Diabetes : ಕಡಿಮೆ ಗ್ಲೈಸೆಮಿಕ್‌ ಇಂಡೆಕ್ಸ್‌ ಹೊಂದಿರುವ ಈ ಹಣ್ಣುಗಳು ಮಧುಮೇಹಿಗಳಿಗೂ ಬೆಸ್ಟ್‌

ನಮ್ಮ ದೇಹವು ಸರಿಯಾದ ಪ್ರಮಾಣದಲ್ಲಿ ಇನ್ಸುಲಿನ್‌ ಅನ್ನು ಉತ್ಪಾದಿಸದಿದ್ದರೆ ಮಧುಮೇಹ (Diabetic Patients) ಕಾಣಿಸುತ್ತದೆ. ಟೈಪ್‌–1, ಟೈಪ್‌–2 ಎಂದೆಲ್ಲಾ ಕರೆಯುವ ಮಧುಮೇಹ ಕೆಲವೊಮ್ಮೆ ಅತಿ ಅಪಾಯವನ್ನುಂಟು ಮಾಡುತ್ತದೆ. ಮಧುಮೇಹಕ್ಕೆ ತುತ್ತಾದವರು ಆಹಾರ ಸೇವಿಸುವಾಗ ಕಾಳಜಿವಹಿಸುವುದು ಅಗತ್ಯವಾಗಿದೆ. ಕಡಿಮೆ ಗ್ಲೈಸೆಮಿಕ್‌ ಇಂಡೆಕ್ಸ್‌ (Glycemic Index-GI) ಹೊಂದಿರುವ ಆಹಾರಗಳು ಮಧುಮೇಹಿಗಳಿಗೆ ಉತ್ತಮವಾಗಿದೆ. ಕಾರ್ಬೋಹೈಡ್ರೇಟ್‌ ಒಳಗೊಂಡಿರುವ ಆಹಾರಗಳನ್ನು ವರ್ಗೀಕರಿಸಲು ಗ್ಲೈಸೆಮಿಕ್‌ ಇಂಡೆಕ್ಸ್‌ ಅನ್ನು ಬಳಸಲಾಗುತ್ತದೆ. ಇದು ರಕ್ತದಲ್ಲಿನ ಸಕ್ಕರೆಯನ್ನು ಹೆಚ್ಚಿಸುವ ಸಾಮರ್ಥ್ಯ ಮತ್ತು ಅವು ರಕ್ತದಲ್ಲಿ ಸಕ್ಕರೆಯನ್ನು ಎಷ್ಟು ಬೇಗನೆ ಹೆಚ್ಚಿಸುತ್ತವೆ ಎಂಬುದನ್ನು ತೋರಿಸುತ್ತದೆ. GI ಅಂಕ ಕಡಿಮೆಯಾದಷ್ಟೂ ನಿಧಾನವಾಗಿ ರಕ್ತದಲ್ಲಿ ಸಕ್ಕರೆಯ ಏರಿಕೆಯಾಗುತ್ತದೆ. ಇದು ಊಟದ ನಂತರ ದೇಹದಲ್ಲಿ ಆಗುವ ಬದಲಾವಣೆಗಳನ್ನು ಉತ್ತಮವಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ. ಕಡಿಮೆ ಗೈಸಮಿಕ್‌ ಇಂಡೆಕ್ಸ್‌ ಹೊಂದಿರುವ ಆಹಾರಗಳನ್ನು ಆರಿಸಿಕೊಳ್ಳುವುದರಿಂದ ಮಧುಮೇಹವನ್ನು ನಿಯಂತ್ರಣದಲ್ಲಿಡಲು ಸಹಾಯವಾಗುತ್ತದೆ.

ಹಣ್ಣುಗಳು ದೇಹಕ್ಕೆ ಉತ್ತಮವಾಗಿವೆ. ಆದರೆ ಎಲ್ಲಾ ಹಣ್ಣುಗಳನ್ನು ಮಧುಮೇಹಿಗಳು ತಿನ್ನಲಾಗುವುದಿಲ್ಲ. ಏಕೆಂದರೆ ಅವುಗಳ ಸೇವನೆಯಿಂದ ರಕ್ತದಲ್ಲಿ ಸಕ್ಕರೆ ಏರಿಕೆಯಾಗಿ ಮಧುಮೇಹ ಹೆಚ್ಚಾಗುತ್ತದೆ. ಆದರೆ, ಪೌಷ್ಟಿಕ ತಜ್ಞ ಲೊವ್ನೀತ್‌ ಬಾತ್ರಾ ಹೇಳುವಂತೆ ಹಣ್ಣುಗಳೂ ಕೂಡಾ ಮಧುಮೇಹಿಗಳ ಆಹಾರದ ಭಾಗವಾಗಬಹುದು. ವಿಶೇಷವಾಗಿ ಕಡಿಮೆ ಗ್ಲೈಸೆಮಿಕ್‌ ಇಂಡೆಕ್ಸ್‌ ಇರುವ ಹಣ್ಣುಗಳು ಮಧುಮೇಹಿಗಳೂ ಸೇವಿಸಬಹುದು. ಅದಕ್ಕಾಗಿ ಕಡಿಮೆ ಗ್ಲೈಸೆಮಿಕ್‌ ಇಂಡೆಕ್ಸ್‌ ಹೊಂದಿರುವ ಹಣ್ಣುಗಳನ್ನು ಆಯ್ದುಕೊಳ್ಳುವುದು ಉತ್ತಮ. ಅವುಗಳು ನಾಲಿಗೆಗೆ ರುಚಿ ನೀಡುವುದರ ಜೊತೆಗೆ ಮಧುಮೇಹವನ್ನು ನಿಯಂತ್ರಿಸುತ್ತದೆ. ಕಡಿಮೆ ಗ್ಲೈಸೆಮಿಕ್‌ ಇಂಡೆಕ್ಸ್‌ ಹೊಂದಿರುವ 5 ಹಣ್ಣುಗಳು.

