IPL 2024 Final KKR Champion: ಕೆಕೆಆರ್ ಗೆಲುವಿನ ಹಿಂದೆ ಗಂಭೀರ್ ಮತ್ತು ಅವರಿಬ್ಬರು..!

IPL 2024 Final KKR Champion:  ಅನುಮಾನವೇ ಬೇಡ.. #KolkataKnightRiders ಗೆಲುವಿನ ಶಿಲ್ಪಿ ಗೌತಮ್ ಗಂಭೀರ್ (Gautam Ghambir) . 10 ವರ್ಷಗಳ ನಂತರ ಕೆಕೆಆರ್ ತಂಡ ಐಪಿಎಲ್ ಚಾಂಪಿಯನ್ ಆಗಿದೆ

IPL 2024 Final KKR Champion:  ಅನುಮಾನವೇ ಬೇಡ.. #KolkataKnightRiders ಗೆಲುವಿನ ಶಿಲ್ಪಿ ಗೌತಮ್ ಗಂಭೀರ್ (Gautam Ghambir) . 10 ವರ್ಷಗಳ ನಂತರ ಕೆಕೆಆರ್ ತಂಡ ಐಪಿಎಲ್ ಚಾಂಪಿಯನ್ ಆಗಿದೆ ಎಂದರೆ ಅದರ ಹಿಂದೆ ಗಂಭೀರ್ ಪಾತ್ರ ತುಂಬಾ ದೊಡ್ಡದು. 2012 ಮತ್ತು 2014ರಲ್ಲಿ ಕೆಕೆಆರ್ ತಂಡ ಚಾಂಪಿಯನ್ ಆದಾಗ ಆ ಚಾಂಪಿಯನ್ ತಂಡದ ನಾಯಕನಾಗಿದ್ದವನು ಗೌತಮ್ ಗಂಭೀರ್. ಅಲ್ಲಿಂದ ಮುಂದಿನ 9 ವರ್ಷಗಳಲ್ಲಿ ಕೆಕೆಆರ್ ತಂಡ 4 ಬಾರಿ ಪ್ಲೇ ಆಫ್ ತಲುಪಿದೆ,

IPL 2024 Final Kolkata Knight Riders vs Sun raises Hyderabad IPL won KKR Gautam Ghambir Shah Rukh Khan Abhishek Nayar
Image Credit To Original Source

ಅದರಲ್ಲೊಮ್ಮೆ ಫೈನಲ್. ಆದರೆ ಚಾಂಪಿಯನ್’ಷಿಪ್ ಗೆಲ್ಲಲು ಸಾಧ್ಯವಾಗಿರಲಿಲ್ಲ. ಕಾರಣ, ತಂಡದ ಜೊತೆ ಗಂಭೀರ್ ಇರಲಿಲ್ಲ. ಈ ಬಾರಿ ಮೆಂಟರ್ ಆಗಿ ಕೆಕೆಆರ್ ಕ್ಯಾಂಪ್’ಗೆ ನುಗ್ಗಿದವನೇ ತಂಡವನ್ನು 3ನೇ ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿದ್ದಾನೆ. ಗೌತಮ್ ಗಂಭೀರ್’ನ ನಡವಳಿಕೆ, ಆತನ ಅತಿರೇಕದ ವರ್ತನೆಗಳು ಸದಾ ಟಾಕೆ, ವಿಮರ್ಶೆಗೆ ಒಳಪಡುತ್ತಲೇ ಇರುತ್ತವೆ. ಆದರೆ ಆಟ ಎಂದು ಬಂದಾಗ ಗಂಭೀರ್ ಬಯಸುವುದು ಒಂದೇ.. ಅದು ಗೆಲುವು ಅಷ್ಟೇ..

ಅದು ಹೇಗಾದರೂ ಸರಿ, ಯಾವ ರೀತಿಯಲ್ಲಾದರೂ ಸರಿ.. ಗಂಭೀರ್’ಗೆ ಗೆಲ್ಲಬೇಕು ಅಷ್ಟೇ.. ಆತ ಸೋಲನ್ನು ದ್ವೇಷಿಸುವ ವ್ಯಕ್ತಿ. ಅಂಥವನನ್ನು ಲಕ್ನೋ ತಂಡದಿಂದ ಎಳೆದು ತಂದು ಕೆಕೆಆರ್ ಟೀಮ್’ನ ಮೆಂಟರ್ (ಮಾರ್ಗದರ್ಶಕ) ಆಗಿ ನೇಮಕ ಮಾಡಿದವನು ತಂಡದ ಮಾಲೀಕ ಶಾರುಖ್ ಖಾನ್. ಈ ಬಾರಿ ಕೋಲ್ಕತಾ ತಂಡದ ಹಣೆಬರಹವನ್ನು ಬದಲಿಸಿದ್ದೇ ಈ ನಿರ್ಧಾರ, ಮಾಸ್ಟರ್ ಸ್ಟ್ರೋಕ್ ಎನ್ನುತ್ತಾರಲ್ಲಾ.. ಅದು ಇದೇ.

