Virat Kohli: ಐಪಿಎಲ್‌ನಲ್ಲಿ ನಾಯಕನಾಗಿ ಅತೀ ಹೆಚ್ಚು ರನ್; ಧೋನಿ, ರೋಹಿತ್‌ಗಿಂತ ಕಿಂಗ್ ಕೊಹ್ಲಿಯೇ ಬೆಸ್ಟ್

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡದ ಹಂಗಾಮಿ ನಾಯಕ ವಿರಾಟ್ ಕೊಹ್ಲಿ (Virat Kohli) ಐಪಿಎಲ್’ನಲ್ಲಿ ಮತ್ತೊಂದು ಮೈಲುಗಲ್ಲಿನ ಸನಿಹದಲ್ಲಿದ್ದಾರೆ. ಐಪಿಎಲ್’ನಲ್ಲಿ ನಾಯಕನಾಗಿ 5 ಸಾವಿರ ರನ್ ಕಲೆ ಹಾಕಿದ ಮೊಟ್ಟ ಮೊದಲ ಆಟಗಾರನೆಂಬ (Most runs scored by a captain in IPL) ದಾಖಲೆ ಬರೆಯಲು ವಿರಾಟ್ ಕೊಹ್ಲಿಗೆ ಬೇಕಿರುವುದಿನ್ನ ಕೇವಲ 6 ರನ್.

ಪ್ರಸಕ್ತ ಐಪಿಎಲ್’ನಲ್ಲಿ ಇದುವರೆಗೆ ಮೂರು ಪಂದ್ಯಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವ ವಹಿಸಿರುವ ವಿರಾಟ್ ಕೊಹ್ಲಿ, 3 ಪಂದ್ಯಗಳಿಂದ 113 ರನ್ ಗಳಿಸಿದ್ದಾರೆ. ಇದರೊಂದಿಗೆ ವಿರಾಟ್ ಕೊಹ್ಲಿ ಐಪಿಎಲ್’ನಲ್ಲಿ ನಾಯಕನಾಗಿ ಒಟ್ಟಾರೆ 4,994 ರನ್ ಗಳಿಸಿದಂತಾಗಿದೆ. 2013ರಿಂದ 2021ರವರೆಗೆ ಆರ್’ಸಿಬಿ ನಾಯಕರಾಗಿದ್ದ ವಿರಾಟ್ ಕೊಹ್ಲಿ, 2021ರಲ್ಲಿ ನಾಯಕತ್ವ ತೊರೆದಿದ್ದರು. ಆದರೆ ಈ ಬಾರಿ ಕ್ಯಾಪ್ಟನ್ ಫಾಫ್ ಡುಪ್ಲೆಸಿಸ್ ಸಂಪೂರ್ಣ ಫಿಟ್ ಇಲ್ಲದ ಕಾರಣ, ಕಳೆದ 3 ಪಂದ್ಯಗಳಲ್ಲಿ ರಾಯಲ್ ಚಾಲೆಂಜರ್ಸ್ ಸಾರಥ್ಯ ವಹಿಸಿಕೊಂಡಿದ್ದಾರೆ.

ಐಪಿಎಲ್’ನಲ್ಲಿ ನಾಯಕನಾಗಿ ಅತೀ ಹೆಚ್ಚು ರನ್ (Most runs scored by a captain in IPL) ಗಳಿಸಿದವರ ಸಾಲಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂ.ಎಸ್ ಧೋನಿ 2ನೇ ಸ್ಥಾನದಲ್ಲಿದ್ದು, 4617 ರನ್ ಗಳಿಸಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶಱ್ಮಾ ನಾಯಕನಾಗಿ 3833 ರನ್ ಕಲೆ ಹಾಕಿದ್ದಾರೆ. ಕೋಲ್ಕತಾ ನೈಟ್ ರೈಡರ್ಸ್ ತಂಡದ ಮಾಜಿ ನಾಯಕ ಗೌತಮ್ ಗಂಭೀರ್ 3518 ರನ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡದ ಮಾಜಿ ನಾಯಕ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಹಾಲಿ ನಾಯಕ ಡೇವಿಡ್ ವಾರ್ನರ್ ಐಪಿಎಲ್’ನಲ್ಲಿ ನಾಯಕನಾಗಿ 3146 ರನ್ ಗಳಿಸಿದ್ದಾರೆ.

ಐಪಿಎಲ್’ನಲ್ಲಿ ನಾಯಕನಾಗಿ ಅತೀ ಹೆಚ್ಚು ರನ್ ಗಳಿಸಿದವರು (Most runs scored by a captain in IPL)

  • ವಿರಾಟ್ ಕೊಹ್ಲಿ: 4994
  • ಎಂ.ಎಸ್ ಧೋನಿ: 4617
  • ರೋಹಿತ್ ಶರ್ಮಾ: 3833
  • ಗೌತಮ್ ಗಂಭೀರ್: 3518
  • ಡೇವಿಡ್ ವಾರ್ನರ್: 3146

ಇದನ್ನೂ ಓದಿ : RCB : ಕರ್ನಾಟಕದ ಸ್ಟಾರ್‌ಗಳನ್ನು ಆರ್‌ಸಿಬಿ ಕಡೆಗಣಿಸಲು ತಮಿಳುನಾಡಿನ ಈ “ಮಹಾನುಭಾವ”ನೇ ಕಾರಣ..!

ಇದನ್ನೂ ಓದಿ : Kohli Vs Siraj : ಚಿನ್ನಸ್ವಾಮಿಯಲ್ಲಿ ಸಿರಾಜ್ ಬೆವರಿಳಿಸಿದ ಕಿಂಗ್, ಐಪಿಎಲ್‌ನ ಬೆಸ್ಟ್ ಬೌಲರ್‌ಗೆ ಹಿಗ್ಗಾಮುಗ್ಗ ಬಾರಿಸಿದ ವಿರಾಟ್ : ವೀಡಿಯೊ ವೈರಲ್

ಇದನ್ನೂ ಓದಿ : Rishabh Pant : ವಿಶ್ವಕಪ್‌ಗಿಲ್ಲ ರಿಷಭ್ ಪಂತ್, ಬೆಂಗಳೂರಿಗೆ ಬಂದದ್ದೇಕೆ ಸ್ಫೋಟಕ ವಿಕೆಟ್ ಕೀಪರ್?

ಐಪಿಎಲ್-2023ರಲ್ಲಿ ವಿರಾಟ್ ಕೊಹ್ಲಿ :

  • 82*(49) vs ಮುಂಬೈ ಇಂಡಿಯನ್ಸ್
  • 21(18) vs ಕೋಲ್ಕತಾ ನೈಟ್ ರೈಡರ್ಸ್
  • 61(44) vs ಲಕ್ನೋ ಸೂಪರ್ ಜೈಂಟ್ಸ್
  • 50(34) vs ಡೆಲ್ಲಿ ಕ್ಯಾಪಿಟಲ್ಸ್
  • 6(4) vs ಚೆನ್ನೈ ಸೂಪರ್ ಕಿಂಗ್ಸ್
  • 59(47) vs ಪಂಜಾಬ್ ಕಿಂಗ್ಸ್
  • 0(1) vs ರಾಜಸ್ಥಾನ್ ರಾಯಲ್ಸ್
  • 54(37) vs ಕೋಲ್ಕತಾ ನೈಟ್ ರೈಡರ್ಸ್

Most runs scored by a captain in IPL : Virat Kohli: Most runs scored by a captain in IPL; King Kohli is better than Dhoni, Rohit

Comments are closed.