Rahul Dravid scuba diving : ಮಾಲ್ದೀವ್ಸ್‌ನಲ್ಲಿ ದ್ರಾವಿಡ್ ಫ್ಯಾಮಿಲಿ, ಸ್ಕೂಬಾ ಡೈವಿಂಗ್ ಸಾಹಸದಲ್ಲಿ ಮಿಂದೆದ್ದ “ದಿ ಗ್ರೇಟ್ ವಾಲ್”

ಬೆಂಗಳೂರು: ಟೀಮ್ ಇಂಡಿಯಾ ಆಟಗಾರರೆಲ್ಲಾ ಐಪಿಎಲ್’ನಲ್ಲಿ ಬ್ಯುಸಿಯಾಗಿದ್ರೆ, ಟೀಮ್ ಇಂಡಿಯಾ ಹೆಡ್ ಕೋಚ್ ರಾಹುಲ್ ದ್ರಾವಿಡ್ (Rahul Dravid) ರಜಾ ದಿನಗಳನ್ನು ಮಾಲ್ದೀವ್ಸ್’ನಲ್ಲಿ ಎಂಜಾಯ್ ಮಾಡ್ತಿದ್ದಾರೆ. ಕ್ರಿಕೆಟ್’ನಿಂದ ಬಿಡುವು ಸಿಕ್ಕಿರುವ ಕಾರಣ ರಾಹುಲ್ ದ್ರಾವಿಡ್ ಕುಟುಂಬ ಸದಸ್ಯರ ಜೊತೆ ಪ್ರಸಿದ್ಧ ಪ್ರವಾಸಿ ತಾಣ ಮಾಲ್ದೀವ್ಸ್’ಗೆ ತೆರಳಿದ್ದಾರೆ. ಪತ್ನಿ ವಿಜೇತಾ, ಪುತ್ರರಾದ ಸಮಿತ್ ಮತ್ತು ಅನ್ವಯ್ ಜೊತೆ ಮಾಲ್ದೀವ್ಸ್’ನಲ್ಲಿರುವ ದ್ರಾವಿಡ್ ಸ್ಕೂಬಾ ಡೈವಿಂಗ್ (Rahul Dravid scuba diving) ಮಾಡಿ ಗಮನ ಸೆಳೆದಿದ್ದಾರೆ.

ಕ್ರಿಕೆಟ್’ನ ಶ್ರೇಷ್ಠ ವಿದ್ಯಾರ್ಥಿಯಾಗಿರುವ ರಾಹುಲ್ ದ್ರಾವಿಡ್ ಪ್ರತೀ ದಿನವನ್ನು ಕಲಿಕೆಯೆಂದೇ ಭಾವಿಸುತ್ತಾರೆ. ಹೊಸತನದ ಕಲಿಕೆಯಲ್ಲಿ ದ್ರಾವಿಡ್ ಸದಾ ಮುಂದು. ಇಲ್ಲಿಯವರೆಗೆ ಸ್ಕೂಬಾ ಡೈವಿಂಗ್‌ (Rahul Dravid scuba diving) ಮಾಡದ ದ್ರಾವಿಡ್, ಮಾಲ್ದೀವ್ಸ್ ಪ್ರವಾಸದಲ್ಲಿ ಹೊಸ ಸಾಹಸ ಮಾಡಿದ್ದಾರೆ. 52ನೇ ವಯಸ್ಸಿನಲ್ಲಿ ದ್ರಾವಿಡ್ ಸ್ಕೂಬಾ ಡೈವಿಂಗ್ ಮಾಡಿರುವ ಚಿತ್ರಗಳನ್ನು ಫ್ಲೀಟ್ ಫೂಟ್ ಅಡ್ವೆಂಟರ್ಸ್ ಸಂಸ್ಥೆ ತನ್ನ ಇನ್’ಸ್ಟಾಗ್ರಾಮ್’ನಲ್ಲಿ ಪೋಸ್ಟ್ ಮಾಡಿದೆ.


ಐಪಿಎಲ್ ಟೂರ್ನಿ ನಡೆಯುತ್ತಿರುವ ಕಾರಣ ಭಾರತ ತಂಡಕ್ಕೆ ಈಗ ಯಾವುದೇ ಅಂತರಾಷ್ಟ್ರೀಯ ಪಂದ್ಯಗಳಿಲ್ಲ. ಹೀಗಾಗಿ ರಾಹುಲ್ ದ್ರಾವಿಡ್ ಕ್ರಿಕೆಟ್’ನಿಂದ ತಾತ್ಕಾಲಿಕ ವಿರಾಮ ಪಡೆದಿದ್ದಾರೆ. ಐಪಿಎಲ್ ಮುಗಿದ ಬೆನ್ನಲ್ಲೇ ಭಾರತ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದು, ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್ ಫೈನಲ್’ನಲ್ಲಿ (ICC World test championship final) ಆಡಲಿದೆ. ಡಬ್ಲ್ಯೂಟಿಸಿ ಫೈನಲ್ (WTC final) ಪಂದ್ಯ ಜೂನ್ 7ರಂದು ಲಂಡನ್’ನಲ್ಲಿರುವ ಓವಲ್ ಮೈದಾನದಲ್ಲಿ ಆರಂಭವಾಗಲಿದ್ದು, ಕಳೆದ ಬಾರಿಯ ರನ್ನರ್ಸ್ ಅಪ್ ಟೀಮ್ ಇಂಡಿಯಾ, ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಆಸ್ಟ್ರೇಲಿಯಾ ವಿರುದ್ಧದ 4 ಪಂದ್ಯಗಳ ಟೆಸ್ಟ್ ಸರಣಿಯನ್ನ 2-1ರಲ್ಲಿ ಗೆದ್ದಿದ್ದ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ, ಸತತ 2ನೇ ಬಾರಿ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್ ಫೈನಲ್ ತಲುಪಿದೆ.

2021ರಲ್ಲಿ ಇಂಗ್ಲೆಂಡ್’ನ ಸೌಥಾಂಪ್ಟನ್ ಮೈದಾನದಲ್ಲಿ ನಡೆದಿದ್ದ ಡಬ್ಲ್ಯೂಟಿಸಿ ಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡ, ನ್ಯೂಜಿಲೆಂಜ್ ವಿರುದ್ಧ ಸೋತು ನಿರಾಸೆ ಅನುಭವಿಸಿತ್ತು.

ಇದನ್ನೂ ಓದಿ : Arjun Tendulkar IPL debut : ಅಪ್ಪ ವಿಶ್ವಕಪ್ ಎತ್ತಿ ಹಿಡಿದ ಮೈದಾನದಲ್ಲೇ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ಅರ್ಜುನ್ ತೆಂಡೂಲ್ಕರ್

ಇದನ್ನೂ ಓದಿ : Virat Kohli unfollows Sourav Ganguly : ತಾರಕಕ್ಕೇರಿದ ಕಿಂಗ್ Vs ದಾದಾ ಫೈಟ್, ಗಂಗೂಲಿಯನ್ನು ಇನ್‌ಸ್ಟಾಗ್ರಾಂನಲ್ಲಿ ಅನ್ ಫಾಲೋ ಮಾಡಿದ ಕೊಹ್ಲಿ

Comments are closed.