ಇದನ್ನೂ ಓದಿ : Virat Kohli : ಅವರು ನಿನ್ನ ಕನಸಿಗೆ ಕೊಳ್ಳಿ ಇಟ್ಟರು, ಅವರನ್ನು ಕ್ಷಮಿಸಿ ಬಿಡು ವಿರಾಟ್..’’

‘’10 ವರ್ಷಗಳಿಗೆ ನೀನು ನನಗೆ ಬೇಕು, ಅದಕ್ಕಾಗಿ ಎಷ್ಟು ಕೋಟಿಗಳನ್ನಾದರೂ ಬರೆದುಕೋ’’ ಎಂದು ಗಂಭೀರ್ ಮುಂದೆ blank check ಹಿಡಿದು ನಿಂತಿದ್ದ ಶಾರುಖ್. ತಂಡದ ಆಯ್ಕೆಯಲ್ಲಿ, strategyಗಳನ್ನು ಹೆಣೆಯುವಲ್ಲಿ.. ಹೀಗೆ ಗೆಲ್ಲಲು ಏನೆಲ್ಲಾ ಮಾಡಬೇಕೋ ಅಷ್ಟೂ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಗಂಭೀರ್’ಗೆ ಪೂರ್ಣ ಸ್ವಾತಂತ್ರ್ಯವನ್ನು ಶಾರುಖ್ ಖಾನ್ ನೀಡಿದ್ದ. Auctionನಿಂದ ಆರಂಭವಾಗಿ ಚಾಂಪಿಯನ್’ಷಿಪ್ ಗೆಲ್ಲುವವರೆಗೆ.. ಗಂಭೀರ್’ನ ಒಂದೇ ಒಂದು ನಿರ್ಧಾರವನ್ನೂ ಶಾರುಖ್ ಪ್ರಶ್ನಿಸಲಿಲ್ಲ.

‘’ಅದೆಷ್ಟು ಕೋಟಿ ಕೊಟ್ಟಾದರೂ ಸರಿ, ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ ನನಗೆ ಬೇಕು’’ ಎಂದಾಗ ಶಾರುಖ್ ಖಾನ್ ಹೇಳಿದ್ದು ಒಂದೇ ಮಾತು, ‘go ahead’. ಸ್ಟಾರ್ಕ್’ಗೆ 24 ಮುಕ್ಕಾಲು ಕೋಟಿ ಕೊಟ್ಟಾಗ ಬೇರೆಯವರು ಹುಬ್ಬೇರಿಸಿದರೂ ಶಾರುಖ್ ಮಾತ್ರ ಗಂಭೀರ್ ನಿರ್ಧಾರದ ಹಿಂದೆ ದೃಢವಾಗಿ ನಿಂತು ಬಿಟ್ಟಿದ್ದ. ಕೊನೆಗೊ ಆ ಇಪ್ಪತ್ತನಾಲ್ಕು ಮುಕ್ಕಾಲು ಕೋಟಿ ವ್ಯರ್ಥವಾಗಲಿಲ್ಲ. ನೆನಪಿರಲಿ.., ಗೌತಮ್ ಗಂಭೀರ್ ಏಳು ವರ್ಷಗಳ ಕಾಲ ಕೆಕೆಆರ್ ಪರ ಆಡಿದ್ದಾನೆೆ.

IPL 2024 Final Kolkata Knight Riders vs Sun raises Hyderabad IPL won KKR Gautam Ghambir Shah Rukh Khan Abhishek Nayar
Image Credit To Original Source

‘’ಆ ಏಳು ವರ್ಷಗಳಲ್ಲಿ ಕ್ರಿಕೆಟ್ ಬಗ್ಗೆ ನನ್ನ ಜೊತೆ ಶಾರುಖ್ ಖಾನ್ ಎಪ್ಪತ್ತು ಸೆಕೆಂಡ್ ಕೂಡ ಮಾತನಾಡಿಲ್ಲ’’ ಎಂದು ತೀರಾ ಈಚೆಗೆ ಸ್ವತಃ ಗಂಭೀರ್ ಹೇಳಿದ್ದ. ಅಲ್ಲೊಬ್ಬ ಲಕ್ನೋ ತಂಡದ ಮಾಲೀಕ ತನ್ನ ತಂಡ ಒಂದು ಮ್ಯಾಚ್ ಸೋತದ್ದಕ್ಕೆ ನಾಯಕನನ್ನು ಕ್ಯಾಮರಾ ಕಣ್ಣುಗಳ ಮುಂದೆಯೇ ನಿಂದಿಸಿದ್ದ. ಕ್ರಿಕೆಟ್ ಗಂಧಗಾಳಿ ಗೊತ್ತಿಲ್ಲದಿದ್ದರೂ ಎಲ್ಲದರಲ್ಲೂ ಮೂಗು ತೂರಿಸುವ ಆ ಮನುಷ್ಯನಿಗೂ, ತಂಡ ಗೆಲ್ಲಲು ‘’ಆಟ ಬಲ್ಲವರಿಗೆ’’ ಪೂರ್ಣ ಸ್ವಾತಂತ್ರ್ಯ ಕೊಟ್ಟ ಶಾರುಖ್ ಖಾನ್’ಗೂ ಅದೆಷ್ಟು ವ್ಯತ್ಯಾಸ..! ಕೆಕೆಆರ್ ಯಶಸ್ಸಿನ ಹಿಂದೆ ಮತ್ತೊಬ್ಬ ವ್ಯಕ್ತಿಯಿದ್ದಾನೆ. ಆತ ತೆರೆಯ ಹಿಂದಿನ ಹೀರೋ. ಕೆಕೆಆರ್ ತಂಡದ backbone.

