Devdutt Padikkal: ಕನ್ನಡಿಗನೆಂದು ಸಪೋರ್ಟ್ ಮಾಡಿದರೂ, ಆತ ರಾಹುಲ್ ನಂಬಿಕೆ ಉಳಿಸಿಕೊಳ್ಳಲಿಲ್ಲ..!

Devdutt Padikkal : ಆತ ಕರ್ನಾಟಕದ ಹುಡುಗನೆಂಬ ಕಾರಣಕ್ಕೆ ಲಕ್ನೋ ಸೂಪರ್ ಜಯಂಟ್ಸ್ (Lucknow Super Giants) ತಂಡದಲ್ಲಿ ನಾಯಕ ಕೆ.ಎಲ್ ರಾಹುಲ್ (KL Rahul) ಆತನಿಗೆ ಪದೇ ಪದೇ ಅವಕಾಶಗಳನ್ನು ನೀಡಿದರು.

Devdutt Padikkal : ಆತ ಕರ್ನಾಟಕದ ಹುಡುಗನೆಂಬ ಕಾರಣಕ್ಕೆ ಲಕ್ನೋ ಸೂಪರ್ ಜಯಂಟ್ಸ್ (Lucknow Super Giants) ತಂಡದಲ್ಲಿ ನಾಯಕ ಕೆ.ಎಲ್ ರಾಹುಲ್ (KL Rahul) ಆತನಿಗೆ ಪದೇ ಪದೇ ಅವಕಾಶಗಳನ್ನು ನೀಡಿದರು. ಆದರೆ ಆತ ಮಾತ್ರ ರಾಹುಲ್ ತನ್ನ ಮೇಲಿಟ್ಟ ನಂಬಿಕೆಯನ್ನು ಹುಸಿ ಮಾಡಿದ್ದಾನೆ. ಇದು ಕರ್ನಾಟಕದ ಎಡಗೈ ಬ್ಯಾಟ್ಸ್’ಮನ್ ದೇವದತ್ತ್ ಪಡಿಕ್ಕಲ್ (Devdutt Padikkal) ಅವರ ಐಪಿಎಲ್ ವೈಫಲ್ಯದ ಕಥೆ.

Devdutt Padikkal Failure Story IPL 2024 LSG KL Rahul Support Kannadigas
Image Credit to Original Source

ರಾಜಸ್ಥಾನ್ ರಾಯಲ್ಸ್ ತಂಡದಲ್ಲಿದ್ದ ದೇವದತ್ತ್ ಪಡಿಕ್ಕಲ್ ಅವರನ್ನು ಲಕ್ನೋ ಸೂಪರ್ ಜಯಂಟ್ಸ್ ತಂಡ ಟ್ರೇಡ್ ವಿಂಡೋ (Trade Window) ಮೂಲಕ ತನ್ನ ತಂಡಕ್ಕೆ ಸೇರಿಸಿಕೊಂಡಿತ್ತು. ಬದಲಾಗಿ ಬಲಗೈ ವೇಗಿ ಆವೇಶ್ ಖಾನ್ (Avesh Khan) ಅವರನ್ನು ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ನೀಡಿತ್ತು. ಈ ಅದಲು – ಬದಲು ಲಕ್ನೋ ತಂಡಕ್ಕೆ ಭಾರೀ ಹಿನ್ನಡೆ ತಂದಿದೆ.

ಇದನ್ನೂ ಓದಿ : CSK Honoured Dinesh Karthik : ವಿಶೇಷ ಪೋಸ್ಟರ್’ನೊಂದಿಗೆ ದಿನೇಶ್ ಕಾರ್ತಿಕ್’ಗೆ ವಿದಾಯದ ಗೌರವ ಸಲ್ಲಿಸಿದ ಸಿಎಸ್’ಕೆ!

ಲಕ್ನೋ ತಂಡದಿಂದ ರಾಜಸ್ಥಾನ್ ರಾಯಲ್ಸ್ ಪಾಲಾದ ಆವೇಶ್ ಖಾನ್ ಉತ್ತಮ ಬೌಲಿಂಗ್ ಪ್ರದರ್ಶನದ ಮೂಲಕ ತನ್ನ ತಂಡಕ್ಕೆ ನೆರವಾದರೆ, ಇತ್ತ ದೇವದತ್ತ್ ಪಡಿಕ್ಕಲ್ ಹೊಣೆಗೇಡಿತನದ ಆಟದ ಮೂಲಕ ಲಕ್ನೋ ಸೂಪರ್ ಜಯಂಟ್ಸ್ ತಂಡಕ್ಕೆ ಭಾರವಾಗಿದ್ದಾನೆ. ಐಪಿಎಲ್-2024 ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆವೇಶ್ ಖಾನ್ 16 ಪಂದ್ಯಗಳಿಂದ 19 ವಿಕೆಟ್ ಉರುಳಿಸಿ ತಂಡ ಪ್ಲೇ ಆಫ್ ತಲುಪಲು ಕಾರಣನಾದರೆ, ಇತ್ತ ದೇವದತ್ತ್ ಪಡಿಕ್ಕಲ್’ನದ್ದು ದಯನೀಯ ವೈಫಲ್ಯ. ಆ ಬಾರಿಯ ಐಪಿಎಲ್’ನಲ್ಲಿ 7 ಪಂದ್ಯಗಳನ್ನಾಡಿದ ಪಡಿಕ್ಕಲ್ ಒಟ್ಟಾರೆ ಕೇವಲ 53 ಎಸೆತಗಳನ್ನೆದುರಿಸಿ 38 ರನ್ ಗಳಿಸಿದ್ದಾರೆ.

