India Vs England test‌ : ಟೀಮ್ ಇಂಡಿಯಾಗೆ ದಿನೇಶ್‌ ಕಾರ್ತಿಕ್ ನಾಯಕ !

ಲಂಡ ನ್: 37ನೇ ವರ್ಷದಲ್ಲಿ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡಿರುವ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ದಿನೇಶ್ ಕಾರ್ತಿಕ್ ಈಗ ತಂಡದ ನಾಯಕ ಕೂಡ ಹೌದು. ವಿರಾಟ್ ಕೊಹ್ಲಿ ಟೀಮ್ ಇಂಡಿಯಾ ನಾಯತಕ್ವ ತ್ಯಜಿಸಿದ ನಂತರ ಒಟ್ಟು ಐದು ಮಂದಿ ಭಾರತ ತಂಡದ ನಾಯಕತ್ವ ವಹಿಸಿದ್ದಾರೆ. ರೋಹಿತ್ ಶರ್ಮಾ, ಕೆ.ಎಲ್ ರಾಹುಲ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ ಮತ್ತು ಜಸ್ಪ್ರೀತ್ ಬುಮ್ರಾ ನಾಯಕತ್ವ ವಹಿಸಿದ್ದಾರೆ. ದಿನೇಶ್ ಕಾರ್ತಿಕ್ (Dinesh Karthik Captain) 6ನೆ ಯವರು. ಹಾಗಂತ ಡಿಕೆ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಟೀಮ್ ಇಂಡಿಯಾ ಕ್ಯಾಪ್ಟನ್ ಆಗಿಲ್ಲ.

ಡರ್ಬಿಶೈರ್ ವಿರುದ್ಧದ ಟಿ20 ಅಭ್ಯಾಸ ಪಂದ್ಯದಲ್ಲಿ ಭಾರತ ತಂಡವನ್ನು ದಿನೇಶ್ ಕಾರ್ತಿಕ್ ಮುನ್ನಡೆಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗಾಗಿ ಟೀಮಾ ಇಂಡಿಯಾ ಕೆಲ ಅಭ್ಯಾಸ ಪಂದ್ಯಗಳನ್ನಾಡುತ್ತಿದ್ದು, ಮೊದಲ ಪಂದ್ಯದಲ್ಲಿ ಡರ್ಬಿಶೈರ್ ವಿರುದ್ಧ 7 ವಿಕೆಟ್’ಗಳ ಸುಲಭ ಗೆಲುವು ದಾಖಲಿಸಿದೆ. 151 ರನ್’ಗಳ ಟಾರ್ಗೆಟ್ ಬೆನ್ನಟ್ಟಿದ ದಿನೇಶ್ ಕಾರ್ತಿಕ್ ನೇತೃತ್ವದ ಟೀಮ್ ಇಂಡಿಯಾ, ಕೇವಲ 16.4 ಓವರ್’ಗಳಲ್ಲಿ 3 ವಿಕೆಟ್ ಒಪ್ಪಿಸಿ ಗುರಿ ತಲುಪಿತು. ಸಂಜು ಸ್ಯಾಮ್ಸನ್ 38, ಸೂರ್ಯಕುಮಾರ್ ಯಾದವ್ ಅಜೇಯ 36 ರನ್ ಗಳಿಸಿದ್ರೆ, 3ನೇ ಕ್ರಮಾಂಕದಲ್ಲಿ ಕ್ರೀಸ್’ಗಿಳಿದ ದೀಪಕ್ ಹೂಡ ಕೇವಲ 37 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್ಸ್ ನೆರವಿನಿಂದ 59 ರನ್ ಸಿಡಿಸಿದ್ರು.

ಅಭ್ಯಾಸ ಪಂದ್ಯದಲ್ಲಿ ಭಾರತ ತಂಡದ ನಾಯಕತ್ವ ವಹಿಸುವ ಅವಕಾಶ ಸಿಕ್ಕಿರುವುದಕ್ಕೆ ದಿನೇಶ್ ಕಾರ್ತಿಕ್ ಟ್ವಿಟರ್ ಮೂಲಕ ಹರ್ಷ ವ್ಯಕ್ತ ಪಡಿಸಿದ್ದಾರೆ. ‘’ತುಂಬಾ ವರ್ಷಗಳಿಂದ ಭಾರತ ಪರ ಆಡುತ್ತಿದ್ದೇನೆ. ಆದರೆ ತಂಡವನ್ನು ಮುನ್ನಡೆಸುವ ಅವಕಾಶ ಸಿಕ್ಕಿರುವುದು ಇದೇ ಮೊದಲು. ಇದು ಅಭ್ಯಾಸ ಪಂದ್ಯವಾಗಿದ್ದರೂ, ನನ್ನ ಪಾಲಿಗೆ ಇಂದೊಂದು ಶ್ರೇಷ್ಠ ಗೌರವವೆಂದೇ ಭಾವಿಸುತ್ತೇನೆ. ಭಾರತ ತಂಡದ ಭಾಗವಾಗಿರುವುದಕ್ಕೆ ಹೆಮ್ಮೆಯಾಗುತ್ತಿದೆ’’.
– ದಿನೇಶ್ ಕಾರ್ತಿಕ್, ಟೀಮ್ ಇಂಡಿಯಾ ಆಟಗಾರ.‌

ಇದನ್ನೂ ಓದಿ : Jaspreet Bumrah : ಒಂದೇ ಓವರ್‌ನಲ್ಲಿ 35 ರನ್.. ಬ್ಯಾಟಿಂಗ್ ದಿಗ್ಗಜ ಲಾರಾ ದಾಖಲೆ ಮುರಿದ ಬುಮ್ರಾ !

ಇದನ್ನೂ ಓದಿ : Ind vs Eng Rishabh Pant : ರಿಷಭ್ ಪಂತ್ ಬ್ಯಾಟಿಂಗ್ ಸರಿ ಇಲ್ಲ ಎಂದ ಪಾಕ್ ಮಾಜಿ ವೇಗಿ !

Dinesh Karthik Captain India Vs England test‌, Dinesh Karthik is the captain of Team India

Comments are closed.