Pro kabaddi League: ಬುಲ್ಸ್ ಗೆಲುವಿಗೆ ಓಟಕ್ಕೆ ಸ್ಟೀಲರ್ಸ್ ಬ್ರೇಕ್, 5 ಪಂದ್ಯಗಳ ಬಳಿಕ ಗೂಳಿಗಳಿಗೆ ಮೊದಲ ಸೋಲು

ಪುಣೆ : (Pro kabaddi League) ಪ್ರೊ ಕಬಡ್ಡಿ ಲೀಗ್-9 ಟೂರ್ನಿಯಲ್ಲಿ ಮಾಜಿ ಚಾಂಪಿಯನ್ ಬೆಂಗಳೂರು ಬುಲ್ಸ್ (Bengaluru Bulls) ತಂಡದ ಅಜೇಯ ಓಟ ಅಂತ್ಯಗೊಂಡಿದೆ. ಮಂಗಳವಾರ ನಡೆದ ರೋಚಕ ಪಂದ್ಯದಲ್ಲಿ ಹರ್ಯಾಣ ಸ್ಟೀಲರ್ಸ್ ವಿರುದ್ಧ 27-29ರಲ್ಲಿ ಸೋಲು ಕಾಣುವ ಮೂಲಕ ಸತತ ಐದು ಪಂದ್ಯಗಳ ಅಜೇಯ ಓಟದ ನಂತರ ಕೆಂಪುಗೂಳಿ ಗಳು ಮೊದಲ ಸೋಲು ಕಂಡಿದ್ದಾರೆ.

ಪುಣೆಯ ಬಾಳೇವಾಡಿಯಲ್ಲಿರುವ ಛತ್ರಪತಿ ಶಿವಾಜಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್’ನಲ್ಲಿ ನಡೆದ ತನ್ನ 10ನೇ ಲೀಗ್( Pro kabaddi League)ಪಂದ್ಯದಲ್ಲಿ ಬೆಂಗಳೂರು ಬುಲ್ಸ್, ಹರ್ಯಾಣ ಸ್ಚೀಲರ್ಸ್ ವಿರುದ್ಧ ಕೇವಲ 2 ಅಂಕಗಳಿಂದ ಸೋಲು ಕಂಡಿತು. ಹರ್ಯಾಣ ಸ್ಟೀಲರ್ಸ್ ವಿರುದ್ಧ ಸೋತರೂ ಅಂಕಪಟ್ಟಿಯಲ್ಲಿ ಬುಲ್ಸ್(Pro kabaddi League) ಪಡೆ ಅಗ್ರಸ್ಥಾನದಲ್ಲಿ ಮುಂದುವರಿದಿದೆ. ಆಡಿರುವ 10 ಪಂದ್ಯಗಳಲ್ಲಿ 6ನ್ನು ಗೆದ್ದು 3ರಲ್ಲಿ ಸೋತು ಒಂದು ಪಂದ್ಯವನ್ನು ಟೈ ಮಾಡಿಕೊಂಡಿರುವ ಬುಲ್ಸ್ ಬಳಗ ಒಟ್ಟು 35 ಅಂಕಗಲೊಂದಿಗೆ ಟೇಬಲ್ ಟಾಪರ್ ಆಗಿ ಮುಂದುವರಿದಿದೆ.