ಇದನ್ನೂ ಓದಿ : Shikhar Dhawan To Marry Mithali Raj? ಮಿಥಾಲಿ ರಾಜ್ ಜೊತೆ ಶಿಖರ್ ಧವನ್ ಮದುವೆ..? ವಿವಾಹದ ಬಗ್ಗೆ ಗಬ್ಬರ್ ಹೇಳಿದ್ದೇನು..?

ಚಾಂಪಿಯನ್’ಷಿಪ್ ಗೆಲ್ಲಲು ವಿದೇಶಿ ಆಟಗಾರರಷ್ಟೇ ಇದ್ದರೆ ಸಾಲದು. ‘’ನಮ್ಮ ನೆಲದ’’ ಮ್ಯಾಚ್ ವಿನ್ನರ್’ಗಳು ಬೇಕು. ಅಂಥಾ ಮ್ಯಾಚ್ ವಿನ್ನರ್’ಗಳನ್ನು ಜರಡಿ ಹಿಡಿದು ಹುಡುಕಿದವನು ಮುಂಬೈನ ಹದ್ದಿನ ಕಣ್ಣಿನ ಮಾಜಿ ಕ್ರಿಕೆಟಿಗ ಅಭಿಷೇಕ್ ನಾಯರ್. ಉತ್ತರ ಪ್ರದೇಶದ ಅಲಿಗಢದಿಂದ ರಿಂಕು ಸಿಂಗ್’ನನ್ನು ಹುಡುಕಿ ತಂದದ್ದು, ಹರ್ಯಾಣದ ಅಂಬಾಲ ಕ್ಯಾಂಟ್’ನ ಸ್ವಿಂಗ್ ಬೌಲರ್ ವೈಭವ್ ಅರೋರಾ.

ಮಧ್ಯಪ್ರದೇಶದ ವೆಂಕಟೇಶ್ ಅಯ್ಯರ್, ದೆಹಲಿ ಹುಡುಗರಾದ ಹರ್ಷಿತ್ ರಾಣಾ, ಆ್ಯಂಗ್ರಿಷ್ ರಘುವಂಶಿ.. ಅಷ್ಟೇ ಯಾಕೆ, ತಮಿಳುನಾಡಿನಲ್ಲಿ ಕ್ರಿಕೆಟ್ ಆಡುತ್ತಿದ್ದ ನಮ್ಮ ಬೀದರ್’ನ ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿಯ ಪ್ರತಿಭೆಯನ್ನು ಗುರುತಿಸಿದವನು ಅಭಿಷೇಕ್ ನಾಯರ್. ಕೆಕೆಆರ್’ನಲ್ಲಿ ಇಂಡಿಯನ್ ಮ್ಯಾಚ್ ವಿನ್ನರ್’ಗಳ ತಂಡ ಕಟ್ಟಿದ ಶ್ರೇಯ ಸಲ್ಲಬೇಕಿರುವುದು ಅಭಿಷೇಕ್ ನಾಯರ್’ಗೆ.

ಇದನ್ನೂ ಓದಿ : IPL Final 2024: ಇಂದು ಐಪಿಎಲ್ ಫೈನಲ್: ಕೆಕೆಆರ್ Vs ಸನ್’ರೈಸರ್ಸ್, ಯಾರು ಬಲಿಷ್ಠರು ? ಯಾರು ಕಪ್ ಗೆಲ್ತಾರೆ? ಇಲ್ಲಿದೆ ಫೈನಲ್’ನ ಇಂಚಿಂಚೂ ಮಾಹಿತಿ !

IPL 2024 Final Kolkata Knight Riders vs Sun raises Hyderabad IPL won KKR Gautam Ghambir Shah Rukh Khan Abhishek Nayar

Comments are closed.