ಬೆಂಗಳೂರು: Deepak Chahar Injured :ಟಿ20 ವಿಶ್ವಕಪ್ ಆರಂಭಕ್ಕಿನ್ನು ಉಳಿದಿರುವುದು ಕೇವಲ ಒಂದೇ ವಾರ. ಭಾರತ Vs ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯಕ್ಕೆ 15 ದಿನಗಳಷ್ಟೇ ಬಾಕಿ. ವಿಶ್ವಕಪ್ ಹೊಸ್ತಿಲಲ್ಲಿ ಭಾರತಕ್ಕೆ ಮತ್ತೊಂದು ಆಘಾತ ಎದುರಾಗಿದೆ.
ಈಗಾಗಲೇ ವೇಗಿ ಜಸ್ಪ್ರೀತ್ ಬುಮ್ರಾ ಬೆನ್ನು ನೋವಿನ ಕಾರಣ ಟಿ20 ವಿಶ್ವಕಪ್’ನಿಂದ ಹೊರ ಬಿದ್ದಿದ್ದು, ಇದೀಗ ಮತ್ತೊಬ್ಬ ವೇಗದ ಬೌಲರ್ ದೀಪಕ್ ಚಹರ್ ಗಾಯದ ಸಮಸ್ಯೆಗೆ ಒಳಗಾಗಿದ್ದಾರೆ. ಬೆನ್ನು ನೋವಿನಿಂದ ಬಳಲುತ್ತಿರುವ ಬಲಗೈ ಸ್ವಿಂಗ್ ಬೌಲರ್ ದೀಪಕ್ ಚಹರ್ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯ (India vs South Africa ODI series) ಕೊನೆಯ ಎರಡು ಪಂದ್ಯಗಳಿಗೆ ಅಲಭ್ಯರಾಗಿದ್ದು, ಅವರ ಬದಲು ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿ ಕೊನೆಯ ಎರಡು ಪಂದ್ಯಗಳು ಭಾನುವಾರ (ಅಕ್ಟೋಬರ್ 9, ರಾಂಚಿ) ಮತ್ತು ಮಂಗಳವಾರ (ಅಕ್ಟೋಬರ್ 11, ದೆಹಲಿ) ನಡೆಯಲಿವೆ. ಲಕ್ನೋದಲ್ಲಿ ನಡೆದ ಮೊದಲ ಪಂದ್ಯದಲ್ಲಿ ದೀಪಕ್ ಚಹರ್ ಆಡಿರಲಿಲ್ಲ.
ಚಹರ್ ಗಾಯಕ್ಕೊಳಗಾಗಿರುವುದು ವಿಶ್ವಕಪ್ ಹಿನ್ನೆಲೆಯಲ್ಲಿ ಭಾರತಕ್ಕೆ ಮತ್ತೊಂದು ಹೊಡೆತ. ಯಾಕಂದ್ರೆ ದೀಪಕ್ ಚಹರ್ ವಿಶ್ವಕಪ್’ನಲ್ಲಿ ಆಡಲಿರುವ ಟೀಮ್ ಇಂಡಿಯಾದ ಮೀಸಲು ಆಟಗಾರರ ಪಟ್ಟಿಯಲ್ಲಿದ್ದಾರೆ. ಸಣ್ಣ ಪ್ರಮಾಣದ ಬೆನ್ನು ನೋವಿನಿಂದ ಬಳಲುತ್ತಿರುವ 30 ವರ್ಷದ ಚಹರ್ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಆಗಮಿಸಿದ್ದು, ಬಿಸಿಸಿಐ ಮೆಡಿಕಲ್ ಟೀಮ್’ನ ಮೇಲುಸ್ತುವಾರಿಯಲ್ಲಿ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಕೊನೆಯ 2 ಏಕದಿನ ಪಂದ್ಯಗಳಿಗೆ ಭಾರತ ತಂಡ
ಶಿಖರ್ ಧವನ್ (ನಾಯಕ), ಶುಭಮನ್ ಗಿಲ್, ಋತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್ (ಉಪನಾಯಕ), ರಜತ್ ಪಾಟಿದಾರ್, ರಾಹುಲ್ ತ್ರಿಪಾಠಿ, ಇಶಾನ್ ಕಿಶನ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್, ರವಿ ಬಿಷ್ಣೋಯ್, ಮುಕೇಶ್ ಕುಮಾರ್, ಶಹಬಾಜ್ ಅಹ್ಮದ್, ವಾಷಿಂಗ್ಟನ್ ಸುಂದರ್, ಆವೇಶ್ ಖಾನ್, ಮೊಹಮ್ಮದ್ ಸಿರಾಜ್.
ಇದನ್ನೂ ಓದಿ : Women’s Asia Cup 2022 : ಮಹಿಳಾ ಏಷ್ಯಾ ಕಪ್ ಟಿ20: ಪಾಕಿಸ್ತಾನ ವಿರುದ್ಧ ಆಘಾತಕಾರಿ ಸೋಲು ಕಂಡ ಭಾರತದ ವನಿತೆಯರು
Deepak Chahar Injured before ICC MEN T20 World Cup 2022