Dewald Brevis : 57 ಎಸೆತಗಳಲ್ಲಿ 162 ರನ್ ಚಚ್ಚಿದ ಮರಿ ಎಬಿಡಿ, ಡಿವಿಲಿಯರ್ಸ್ ಫುಲ್ ಖುಷ್

ಪೋಷೆಫ್’ಸ್ಟ್ರೂಮ್ : (Dewald Brevis)ಬೇಡಿ ಎಬಿಡಿ ಖ್ಯಾತಿಯ ದಕ್ಷಿಣ ಆಫ್ರಿಕಾದ ಯುವ ಆರಂಭಿಕ ಬ್ಯಾಟ್ಸ್’ಮನ್ ಡೆವಾಲ್ಡ್ ಬ್ರೆವಿಸ್(Dewald Brevis) ಸಿಎಸ್ಎ ಟಿ20 ಚಾಲೆಂಜ್ (CSA T20 Challenge) ಟೂರ್ನಿಯ ಪಂದ್ಯವೊಂದರಲ್ಲಿ ಕೇವಲ 57 ಎಸೆತಗಳಲ್ಲಿ 162 ರನ್ ಸಿಡಿಸಿ ಅಬ್ಬರಿಸಿದ್ದಾರೆ.


ಐಪಿಎಲ್’ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುವ 19 ವರ್ಷದ ಬಲಗೈ ದಾಂಡಿಗ ಡೆವಾಲ್ಡ್ ಬ್ರೆವಿಸ್(Dewald Brevis) ಸಿಎಸ್ಎ ಟಿ20 ಚಾಲೆಂಜ್ ಟೂರ್ನಿಯಲ್ಲಿ ಟೈಟನ್ಸ್ ತಂಡದ ಪರ ಆಡುತ್ತಿದ್ದಾರೆ. ನೈಟ್ಸ್ ವಿರುದ್ಧದ ಪಂದ್ಯದಲ್ಲಿ ಡೆವಾಲ್ಡ್ ಬ್ರೆವಿಸ್ 57 ಎಸೆತಗಳಲ್ಲಿ 13 ಬೌಂಡರಿ ಹಾಗೂ 13 ಸಿಕ್ಸರ್’ಗಳ ಸಹಿತ ಸಿಡಿಲಬ್ಬರದ 162 ರನ್ ಬಾರಿಸಿ ಕ್ರಿಕೆಟ್ ಜಗತ್ತಿನ ಗಮನ ಸೆಳೆದಿದ್ದಾರೆ. ಕಳೆದ ಐಸಿಸಿ ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ 500ಕ್ಕೂ ಹೆಚ್ಚು ರನ್ ಗಳಿಸಿ ಅಬ್ಬರಿಸಿದ್ದ ಬ್ರೆವಿಸ್ ಅವರನ್ನು ಐಪಿಎಲ್ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ತಂಡ ತೆಕ್ಕೆಗೆ ಹಾಕಿಕೊಂಡಿತ್ತು. ಇದೀಗ ಕ್ರಿಕೆಟ್ ಸೌತ್ ಆಫ್ರಿಕಾ ಟಿ20 ಚಾಲೆಂಜ್ ಟೂರ್ನಿಯಲ್ಲಿ ಅಬ್ಬರಿಸುವ ಮೂಲಕ ಮುಂದಿನ ಐಪಿಎಲ್’ನಲ್ಲಿ ಮುಂಬೈ ಇಂಡಿಯನ್ಸ್ ಪರ ಅಬ್ಬರಿಸಲು ನಾನು ರೆಡಿ ಎಂಬ ಸಂದೇಶ ರವಾನಿಸಿದ್ದಾರೆ.
https://twitter.com/OneCricketApp/status/1587414427141558273?s=20&t=z9fVjURHiSalrWjZOQSWEw

