Exclusive : ದ್ವಿಶತಕವೀರ ಇಶಾನ್ ಕಿಶನ್ ಯಶಸ್ಸಿನ ಹಿಂದಿದೆ ಅಣ್ಣನ ತ್ಯಾಗ.. ಇದು ಸ್ವತಃ ಇಶಾನ್ ಹೇಳಿದ ಸತ್ಯ

ಬೆಂಗಳೂರು: ( Ishan Kishan success )ಬಾಂಗ್ಲಾದೇಶ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಅಮೋಘ ದ್ವಿಶತಕ ಬಾರಿಸಿರುವ ಭಾರತದ ಯುವ ಎಡಗೈ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಇಶಾನ್ ಕಿಶನ್ (Ishan Kishan) ಇಡೀ ಕ್ರಿಕೆಟ್ ಜಗತ್ತೇ ತಮ್ಮತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ವೇಗದ ದ್ವಿಶತಕ ಬಾರಿಸಿದ ವಿಶ್ವದಾಖಲೆ ಬರೆದಿದ್ದಾರೆ. ಇಶಾನ್ ಕಿಶನ್ ಅವರ ಈ ಸಾಧನೆಯ ಹಿಂದೆ ಅಣ್ಣನ (Raj Kishan) ತ್ಯಾಗ ಇರುವುದು ವಿಶೇಷ.

ಶನಿವಾರ ಛಟ್ಟೋಗ್ರಾಮ್’ನಲ್ಲಿ ನಡೆದ ಆತಿಥೇಯ ಬಾಂಗ್ಲಾದೇಶ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ (India vs Bangladesh ODI series) ಅಬ್ಬರಿಸಿದ್ದ 24 ವರ್ಷದ ಇಶಾನ್ ಕಿಶನ್, ಏಕದಿನ ವೃತ್ತಿಜೀವನದಲ್ಲಿ ಚೊಚ್ಚಲ ಶತಕ ಸಿಡಿಸಿದ್ದಷ್ಟೇ ಅಲ್ಲದೆ, ಆ ಶತಕವನ್ನು ದ್ವಿಶತಕವನ್ನಾಗಿ ಪರಿವರ್ತಿಸಿದ್ದು ವಿಶೇಷ. ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ವೇಗದ ದ್ವಿಶತಕದ ವಿಶ್ವದಾಖಲೆ ನಿರ್ಮಿಸಿದ ಜಾರ್ಖಂಡ್’ನ 24 ವರ್ಷದ ಎಡಗೈ ದಾಂಡಿಗ ಇಶಾನ್ ಕಿಶನ್ 131 ಎಸೆತಗಳಲ್ಲಿ 24 ಬೌಂಡರಿ ಹಾಗೂ 10 ಅಮೋಘ ಸಿಕ್ಸರ್’ಗಳ ನೆರವಿನಿಂದ 210 ರನ್ ಸಿಡಿಸಿದ್ದರು. ಈ ಮೂಲಕ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ದ್ವಿಶತಕ ಸಿಡಿಸಿದ ಭಾರತದ ನಾಲ್ಕನೇ ಆಟಗಾರನಾಗಿ ಮೂಡಿ ಬಂದರು. ಇದಕ್ಕೂ ಮೊದಲು ಸಚಿನ್ ತೆಂಡೂಲ್ಕಕ್, ವೀರೇಂದ್ರ ಸೆಹ್ವಾಗ್ ಮತ್ತು ರೋಹಿತ್ ಶರ್ಮಾ ಈ ಸಾಧನೆ ಮಾಡಿದ್ದಾರೆ.

ದ್ವಿಶತಕವೀರ ಇಶಾನ್ ಕಿಶನ್ ಅವರ ಈ ಸಾಧನೆಯ ಹಿಂದೆ ಸಹೋದರನ ತ್ಯಾಗವಿದೆ. ಮೂಲತಃ ಬಿಹಾರದವರು. ಆದರೆ ಕ್ರಿಕೆಟ್ ಬದುಕು ಕಟ್ಟಿಕೊಂಡದ್ದು ಧೋನಿ ನಾಡು ಜಾರ್ಖಂಡ್’ ನಲ್ಲಿ. ಇಶಾನ್ ಕಿಶನ್ ಕ್ರಿಕೆಟ್ ಭವಿಷ್ಯವನ್ನು ಅರಸಿ ಬಿಹಾರದ ಪಾಟ್ನಾದಿಂದ ರಾಂಚಿಗೆ ಬಂದವರು. ತಂದೆ, ತಾಯಿ, ಅಣ್ಣ ಪಾಟ್ನಾದಲ್ಲಿದ್ದರೂ 2011ರಲ್ಲಿ ಕೇವಲ 15 ವರ್ಷದ ಹುಡುಗನಾಗಿದ್ದಾಗ ಇಶಾನ್ ರಾಂಚಿಗೆ ಬಂದಿದ್ದರು.

