Dinesh Karthik: ನಿವೃತ್ತಿಯ ಬೆನ್ನಲ್ಲೇ ಮತ್ತೆ ಕ್ರಿಕೆಟ್ ಮೈದಾನಕ್ಕೆ ದಿನೇಶ್ ಕಾರ್ತಿಕ್.. ಟಿ20 ವಿಶ್ವಕಪ್’ನಲ್ಲಿ ಮಿಂಚಲಿರುವ ಡಿಕೆ!

T20 World Cup 2024 Dinesh Karthik : ಕ್ರಿಕೆಟ್’ಗೆ ವಿದಾಯ ಘೋಷಿಸಿರುವ 39 ವರ್ಷದ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ ಐಸಿಸಿ ಟಿ20 ವಿಶ್ವಕಪ್’ನಲ್ಲಿ (ICC T20 World Cup 2024) ಮಿಂಚಲು ರೆಡಿಯಾಗಿದ್ದಾರೆ.

T20 World Cup 2024 Dinesh Karthik : ಕ್ರಿಕೆಟ್’ಗೆ ವಿದಾಯ ಘೋಷಿಸಿರುವ 39 ವರ್ಷದ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ (Dinesh Karthik) ಐಸಿಸಿ ಟಿ20 ವಿಶ್ವಕಪ್’ನಲ್ಲಿ (ICC T20 World Cup 2024) ಮಿಂಚಲು ರೆಡಿಯಾಗಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ದಿನೇಶ್ ಕಾರ್ತಿಕ್, ಬುಧವಾರ ಅಹ್ಮದಾಬಾದ್’ನಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ ಐಪಿಎಲ್ ಪ್ಲೇ ಆಫ್ ಪಂದ್ಯದ ನಂತರ ಕ್ರಿಕೆಟ್ ವೃತ್ತಿಜೀವನಕ್ಕೆ ನಿವೃತ್ತಿ ಘೋಷಿಸಿದ್ದರು. ಆ ಪಂದ್ಯದಲ್ಲಿ ಆರ್’ಸಿಬಿ 4 ವಿಕೆಟ್’ಗಳ ಸೋಲು ಕಂಡಿತ್ತು.

Dinesh Karthik is back on the cricket field after retirement DK will shine in the T20 World Cup 2024
Image Credit to Original Source

ಕ್ರಿಕೆಟ್’ಗೆ ಗುಡ್ ಬೈ ಹೇಳಿರುವ ತಮಿಳುನಾಡಿನ ಡಿಕೆ, ಟಿ20 ವಿಶ್ವಕಪ್’ನಲ್ಲಿ ಮತ್ತೊಂದು ಇನ್ನಿಂಗ್ಸ್’ಗೆ ಸಜ್ಜಾಗಿದ್ದಾರೆ. ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಜೂನ್ 2ರಂದು ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಆತಿಥ್ಯದಲ್ಲಿ ಆರಂಭವಾಗಲಿದ್ದು, ಫೈನಲ್ ಪಂದ್ಯ ಜೂನ್ 29ರಂದು ನಡೆಯಲಿದೆ. ಟಿ20 ವಿಶ್ವಕಪ್ ಟೂರ್ನಿಯಲ್ಲಿ ದಿನೇಶ್ ಕಾರ್ತಿಕ್ ಕಾಮೆಂಟೇಟರ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.

ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಟಿ20 ವಿಶ್ವಕಪ್’ನಲ್ಲಿ ಜೂನ್ 5ರಂದು ತನ್ನ ಅಭಿಯಾನ ಆರಂಭಿಸಲಿದ್ದು, ಮೊದಲ ಪಂದ್ಯದಲ್ಲಿ ಐರ್ಲೆಂಡ್ ತಂಡವನ್ನು ಎದುರಿಸಲಿದೆ. ಜೂನ್ 9ರಂದು ನ್ಯೂಯಾರ್ಕ್’ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ.

