Prime Minister’s arrival in mangalore : ಕಡಲನಗರಿಗೆ ಪ್ರಧಾನಿ ಆಗಮನ ಬೆನ್ನಲ್ಲೇ ಗೊಂದಲ ಸೃಷ್ಟಿಸಲು ಯತ್ನ :2 ಎಫ್​ಐಆರ್​ ದಾಖಲು

ಮಂಗಳೂರು : Prime Minister’s arrival in mangalore : ಸೆಪ್ಟೆಂಬರ್ 2ರಂದು ಕಡಲನಗರಿ ಮಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುವ ಬೃಹತ್ ಸಮಾವೇಶಕ್ಕೆ ಅಂತಿಮ ಹಂತದ ಸಿದ್ದತೆ ನಡೆಯುತ್ತಿದೆ. 25 ಎಕರೆ ಪ್ರದೇಶದಲ್ಲಿ ಬೃಹತ್ ಕಾರ್ಯಕ್ರಮ ನಡೆಯಲಿದ್ದು ಜರ್ಮನ್ ಟೆಕ್ನಾಲಜಿ ಬೃಹತ್ ಪೆಂಡಾಲ್ ಅಳವಡಿಕೆ‌ ಕಾರ್ಯವಾಗುತ್ತಿದೆ. ಈ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಕಾರ್ಯಕ್ರಮದ ಬಗ್ಗೆ ಗೊಂದಲ ಸೃಷ್ಟಿಸಲು ಯತ್ನಿಸಿರುವ ಬಗ್ಗೆ ಎರಡು ಎಫ್.ಐ.ಆರ್ ಕೂಡಾ ದಾಖಲಾಗಿದೆ.

ಮಂಗಳೂರು ನಗರ ಹೊರವಲಯದ ಬಂಗ್ರಕೂಳೂರಿನ ಗೋಲ್ಟ್ ಪಿಂಚ್ ಸಿಟಿ ಮೈದಾನದಲ್ಲಿ ನಮೋ ಕಾರ್ಯಕ್ರಮಕ್ಕೆ ಭರದ ಸಿದ್ದತೆ ನಡೆಯುತ್ತಿದೆ. ಕಾರ್ಯಕ್ರಮದಲ್ಲಿ ಒಂದೂವರೆ ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆಯಿದ್ದು 25 ಎಕರೆ ಪ್ರದೇಶದಲ್ಲಿ ಜರ್ಮನ್ ತಂತ್ರಜ್ಞಾನದ ಬೃಹತ್ ಪೆಂಡಾಲ್ ಅಳವಡಿಸುವ‌ ಕಾರ್ಯ ನಡೆದಿದೆ. ಸಮಾವೇಶ ನಡೆಯುವ ಸ್ಥಳದಲ್ಲಿ ನೂರಾರು ಕಾರ್ಮಿಕರಿಂದ ಕೆಲಸ ಕಾರ್ಯ ಸಾಗಿದೆ. ಮಧ್ಯಾಹ್ನ 12;55ಕ್ಕೆ ವಿಶೇಷ ವಿಮಾನದ ಮೂಲಕ ಕೊಚ್ಚಿಯಿಂದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಧಾನಿ ಬಂದಿಳಿಯಲಿದ್ದಾರೆ. ಅಲ್ಲಿಂದ ಹೆಲಿಕಾಫ್ಟರ್ ಮೂಲಕ ಎನ್.ಎಂ.ಪಿ.ಎ ಹೆಲಿಪ್ಯಾಡ್‌ಗೆ ಬರಲಿರುವ ಪ್ರಧಾನಿ ಬಳಿಕ ಸಮಾವೇಶ ನಡೆಯುವ ಸ್ಥಳಕ್ಕೆ ಆಗಮಿಸಲಿದ್ದಾರೆ. ಸರ್ಕಾರಿ ಕಾರ್ಯಕ್ರಮ ಇದಾಗಿದ್ದು ಎನ್.ಎಂ.ಪಿ.ಎ, ಎಂ.ಆರ್.ಪಿ.ಎಲ್, ರಾಜ್ಯ ಮೀನುಗಾರಿಕೆ ಇಲಾಖೆಯ ಯೋಜನೆಯ ಶಿಲಾನ್ಯಾಸ, ಲೋಕಾರ್ಪಣೆಯನ್ನು ಪ್ರಧಾನಿ ಮಾಡಲಿದ್ದಾರೆ.