Brother Raj Kishan sacrifice behind Ishan Kishan success 1

ಇಶಾನ್ ಅವರ ಹಿರಿಯ ಸಹೋದರ ರಾಜ್ ಕಿಶನ್ ಕೂಡ ಕ್ರಿಕೆಟ್ ಆಟಗಾರ. ಆದರೆ ತಮ್ಮನಿಗಾಗಿ ಕ್ರಿಕೆಟ್ ಬದುಕನ್ನು ತ್ಯಾಗ ಮಾಡಿ, ಸಹೋದರನ ಯಶಸ್ಸಿನ ಹಿಂದಿನ ಶಕ್ತಿಯಾಗಿ ನಿಂತಿದ್ದಾರೆ. ‘‘ಅಣ್ಣ ನನಗಿಂತಲೂ ಪ್ರತಿಭಾವಂತ ಕ್ರಿಕೆಟಿಗ. ಆದರೆ ನಾನು ಕ್ರಿಕೆಟ್ ಅನ್ನು ತುಂಬಾ ಗಂಭೀರವಾಗಿ ತೆಗೆದುಕೊಂಡಿದ್ದರಿಂದ, ಅಣ್ಣ ಕ್ರಿಕೆಟ್ ಆಡುವುದನ್ನು ನಿಲ್ಲಿಸಿ ನನ್ನ ಬೆಂಬಲಕ್ಕೆ ನಿಂತ. ಚಿಕ್ಕಂದಿನಲ್ಲಿ ಪ್ರತಿ ದಿನ ನನ್ನನ್ನು ಮೈದಾನಕ್ಕೆ ಕರೆದುಕೊಂಡು ಬರುತ್ತಿದ್ದ. ಆತನ ತ್ಯಾಗ, ಪ್ರೋತ್ಸಾಹದಿಂದ ಈ ಮಟ್ಟಕ್ಕೆ ಬೆಳೆದಿದ್ದೇನೆ,’’ ಎಂದು ಅಣ್ಣನ ತ್ಯಾಗದ ಬಗ್ಗೆ ಇಶಾನ್ ಹಿಂದೊಮ್ಮೆ ಹೇಳಿದ್ದರು. 2016ರಲ್ಲಿ ಬಾಂಗ್ಲಾದೇಶದಲ್ಲಿ ನಡೆದ ಐಸಿಸಿ U19 ವಿಶ್ವಕಪ್ ಟೂರ್ನಿಯಲ್ಲಿ ಇಶಾನ್ ಕಿಶನ್ ಭಾರತ ತಂಡವನ್ನು ಮುನ್ನಡೆಸಿದ್ದರು. ಇಶಾನ್ ನಾಯಕತ್ವದಲ್ಲಿ ಭಾರತ ರನ್ನರ್ಸ್ ಅಪ್ ಸ್ಥಾನ ಪಡೆದಿತ್ತು.

ಇದನ್ನೂ ಓದಿ : Sachin Vs Virat : ಅಂದು ಸಚಿನ್, ಇಂದು ಕಿಂಗ್ ಕೊಹ್ಲಿ : ಬಾಂಗ್ಲಾದೇಶ ವಿರುದ್ಧವೇ ನೀಗಿತು ಶತಕದ ಬರ

ಇದನ್ನೂ ಓದಿ : Rahul captaincy lucky : ರಾಹುಲ್ ನಾಯಕತ್ವ ಸಹ ಆಟಗಾರರಿಗೆ ಅದೃಷ್ಟ, ಕಿಂಗ್ ಕೊಹ್ಲಿ, ಗಿಲ್, ಇಶಾನ್.. ಏನಿದು ಅದೃಷ್ಟದಾಟ?

Brother Raj Kishan sacrifice behind Ishan Kishan success

Comments are closed.