Asia Cup 2022 India vs Hong Kong match: ಭಾರತ Vs ಹಾಂಕಾಂಗ್ ಪಂದ್ಯದಲ್ಲಿ ಕೆ.ಎಲ್ ರಾಹುಲ್ ಮೇಲೆ ಬಿಗ್ ಪ್ರೆಶರ್

ದುಬೈ: (KL Rahul in Asia Cup 2022 India vs Hong Kong match)ಏಷ್ಯಾ ಕಪ್ ಟಿ20 ಟೂರ್ನಿಯ ತನ್ನ 2ನೇ ಲೀಗ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಭಾರತ ತಂಡ ಬುಧವಾರ (ಆಗಸ್ಟ್ 31ರಂದು) ಕ್ರಿಕೆಟ್ ಶಿಶು ಹಾಂಕಾಂಗ್ ತಂಡವನ್ನು ಎದುರಿಸಲಿದೆ.

ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾ, ಹಾಂಕಾಂಗ್ ವಿರುದ್ಧದ ಪಂದ್ಯವನ್ನು ಗೆದ್ದು ‘ಎ’ ಗ್ರೂಪ್’ನಿಂದ ಅಜೇಯವಾಗಿ ಸೂಪರ್ 4 ಹಂತಕ್ಕೇರುವ ವಿಶ್ವಾಸದಲ್ಲಿದೆ. ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು 5 ವಿಕೆಟ್’ಗಳಿಂದ ಸೋಲಿಸಿದ್ದ ಭಾರತಕ್ಕೆ ಹಾಂಕಾಂಗ್ ವಿರುದ್ಧ ಯಾವುದೇ ಒತ್ತಡವಿಲ್ಲ. ಒತ್ತಡವೇನಿದ್ದರೂ ಟೀಮ್ ಇಂಡಿಯಾ ಉಪನಾಯಕ ಕೆ.ಎಲ್ ರಾಹುಲ್ (KL Rahul)

(KL Rahul in Asia Cup 2022 India vs Hong Kong match)ಹೌದು ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ಕಂಬ್ಯಾಕ್ ಮಾಡಿದ ನಂತರ ಫಾರ್ಮ್ ಕಂಡುಕೊಳ್ಳಲು ಪರದಾಡುತ್ತಿರುವ ಕನ್ನಡಿಗ ರಾಹುಲ್, ಹಾಂಕಾಂಗ್ ವಿರುದ್ಧ ದೊಡ್ಡ ರನ್ ಗಳಿಸಲೇಬೇಕಾದ ಒತ್ತಡದಲ್ಲಿದ್ದಾರೆ. ಭಾನುವಾರ ಪಾಕಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ ರಾಹುಲ್ ಎದುರಿಸಿದ ಮೊದಲ ಎಸೆತದಲ್ಲೇ ಶೂನ್ಯಕ್ಕೆ ಔಟಾಗಿದ್ದರು. ಪಾಕ್ ನ ಯುವ ವೇಗಿ ನಸೀಮ್ ಶಾ ಅವರ ಎಸೆತದಲ್ಲಿ ರಾಹುಲ್ ಇನ್’ಸೈಡ್ ಎಡ್ಜ್ ಆಗಿ ಕ್ಲೀನ್ ಬೌಲ್ಡಾಗಿದ್ದರು. ಹೀಗಾಗಿ ಹಾಂಕಾಂಗ್ ವಿರುದ್ಧದ ಪಂದ್ಯದಲ್ಲಿ ಎಲ್ಲರ ಕಣ್ಣು ಕೆ.ಎಲ್ ರಾಹುಲ್ ಅವರ ಮೇಲೆ ನೆಟ್ಟಿದೆ. ಹಾಂಕಾಂಗ್ ವಿರುದ್ಧದ ಪಂದ್ಯಕ್ಕಾಗಿ ರಾಹುಲ್ ಮಂಗಳವಾರ ಕಠಿಣ ಅಭ್ಯಾಸ ನಡೆಸಿದ್ದಾರೆ. ಹಿರಿಯ ಆಟಗಾರರು ವಿಶ್ರಾಂತಿ ಪಡೆದರೂ ಉಪನಾಯಕ ರಾಹುಲ್ ಸತತ 2 ಗಂಟೆಗಳ ಕಾಲ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಿದ್ದಾರೆ.

ಇದನ್ನೂ ಓದಿ: ಸಚಿನ್ ತೆಂಡೂಲ್ಕರ್, ಧೋನಿ, ಕೊಹ್ಲಿಗೂ ಸಾಧ್ಯವಾಗದ ದಾಖಲೆ ಬರೆದ ಹಿಟ್ ಮ್ಯಾನ್ ರೋಹಿತ್ ಶರ್ಮಾ!

ಇದನ್ನೂ ಓದಿ: ನಟಿ ರಮ್ಯಾ ನಿರ್ಮಾಣ ಸಂಸ್ಥೆಗೆ ಆ್ಯಪಲ್​ ಬಾಕ್ಸ್​ ಎಂದೇ ಹೆಸರಿಟ್ಟಿದ್ದೇಕೆ ಗೊತ್ತಾ

ಇದನ್ನೂ ಓದಿ: ಸಾರ್ವಜನಿಕ ಗಣೇಶೋತ್ಸವ ಆಮಂತ್ರಣ ಪತ್ರಿಕೆ ಜೊತೆಯಲ್ಲಿ ಮನೆ ಮನೆಗೆ ಬಂದಿದೆ ಹಿಂದೂ ಜಾಗೃತಿ ಸಂದೇಶ

ಕಳೆದ ಜಿಂಬಾಬ್ವೆ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ತಂಡದ ರಾಹುಲ್ ಅವರ ನಾಯಕತ್ವದಲ್ಲಿ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿತ್ತು. ಆ ಸರಣಿಯ ಮೂಲಕ 6 ತಿಂಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ಮರಳಿದ್ದ ರಾಹುಲ್, ಆಡಿದ 2 ಇನ್ನಿಂಗ್ಸ್’ಗಳಿಂದ ಕೇವಲ 31 ರನ್ ಗಳಿಸಿದ್ದರು. ಪಾಕಿಸ್ತಾನ ವಿರುದ್ಧದ ಏಷ್ಯಾ ಕಪ್ ಪಂದ್ಯದಲ್ಲೂ ವಿಫಲರಾಗಿರುವ ರಾಹುಲ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಕ್ರಿಕೆಟ್ ಪ್ರಿಯರಿಂದ ಟೀಕೆಗಳು ವ್ಯಕ್ತವಾಗುತ್ತಿವೆ.

Big pressure on KL Rahul in Asia Cup 2022 India vs Hong Kong match

Comments are closed.