ಇದನ್ನೂ ಓದಿ : Syed Mushtaq Ali T20 : ಕ್ವಾರ್ಟರ್ ಫೈನಲ್‌ನಲ್ಲಿ ಪಂಜಾಬ್ ವಿರುದ್ಧ ಕರ್ನಾಟಕಕ್ಕೆ ವೀರೋಚಿತ ಸೋಲು

ಇದನ್ನೂ ಓದಿ : India Vs Bangladesh: ನಾಳೆ ಭಾರತಕ್ಕೆ ಬಾಂಗ್ಲಾದೇಶ ವಿರುದ್ಧ ನಿರ್ಣಾಯಕ ಪಂದ್ಯ, ಕೆ.ಎಲ್ ರಾಹುಲ್‌ಗೆ ಲಾಸ್ಟ್ ಚಾನ್ಸ್ ?

ನೈಟ್ಸ್ ಕೇವಲ 35 ಎಸೆತಗಳಲ್ಲಿ ಶತಕ ಪೂರ್ತಿಗೊಳಿಸಿದ ಡೆವಾಲ್ಡ ಬ್ರೆವಿಸ್ ತಮ್ಮ ಗುರು, ಮೆಂಟರ್, ಮಾರ್ಗದರ್ಶಕ ಎಬಿ ಡಿವಿಲಿಯರ್ಸ್ ಆಟವನ್ನು ನೆನಪಿಸಿದ್ದಾರೆ. ಬ್ರೆವಿಸ್ ಆಟದ ಶೈಲಿ ಎಬಿ ಡಿವಿಲಿಯರ್ಸ್ ಆಟದಂತೆಯೇ ಇರುವುದು ವಿಶೇಷ. ತಮ್ಮ ಶಿಷ್ಯನ ಅತ್ಯಮೋಘ ಇನ್ನಿಂಗ್ಸ್ ಬಗ್ಗೆ ಟ್ವೀಟ್ ಮಾಡಿರುವ ಎಬಿ ಡಿವಿಲಿಯರ್ಸ್, “ಡೆವಾಲ್ಡ್ ಬ್ರೆವಿಸ್, ಹೆಚ್ಚು ಹೇಳುವ ಅವಶ್ಯಕತೆಯಿಲ್ಲ” ಎಂದು ಒಂದೇ ಸಾಲಿನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
https://twitter.com/ABdeVilliers17/status/1587075987287728128?s=20&t=z9fVjURHiSalrWjZOQSWEw

ಇದನ್ನೂ ಓದಿ : Kannada Rojyotsava : ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯ ಕೋರಿದ ಆರ್‌ಸಿಬಿ, ಬೆಂಗಳೂರು ಬುಲ್ಸ್

19 ವರ್ಷದ ಯುವ ಆರಂಭಿಕ ಬ್ಯಾಟ್ಸ್’ಮನ್ ಡೆವಾಲ್ಡ್ ಬ್ರೆವಿಸ್ 2022ರ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಪರ ಪಂದ್ಯಗಳನ್ನಾಡಿ 161 ರನ್ ಗಳಿಸಿದ್ದರು. ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ದೊಡ್ಡ ಅಭಿಮಾನಿಯಾಗಿರುವ ಬ್ರೆವಿಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ಅವರ ಆಟವನ್ನು ನೋಡುತ್ತಾ ಬೆಳೆದ ಹುಡುಗ. ಇದೀಗ ಎಬಿಡಿ ಅವರಂತೆಯೇ ಬ್ಯಾಟ್ ಬೀಸುವ ಮೂಲಕ ಕ್ರಿಕೆಟ್ ಜಗತ್ತಿನ ಗಮನ ಸೆಳೆಯುತ್ತಿದ್ದಾರೆ.

(Dewald Brevis) South Africa’s young opening batsman Dewald Brevis (Dewald Brevis) of Bedi ABD fame has scored 162 runs in just 57 balls in a match of the CSA T20 Challenge tournament.

Comments are closed.