IPL final 2024: ಇಂದು ಐಪಿಎಲ್ ಫೈನಲ್: ಕೆಕೆಆರ್ Vs ಸನ್’ರೈಸರ್ಸ್, ಯಾರು ಬಲಿಷ್ಠರು ? ಯಾರು ಕಪ್ ಗೆಲ್ತಾರೆ? ಇಲ್ಲಿದೆ ಫೈನಲ್’ನ ಇಂಚಿಂಚೂ ಮಾಹಿತಿ !

IPL final 2024 : ಚೆನ್ನೈ: ಐಪಿಎಲ್-2024 ಟೂರ್ನಿಯ ಫೈನಲ್ ಪಂದ್ಯ ಇಂದು (ಭಾನುವಾರ) ಚೆನ್ನೈನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿದ್ದು, 2 ಬಾರಿ ಬಾರಿಯ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ (Kolkata Knight Riders) ಮತ್ತು ಸನ್ ರೈಸರ್ಸ್ ಹೈದರಾಬಾದ್ (Sunrisers Hyderabad) ತಂಡಗಳು ಮುಖಾಮುಖಿಯಾಗಲಿವೆ.

IPL final 2024 : ಚೆನ್ನೈ: ಐಪಿಎಲ್-2024 ಟೂರ್ನಿಯ ಫೈನಲ್ ಪಂದ್ಯ ಇಂದು (ಭಾನುವಾರ) ಚೆನ್ನೈನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿದ್ದು, 2 ಬಾರಿ ಬಾರಿಯ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ (Kolkata Knight Riders) ಮತ್ತು ಸನ್ ರೈಸರ್ಸ್ ಹೈದರಾಬಾದ್ (Sunrisers Hyderabad) ತಂಡಗಳು ಮುಖಾಮುಖಿಯಾಗಲಿವೆ.

IPL 2024 final KKR Vs Sunrisers, who is stronger Who will win the cup Here is Complete Details
Image Credit To Original Source

ಚೆನ್ನೈನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್, ರಾಜಸ್ಥಾನ್ ರಾಯಲ್ಸ್ ತಂಡವನ್ನು 36 ರನ್’ಗಳಿಂದ ಭರ್ಜರಿಯಾಗಿ ಬಗ್ಗು ಬಡಿದು ಫೈನಲ್ ಪ್ರವೇಶಿಸಿತ್ತು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಹೈದರಾಬಾದ್, 20 ಓವರ್’ಗಳಲ್ಲಿ 9 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿದರೆ, ಗುರಿ ಬೆನ್ನಟ್ಟಿದ ರಾಜಸ್ಥಾನ್ 20 ಓವರ್’ಗಳಲ್ಲಿ 7 ವಿಕೆಟ್ ನಷ್ಟಕ್ಕೆ 139 ರನ್ ಗಳಿಸಲಷ್ಟೇ ಶಕ್ತವಾಗಿ ಟೂರ್ನಿಯಿಂದ ನಿರ್ಗಮಿಸಿತು.

ಇದಕ್ಕೂ ಮೊದಲು ಮೇ 21ರಂದು ಅಹ್ಮದಾಬಾದ್’ನಲ್ಲಿ ನಡೆದಿದ್ದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು 8 ವಿಕೆಟ್’ಗಳಿಂದ ಬಗ್ಗು ಬಡಿದಿದ್ದ ಕೋಲ್ಕತಾ ನೈಟ್ ರೈಡರ್ಸ್ ಮೊದಲ ತಂಡವಾಗಿ ಫೈನಲ್ ಪ್ರವೇಶಿಸಿತ್ತು. ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕಿದು 3ನೇ ಐಪಿಎಲ್ ಫೈನಲ್. 2012 ಮತ್ತು 2014ರಲ್ಲಿ ಫೈನಲ್ ಪ್ರವೇಶಿಸಿದ್ದ ಕೆಕೆಆರ್ ಎರಡೂ ಬಾರಿಯೂ ಚಾಂಪಿಯನ್ ಪಟ್ಟಕ್ಕೇರಿತ್ತು.

ಇದನ್ನೂ ಓದಿ : Devdutt Padikkal: ಕನ್ನಡಿಗನೆಂದು ಸಪೋರ್ಟ್ ಮಾಡಿದರೂ, ಆತ ರಾಹುಲ್ ನಂಬಿಕೆ ಉಳಿಸಿಕೊಳ್ಳಲಿಲ್ಲ..!