Devdutt Padikkal Failure Story IPL 2024 LSG KL Rahul Support Kannadigas
Image Credit to Original Source

ಬ್ಯಾಟಿಂಗ್ ಸರಾಸರಿ 5.42, ಸ್ಟ್ರೈಕ್’ರೇಟ್ 71.69. ಆಡಿರುವ ಏಳು ಇನ್ನಿಂಗ್ಸ್’ಗಳಲ್ಲಿ ಎರಡು ಬಾರಿ ಶೂನ್ಯಕ್ಕೆ ಔಟಾಗಿದ್ದ ದೇವದತ್ತ್ ಪಡಿಕ್ಕಲ್, ಡಬಲ್ ಡಿಜಿಟ್ ಸ್ಕೋರ್ ದಾಟಿದ್ದು ಕೇವಲ ಒಂದೇ ಬಾರಿ. ಈ ವೈಫಲ್ಯದ ನಂತರ ದೇವದತ್ತ್ ಪಡಿಕ್ಕಲ್ ಅವರನ್ನು ಲಕ್ನೋ ಸೂಪರ್ ಜಯಂಟ್ಸ್ ಫ್ರಾಂಚೈಸಿ ತಂಡದಿಂದ ಕೈಬಿಡುವುದು ಖಚಿತ. ಮುಂದಿನ ವರ್ಷದ ಐಪಿಎಲ್ ಟೂರ್ನಿಗೂ ಮುನ್ನ ಮೆಗಾ ಆಕ್ಷನ್ ನಡೆಯಲಿದ್ದು, ದೇವದತ್ತ್ ಪಡಿಕ್ಕಲ್ ಅನ್ ಸೋಲ್ಡ್ ಆಗಿ ಉಳಿದರೂ ಅಚ್ಚರಿ ಪಡಬೇಕಿಲ್ಲ.

ಇದನ್ನೂ ಓದಿ : Virat Kohli Should Leave RCB: “ವಿರಾಟ್ ಕೊಹ್ಲಿಗೆ ಐಪಿಎಲ್ ಕಪ್ ಬೇಕೆಂದರೆ, ಆರ್’ಸಿಬಿ ತಂಡವನ್ನು ತೊರೆಯಬೇಕು

ಐಪಿಎಲ್-2024 ಟೂರ್ನಿಯಲ್ಲಿ ದೇವದತ್ತ್ ಪಡಿಕ್ಕಲ್ ಸಾಧನೆ
ಪಂದ್ಯ: 07
ಇನ್ನಿಂಗ್ಸ್: 07
ಎಸೆತ: 53
ರನ್: 38
ಗರಿಷ್ಠ: 13
ಸರಾಸರಿ: 5.42
ಸ್ಟ್ರೈಕ್’ರೇಟ್: 71.69

ಐಪಿಎಲ್-2024: 7 ಇನ್ನಿಂಗ್ಸ್’ಗಳಲ್ಲಿ ದೇವದತ್ತ್ ಪಡಿಕ್ಕಲ್

ಇದನ್ನೂ ಓದಿ : Hardik Pandya Divorce:  ಡಿವೋರ್ಸ್ ಆದರೆ 70% ಆಸ್ತಿಯನ್ನು ಪತ್ನಿಗೆ ನೀಡಬೇಕಿದೆ ಹಾರ್ದಿಕ್ ಪಾಂಡ್ಯ!

00 Vs ರಾಜಸ್ಥಾನ್ ರಾಯಲ್ಸ್
09 Vs ಪಂಜಾಬ್ ಕಿಂಗ್ಸ್
06 Vs ರಾಯಲ್ ಚಾಲೆಂಜರ್ಸ್ ಬೆಂಗಳೂರು
07 Vs ಗುಜರಾತ್ ಟೈಟನ್ಸ್
03 Vs ಡೆಲ್ಲಿ ಕ್ಯಾಪಿಟಲ್ಸ್
13 Vs ಚೆನ್ನೈ ಸೂಪರ್ ಕಿಂಗ್ಸ್

Devdutt Padikkal Failure Story IPL 2024 LSG KL Rahul Support Kannadigas

Comments are closed.