ಪ್ರಧಾನಿ ಕಾರ್ಯಕ್ರಮದ ಹಿನ್ನಲೆಯಲ್ಲಿ ಎಸ್.ಪಿ.ಜಿ ಅಧಿಕಾರಿಗಳು ಕಳೆದ ಮೂರು ದಿನಗಳಿಂದ ಮಂಗಳೂರಿನಲ್ಲೇ ಮೊಕ್ಕಾಂ ಹೂಡಿದ್ದಾರೆ. ಪೊಲೀಸ್ ಇಲಾಖೆ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಹಲವು ಕ್ರಮ ಕೈಗೊಂಡಿದೆ. ಸಮಾವೇಶಕ್ಕೆ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಿಂದ ಕಾರ್ಯಕರ್ತರನ್ನು ಕರೆ ತರುವುದಕ್ಕೆ ಜಿಲ್ಲಾ ಬಿ.ಜೆ.ಪಿ 1461 ಬಸ್, 200 ಟೆಂಪೋ ಟ್ರಾವೆಲ್‌ಗಳ ಬುಕ್ಕಿಂಗ್ ಮಾಡಿದೆ. ಹೀಗಾಗಿ ವಾಹನಗಳ ಪಾರ್ಕಿಂಗ್, ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳ ಡೈವರ್ಸನ್ ಸೇರಿದಂತೆ ಹಲವು ಕ್ರಮಗಳ ಬಗ್ಗೆ ಪ್ಲ್ಯಾನ್ ಮಾಡಿಕೊಂಡಿದೆ. ಈ ನಡುವೆ ಕಾರ್ಯಕ್ರಮದಲ್ಲಿ ದಕ್ಷಿಣಕನ್ನಡ ಸಂಸದ, ಬಿ.ಜೆ.ಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವಿರುದ್ದ ಆಕ್ರೋಶ ಪ್ರದರ್ಶನಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. ಫೋಟೋ ಒಂದನ್ನು ಮಾರ್ಪ್ ಮಾಡಿ ಆಕ್ಷೇಪಾರ್ಹವಾಗಿ ಸರ್ಕ್ಯೂಲೇಟ್ ಮಾಡಲಾಗುತ್ತಿದೆ. ಹೀಗಾಗಿ ಪ್ರಧಾನಿ ಕಾರ್ಯಕ್ರಮದಲ್ಲಿ ಗೊಂದಲ ಉಂಟು ಮಾಡಿದ ಕಾರಣಕ್ಕೆ ಎರಡು ಎಫ್.ಐ.ಆರ್ ದಾಖಲು ಮಾಡಲಾಗಿದೆ. ಕೆಲವರಿಂದ ಶೂರಿಟಿ ಬಾಂಡ್ ಪಡೆದು ಅವರಿಂದ ಮುಚ್ಚಳಿಕೆ ಪಡೆಯಲಾಗಿದೆ.

ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ಸರ್ಬಾನಂದ ಸೋನವಾಲ್, ಶೋಭಾ ಕರಂದ್ಲಾಜೆ ಸೇರಿದಂತೆ ಬಿಜೆಪಿ ನಾಯಕರು ಭಾಗವಹಿಸಲಿದ್ದಾರೆ. ಈಗಾಗಲೇ ಕಾರ್ಯಕ್ರಮದ 80% ಪೂರ್ವ ಸಿದ್ಧತೆಯಾಗಿದ್ದು ಇನ್ನು ಒಂದು ದಿನ ಅಷ್ಟೇ ನಮೋ ಕಾರ್ಯಕ್ರಮಕ್ಕೆ ಬಾಕಿಯಿದೆ.

ಇದನ್ನು ಓದಿ : actress ramya come back to movie :ನಟಿ ರಮ್ಯಾ ನಿರ್ಮಾಣ ಸಂಸ್ಥೆಗೆ ಆ್ಯಪಲ್​ ಬಾಕ್ಸ್​ ಎಂದೇ ಹೆಸರಿಟ್ಟಿದ್ದೇಕೆ ಗೊತ್ತಾ

ಇದನ್ನೂ ಓದಿ : Hindu awareness letter : ಸಾರ್ವಜನಿಕ ಗಣೇಶೋತ್ಸವ ಆಮಂತ್ರಣ ಪತ್ರಿಕೆ ಜೊತೆಯಲ್ಲಿ ಮನೆ ಮನೆಗೆ ಬಂದಿದೆ ಹಿಂದೂ ಜಾಗೃತಿ ಸಂದೇಶ

An attempt was made to create confusion after the Prime Minister’s arrival in mangalore

Comments are closed.