ಸನ್ ರೈಸರ್ಸ್ ಹೈದರಾಬಾದ್ ತಂಡ ಡೇವಿಡ್ ವಾರ್ನರ್ ನಾಯಕತ್ವದಲ್ಲಿ 2016ರ ಐಪಿಎಲ್ ಫೈನಲ್’ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೋಲಿಸಿ ಪ್ರಶಸ್ತಿ ಗೆದ್ದಿತ್ತು. 2009ರ ಐಪಿಎಲ್ ಟೂರ್ನಿಯಲ್ಲಿ ಡೆಕ್ಕನ್ ಚಾರ್ಜರ್ಸ್ ಹೈದರಾಬಾದ್ ತಂಡ ಚಾಂಪಿಯನ್ ಆಗಿತ್ತು. ಹೈದಾರಾಬಾದ್ ಫ್ರಾಂಚೈಸಿಯ ಮಾಲೀಕತ್ವ ಬದಲಾದ ನಂತರ ಇದು ತಂಡಕ್ಕೆ 2ನೇ ಫೈನಲ್.

IPL 2024 final KKR Vs Sunrisers, who is stronger Who will win the cup Here is Complete Details
Image Credit To Original Source

ಕೋಲ್ಕತಾ ನೈಟ್ ರೈಡರ್ಸ್ ಸಂಭಾವ್ಯ XI
1.ಸುನಿಲ್ ನರೈನ್, 2.ರಹ್ಮನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), 3.ವೆಂಕಟೇಶ್ ಅಯ್ಯರ್, 4.ಶ್ರೇಯಸ್ ಅಯ್ಯರ್ (ನಾಯಕ), 5.ನಿತೀಶ್ ರಾಣಾ, 6.ರಿಂಕು ಸಿಂಗ್, 7.ಆಂಡ್ರೆ ರಸೆಲ್, 8.ರಮಣ್’ದೀಪ್ ಸಿಂಗ್, 9.ಮಿಚೆಲ್ ಸ್ಟಾರ್ಕ್, 10.ವೈಭವ್ ಅರೋರಾ, 11.ಹರ್ಷಿತ್ ರಾಣಾ.
ಇಂಪ್ಯಾಕ್ಟ್ ಪ್ಲೇಯರ್: ವರುಣ್ ಚಕ್ರವರ್ತಿ

ಸನ್ ರೈಸರ್ಸ್ ಹೈದರಾಬಾದ್ ಸಂಭಾವ್ಯ XI
1.ಅಭಿಷೇಕ್ ಶರ್ಮಾ, 2.ಟ್ರಾವಿಸ್ ಹೆಡ್, 3.ರಾಹುಲ್ ತ್ರಿಪಾಠಿ, 4.ಏಡನ್ ಮಾರ್ಕ್ರಮ್, 5.ನಿತೀಶ್ ಕುಮಾರ್ ರೆಡ್ಡಿ, 6.ಹೆನ್ರಿಕ್ ಕ್ಲಾಸೆನ್ (ವಿಕೆಟ್ ಕೀಪರ್), 7.ಅಬ್ದುಲ್ ಸಮಾದ್, 8.ಪ್ಯಾಟ್ ಕಮಿನ್ಸ್ (ನಾಯಕ), 9.ಭುವನೇಶ್ವರ್ ಕುಮಾರ್, 10.ಜೈದೇವ್ ಉನಾದ್ಕಟ್, 11.ತಂಗರಸು ನಟರಾಜನ್
ಇಂಪ್ಯಾಕ್ಟ್ ಪ್ಲೇಯರ್: ಶಹಬಾಜ್ ಅಹ್ಮದ್.

ಇದನ್ನೂ ಓದಿ : 1% ಚಾನ್ಸ್, 99% ನಂಬಿಕೆ.. ಭರವಸೆಗಳೇ ಬತ್ತಿ ಹೋಗಿದ್ದವರ ಎದೆಯಲ್ಲಿ ಗೆಲುವಿನ ಕಿಚ್ಚು ಹೊತ್ತಿಸಿದ ಧೀರನೊಬ್ಬನ ಕಥೆ..!

ಐಪಿಎಲ್-2024: ಫೈನಲ್ ಫೈಟ್
ಸನ್ ರೈಸರ್ಸ್ ಹೈದರಾಬಾದ್ Vs ಕೋಲ್ಕತಾ ನೈಟ್ ರೈಡರ್ಸ್
ಯಾವಾಗ: ಮೇ 26, 2024 (ಭಾನುವಾರ)
ಎಲ್ಲಿ: ಎಂ.ಎ ಚಿದಂಬರಂ ಕ್ರೀಡಾಂಗಣ, ಚೆನ್ನೈ
ಎಷ್ಟು ಗಂಟೆಗೆ: ರಾತ್ರಿ 7.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್
ಲೈವ್ ಸ್ಟ್ರೀಮಿಂಗ್: ಜಿಯೋ ಸಿನಿಮಾ

ಇದನ್ನೂ ಓದಿ : Dhoni Meets CISF Soldiers: RCB ವಿರುದ್ಧದ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಸೈನಿಕರನ್ನು ಭೇಟಿ ಮಾಡಿದ ಧೋನಿ!

IPL 2024 final KKR Vs SRH who is stronger ? Who will win the cup ? Here is Complete Details

Comments are closed.