Dinesh Karthik is back on the cricket field after retirement DK will shine in the T20 World Cup 2024
Image Credit to Original Source

ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಪಾಕಿಸ್ತಾನ, ಕೆನಡಾ, ಅಮೆರಿಕ ಮತ್ತು ಐರ್ಲೆಂಡ್ ತಂಡಗಳ ಜೊತೆ ಗ್ರೂಪ್ ’ಎ’ನಲ್ಲಿ ಸ್ಥಾನ ಪಡೆದಿದೆ.

ಐಸಿಸಿ ಟಿ20 ವಿಶ್ವಕಪ್’ನಲ್ಲಿ ಭಾರತದ ಕಾಮೆಂಟೇಟರ್ಸ್:

ರವಿ ಶಾಸ್ತ್ರಿ, ಹರ್ಷ ಭೋಗ್ಲೆ, ದಿನೇಶ್ ಕಾರ್ತಿಕ್, ಸುನಿಲ್ ಗವಾಸ್ಕರ್.

https://x.com/t20worldcup/status/1793948943623049366?s=46

ಇದನ್ನೂ ಓದಿ : IPL 2024 Final KKR Champion: ಕೆಕೆಆರ್ ಗೆಲುವಿನ ಹಿಂದೆ ಗಂಭೀರ್ ಮತ್ತು ಅವರಿಬ್ಬರು..!

ಐಸಿಸಿ ಟಿ20 ವಿಶ್ವಕಪ್’ನಲ್ಲಿ ವಿದೇಶಿ ಕಾಮೆಂಟೇಟರ್ಸ್:

ನಾಸಿರ್ ಹುಸೇನ್, ಇಯಾನ್ ಸ್ಮಿತ್, ಮೆಲ್ ಜೋನ್ಸ್, ಇಯಾನ್ ಬಿಷಪ್, ಸ್ಯಾಮ್ಯುಯೆಲ್ ಬದ್ರೀ, ಆ್ಯರೋನ್ ಫಿಂಚ್, ಸ್ಟೀವ್ ಸ್ಮಿತ್, ಕಾರ್ಲೋಸ್ ಬ್ರಾತ್’ವೇಟ್, ಲಿಸಾ ಸ್ಟಾಲೇಕರ್, ರಿಕಿ ಪಾಂಟಿಂಗ್, ಮ್ಯಾಥ್ಯೂ ಹೇಡನ್, ರಮೀಜ್ ರಾಜಾ, ಐಯನ್ ಮಾರ್ಗನ್, ಟಾಮ್ ಮೂಡಿ, ವಸೀಮ್ ಅಕ್ರಮ್, ಡೇಲ್ ಸ್ಟೇಯ್ನ್, ಗ್ರೇಮ್ ಸ್ಮಿತ್, ಮೈಕ್ ಅಥರ್ಟನ್, ವಕಾರ್ ಯೂನಿಸ್, ಸೈಮನ್ ಡುಲ್, ಶಾನ್ ಪೊಲ್ಲಾಕ್, ಪಾಮಿ ಎಂಬಾಂಗ್ವಾ, ಡ್ಯಾನಿ ಮಾರಿಸನ್, ಅಲನ್ ವಿಕಿನ್ಸ್, ಮೈಕ್ ಹೇಸ್ನನ್, ರಸೆಲ್ ಅರ್ನಾಲ್ಡ್, ಡ್ಯಾರೆನ್ ಗಂಗಾ.

ಇದನ್ನೂ ಓದಿ : IPL Final 2024: ಇಂದು ಐಪಿಎಲ್ ಫೈನಲ್: ಕೆಕೆಆರ್ Vs ಸನ್’ರೈಸರ್ಸ್, ಯಾರು ಬಲಿಷ್ಠರು ? ಯಾರು ಕಪ್ ಗೆಲ್ತಾರೆ? ಇಲ್ಲಿದೆ ಫೈನಲ್’ನ ಇಂಚಿಂಚೂ ಮಾಹಿತಿ !

Dinesh Karthik is back on the cricket field after retirement DK will shine in the T20 World Cup 2024

Comments are closed.