ದಿನದ ಮತ್ತೊಂದು ಪಂದ್ಯದಲ್ಲಿ ಹಾಲಿ ಚಾಂಪಿಯನ್ ದಬಾಂಗ್ ಡೆಲ್ಲಿ ಕೆ.ಸಿ ತಂಡವನ್ನು 43-38ರ ಅಂತರದಲ್ಲಿ ಬಗ್ಗು ಬಡಿದ ಪುಣೇರಿ ಪಲ್ಟನ್ ಪಡೆ ಲೀಗ್’ನಲ್ಲಿ 5ನೇ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಲಗ್ಗೆ ಇಟ್ಟಿತು. ಹರ್ಯಾಣ ಪರ ಯುವ ರೇಡರ್’ಗಳಾದ ಮೋಹಿತ್ ಗೊಯಾಟ್ ಮತ್ತು ಆಕಾಶ್ ಶಿಂಧೆ ತಲಾ 13 ರೇಡ್ ಪಾಯಿಂಟ್ಸ್ ಗಳಿಸಿ ಡೆಲ್ಲಿ ತಂಡದ ಗರ್ವಭಂಗ ಮಾಡಿದರು.ಡೆಲ್ಲಿ ಪರ ನಾಯಕ ನವೀನ್ ಕುಮಾರ್ 16 ಅಂಕ ಗಳಿಸಿ ಮತ್ತೊಮ್ಮೆ ಏಕಾಂಗಿ ಹೋರಾಟ ನಡೆಸಿದರು.

ಇದನ್ನೂ ಓದಿ : India Vs Bangladesh: ನಾಳೆ ಭಾರತಕ್ಕೆ ಬಾಂಗ್ಲಾದೇಶ ವಿರುದ್ಧ ನಿರ್ಣಾಯಕ ಪಂದ್ಯ, ಕೆ.ಎಲ್ ರಾಹುಲ್‌ಗೆ ಲಾಸ್ಟ್ ಚಾನ್ಸ್ ?

ಇದನ್ನೂ ಓದಿ : Kannada Rojyotsava : ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯ ಕೋರಿದ ಆರ್‌ಸಿಬಿ, ಬೆಂಗಳೂರು ಬುಲ್ಸ್

ಈ ಸೋಲಿನೊಂದಿಗೆ ಹಾಲಿ ಚಾಂಪಿಯನ್ ಡೆಲ್ಲಿ ಈ ಬಾರಿಯ ಲೀಗ್’ನಲ್ಲಿ ಸತತ 5 ಪಂದ್ಯಗಳಲ್ಲಿ ಸೋಲು ಕಂಡು ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಕುಸಿದಿದೆ. ಆರಂಭದ ಐದೂ ಪಂದ್ಯಗಳನ್ನು ಗೆದ್ದು ಬೀಗುತ್ತಿದ್ದ ದಬಾಂಗ್ ಡೆಲ್ಲಿ ಕಳೆದ ಐದು ಪಂದ್ಯಗಳಲ್ಲಿ ಪುಣೇರಿ ಪಲ್ಟನ್ (38-43), ತಮಿಳ್ ತಲೈವಾಸ್ (39-49), ಬೆಂಗಳೂರು ಬುಲ್ಸ್ (43-47), ಬೆಂಗಾಲ್ ವಾರಿಯರ್ಸ್ (30-35) ಮತ್ತು ಪಾಟ್ನಾ ಪೈರೇಟ್ಸ್ (33-37) ವಿರುದ್ಧ ಸತತ ಐದು ಸೋಲುಗಳನ್ನು ಅನುಭವಿಸಿದೆ.

ಇದನ್ನೂ ಓದಿ :Dewald Brevis : 57 ಎಸೆತಗಳಲ್ಲಿ 162 ರನ್ ಚಚ್ಚಿದ ಮರಿ ಎಬಿಡಿ, ಡಿವಿಲಿಯರ್ಸ್ ಫುಲ್ ಖುಷ್

ಇದನ್ನೂ ಓದಿ :Syed Mushtaq Ali T20 : ಕ್ವಾರ್ಟರ್ ಫೈನಲ್‌ನಲ್ಲಿ ಪಂಜಾಬ್ ವಿರುದ್ಧ ಕರ್ನಾಟಕಕ್ಕೆ ವೀರೋಚಿತ ಸೋಲು

(Pro Kabaddi League) The unbeaten run of the former champion Bengaluru Bulls (Bengaluru Bulls) in the Pro Kabaddi League-9 tournament has come to an end. The Red Bulls suffered their first loss after a five-match unbeaten run as they lost 27-29 against Haryana Steelers in a thrilling match on Tuesday.

Comments are closed.