಡ್ರಿಗ್ಸ್, ಪೂಜಾ ವಸ್ತ್ರಕಾರ್, ರಿಚಾ ಘೋಷ್, ಸ್ನೇಹ್ ರಾಣಾ, ಮೇಘನಾ ಸಿಂಗ್.

ಇಂಗ್ಲೆಂಡ್: ಸೋಫೀ ಎಕ್ಲಿಸ್ಟೋನ್, ನಥಾಲೀ ಸಿವರ್, ಡ್ಯಾನಿಯೆಲ್ ವ್ಯಾಟ್, ಕ್ಯಾಥರಿನ್ ಬ್ರಂಟ್.

ನ್ಯೂಜಿಲೆಂಡ್: ಸೋಫೀ ಡಿವೈನ್.

ಆಸ್ಟ್ರೇಲಿಯಾ: ಆಶ್ಲೇ ಗಾರ್ಡ್ನರ್, ಎಲೀಸ್ ಪೆರಿ, ಮೆಗ್ ಲ್ಯಾನಿಂಗ್, ಅಲಿಸಾ ಹೀಲಿ, ಜೆಸ್ ಜೊನಾಸೆನ್, ಡಾರ್ಸೀ ಬ್ರೌನ್.

ವೆಸ್ಟ್ ಇಂಡೀಸ್: ದಿಯೇಂದ್ರ ಡಾಟಿನ್.

ದಕ್ಷಿಣ ಆಫ್ರಿಕಾ: ಸಿನಾಲೊ ಜಫ್ತಾ.

ಜಿಂಬಾಬ್ವೆ: ಲಾರಿನ್ ಫಿರಿ.

ಹರಾಜು ಪಟ್ಟಿಯಲ್ಲಿರುವ ಕರ್ನಾಟಕದ ಆಟಗಾರ್ತಿಯರು:
ವೇದಾ ಕೃಷ್ಣಮೂರ್ತಿ, ಸಿ.ಪ್ರತ್ಯೂಷಾ, ಮೋನಿಕಾ ಪಟೇಲ್ (30 ಲಕ್ಷ ಮೂಲಬೆಲೆ),
ವೃಂದಾ ದಿನೇಶ್, ದಿವ್ಯಾ ಜ್ಞಾನಾನಂದ, ರೋಷನಿ ಕಿರಣ್, ರಕ್ಷಿತಾ ಕೃಷ್ಣಪ್ಪ, ಪ್ರೇರಣಾ ರಾಜೇಶ್, ಸಂಜನಾ ಬಾಟ್ನಿ, ಪ್ರತ್ಯೂಷಾ, ಸೌಮ್ಯಾ ವರ್ಮಾ, ರಾಮೇಶ್ವರಿ ಗಾಯಕ್ವಾಡ್, ಪುಷ್ಪಾ ಕಿರೇಸೂರ್, ಚಾಂದಸಿ ಕೃಷ್ಣಮೂರ್ತಿ, ಶ್ರೇಯಾಂಕಾ ಪಾಟೀಲ್, ನಿಕ್ಕಿ ಪ್ರಸಾದ್, ಅದಿತಿ ರಾಜೇಶ್, ಶುಭಾ ಸತೀಶ್, ಮಿಥಿಲಾ ವಿನೋದ್, ಸಹನಾ ಪವಾರ್, ಚಂದು.ವಿ., (10 ಲಕ್ಷ ಮೂಲಬೆಲೆ)

ಮಹಿಳಾ ಐಪಿಎಲ್ ಆಟಗಾರ್ತಿಯರ ಹರಾಜು: ಸಂಪೂರ್ಣ ಪಟ್ಟಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ : KL Rahul took Sai baba blessing : ಕಾಂಗರೂಬೇಟೆಗೆ ಮುನ್ನ ಸಾಯಿ ಬಾಬಾ ದರ್ಶನ ಪಡೆದ ರಾಹುಲ್, ಕನ್ನಡಿಗನಿಗೆ ಸಿಗಲಿದ್ಯಾ ಬಾಬಾ ಕೃಪೆ?

ಇದನ್ನೂ ಓದಿ : ಬಿಸಿಸಿಐ ಸೀನಿಯರ್ ಮಹಿಳಾ ಏಕದಿನ ಟ್ರೋಫಿ: ಫೈನಲ್‌ನಲ್ಲಿ ಮತ್ತೆ ನಿರಾಸೆ, ರನ್ನರ್ಸ್ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟ ಕರ್ನಾಟಕದ ವನಿತೆಯರು

Women IPL 2023 BCCI to allow 5 foreign players in Playing XI

Comments are closed.