ಕಿತ್ತಳೆ :
ಕಿತ್ತಳೆ ಹಣ್ಣಿನಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ 40 ಇರುತ್ತದೆ. ಇದು ವಿಟಮಿನ್ ಸಿ ಯನ್ನು ಒದಗಿಸುವುದರ ಜೊತೆಗೆ ಉತ್ತಮ ಪ್ರಮಾಣದ ಫೈಬರ್ ಅನ್ನು ನೀಡುತ್ತದೆ.

ಚೆರ್‍ರೀ:
ಚಿಕ್ಕ ಹಣ್ಣಾದರೂ ಶಕ್ತಿಯ ಪ್ಯಾಕೆಟ್‌ ಆಗಿದೆ. ಇದು ಕೇವಲ 20 ಗ್ಲೈಸೆಮಿಕ್ ಇಂಡೆಕ್ಸ್‌ ಅನ್ನು ಹೊಂದಿದೆ. ಆದರೆ ಹೆಚ್ಚಿನ ಪೋಷಕಾಂಶಗಳಿಂದ ಕೂಡಿದೆ. ಪೊಟ್ಯಾಸಿಯಮ್, ಆಂಟಿಒಕ್ಸಿಡೆಂಟ್‌ ಮತ್ತು ಫೈಬರ್‌ನಿಂದ ಸಮೃದ್ಧವಾಗಿರುವ ಚೆರ್‍ರಿಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಹೃದಯಕ್ಕೂ ಉತ್ತಮವಾಗಿದೆ.

ಸೇಬು:
ಸೇಬುವಿನಲ್ಲಿರುವ ಗ್ಲೈಸೆಮಿಕ್ ಇಂಡೆಕ್ಸ್‌ 39. ಸೇಬು ಉತ್ತಮ ಫೈಬರ್ ಅಂಶ ಹೊಂದಿದ್ದು, ಮಧುಮೇಹಿಗಳಿಗೂ ಉತ್ತಮವಾಗಿದೆ.

ಸ್ಟ್ರಾಬೆರಿ:
ಎಲ್ಲಾ ರೀತಿಯ ಬೇರಿ ಹಣ್ಣುಗಳು ಮಧುಮೇಹ ಇರುವವರಿಗೆ ಒಳ್ಳೆಯದು. ಏಕೆಂದರೆ ಅವುಗಳು ಇತರ ಹಣ್ಣುಗಳಿಗಿಂತ ಕಡಿಮೆ ಪ್ರಮಾಣದ ಸಕ್ಕರೆ ಮತ್ತು ಸಾಕಷ್ಟು ಫೈಬರ್ ಅನ್ನು ಹೊಂದಿರುತ್ತವೆ. ಸ್ಟ್ರಾಬೆರಿಯಲ್ಲಿ ಗ್ಲೈಸೆಮಿಕ್‌ ಇಂಡೆಕ್ಸ್‌ 41 ಇದೆ. ಸ್ಟ್ರಾಬೆರಿ ಕಿತ್ತಳೆಗಿಂತ ಹೆಚ್ಚು ವಿಟಮಿನ್ ಸಿ ಹೊಂದಿದೆ.

ಪಿಯರ್‌:
ಪಿಯರ್‌ ಹಣ್ಣು ಫೈಬರ್ ಅಂಶದಿಂದ ತುಂಬಿದೆ ಮತ್ತು ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ. ಪಿಯರ್‌ನಲ್ಲಿ ಗ್ಲೈಸೆಮಿಕ್‌ ಇಂಡೆಕ್ಸ್‌ 38 ಇದೆ. ಇದು ಮಧುಮೇಹ ಹೊಂದಿರುವವರಿಗೆ ಸೂಕ್ತವಾಗಿದೆ.

ಇದನ್ನೂ ಓದಿ : Harmful Food Combinations : ಕೆಲವು ಆಹಾರಗಳನ್ನು ಜೊತೆಯಾಗಿ ತಿನ್ನುವುದು ಹಾನಿಕಾರಕ; ನೀವೂ ಈ ತಪ್ಪನ್ನು ಮಾಡ್ತಾ ಇದ್ರೆ ಇಂದೇ ಬಿಟ್ಟುಬಿಡಿ

ಇದನ್ನೂ ಓದಿ : Risk Of Eating Rusk:ಚಹಾದೊಂದಿಗೆ ರಸ್ಕ್ ತಿನ್ನುವ ಹವ್ಯಾಸವಿದ್ದರೆ ನಿಮ್ಮ ಆರೋಗ್ಯಕ್ಕೆ ರಿಸ್ಕ್!

(Diabetes, Fruits for Diabetic Patients, 5 low glycemic index fruits to keep your blood sugar level in control)

Comments are closed.