Dinesh Karthik: ದಿನೇಶ್ ಕಾರ್ತಿಕ್ ಪವರ್ ಹಿಟ್ಟಿಂಗ್ ಸಕ್ಸಸ್ ಹಿಂದೆ ಬೆಂಗಳೂರು ಕೋಚ್ RX

ಬೆಂಗಳೂರು: Dinesh Karthik RX Murali : ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡುತ್ತಿರುವ ಟೀಮ್ ಇಂಡಿಯಾದಲ್ಲಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಅವರದ್ದು ಫಿನಿಷರ್ ರೋಲ್. ಕ್ರಿಕೆಟ್ ಜಗತ್ತಿನ ಶ್ರೇಷ್ಠ ಮ್ಯಾಚ್ ಫಿನಿಷರ್ ಎಂ.ಎಸ್ ಧೋನಿ (MS Dhoni) ನಿವೃತ್ತಿಯಾದ ನಂತರ ಟೀಮ್ ಇಂಡಿಯಾದಲ್ಲಿ ಆ ಸ್ಥಾನವನ್ನು ಮತ್ತೊಬ್ಬ ಅನುಭವಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ತುಂಬುತ್ತಿದ್ದಾರೆ. ಫಿನಿಷರ್ ಕೌಶಲ್ಯದಿಂದಲೇ ದಿನೇಶ್ ಕಾರ್ತಿಕ್ 37ನೇ ವಯಸ್ಸಿನಲ್ಲಿ ಭಾರತ ತಂಡಕ್ಕೆ ಕಂಬ್ಯಾಕ್ ಮಾಡಿದ್ದಾರೆ.

ಪವರ್ ಹಿಟ್ಟಿಂಗ್’ನಿಂದ ಗಮನ ಸೆಳೆಯುತ್ತಿರುವ ದಿನೇಶ್ ಕಾರ್ತಿಕ್ ಅವರ ಯಶಸ್ಸಿನ ಹಿಂದೆ ಬೆಂಗಳೂರಿನ ಕ್ರಿಕೆಟ್ ಕೋಚ್ ಒಬ್ಬರ ಪಾತ್ರವಿದೆ. ಅವರೇ ಆರ್.ಎಕ್ಸ್ ಮುರಳೀಧರ್ (RX Murali). ಈ ವಿಚಾರವನ್ನು ಸ್ವತಃ ದಿನೇಶ್ ಕಾರ್ತಿಕ್ ಅವರೇ ಸಂದರ್ಶನವೊಂದರಲ್ಲಿ ಬಹಿರಗ ಪಡಿಸಿದ್ದಾರೆ. 2022ರ ಐಪಿಎಲ್ ಟೂರ್ನಿಗೂ ಮುನ್ನ ದಿನೇಶ್ ಕಾರ್ತಿಕ್, ಬೆಂಗಳೂರಿನಲ್ಲಿ ಕೆಲ ದಿನ ಕ್ರಿಕೆಟ್ ಕೋಚ್ ಆರ್.ಎಕ್ಸ್ ಮುರಳೀಧರ್ ಅವರ ಗರಡಿಯಲ್ಲಿ ಅಭ್ಯಾಸ ನಡೆಸಿದ್ದರು. ವಿಶೇಷವಾಗಿ ಪವರ್ ಹಿಟ್ಟಿಂಗ್ ವಿಭಾಗದಲ್ಲಿ ತಾಲೀಮು ನಡೆಸಿದ್ದರು. ಬಳಿಕ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ದಿನೇಶ್ ಕಾರ್ತಿಕ್ ಅಕ್ಷರಶಃ ಅಬ್ಬರಿಸಿದ್ದರು. 7 ವರ್ಷಗಳ ನಂತರ ಮತ್ತೆ ರಾಯಲ್ ಚಾಲೆಂಜರ್ಸ್ ಜರ್ಸಿಯಲ್ಲಿ ಕಾಣಿಸಿಕೊಂಡಿದ್ದ ಡಿಕೆ, 16 ಪಂದ್ಯಗಳಿಂದ 55ರ ಸರಾಸರಿಯಲ್ಲಿ, 183.33ರ ಸ್ಟ್ರೇಕ್’ರೇಟ್’ನಲ್ಲಿ 330 ರನ್ ಕಲೆ ಹಾಕಿದ್ದರು.

ಬೆಂಗಳೂರಿನ ಖ್ಯಾತ ಕ್ರಿಕೆಟ್ ಕೋಚ್ ಆರ್.ಎಕ್ಸ್ ಮುರಳೀಧರ್, ಕರ್ನಾಟಕ ಕಿರಿಯರ ತಂಡಗಳಿಗೆ ಕೋಚ್ ಆಗಿದ್ದವರು. ಆರ್.ಎಕ್ಸ್ ಕ್ರಿಕೆಟ್ ಅಕಾಡೆಮಿ ನಡೆಸುತ್ತಿರುವ ಆರ್.ಎಕ್ಸ್ ಮುರಳಿ, ಭಾರತ ಟೆಸ್ಟ್ ತಂಡದ ಆಟಗಾರ ಮಯಾಂಕ್ ಅಗರ್ವಾಲ್ ಅವರ ಪರ್ಸನಲ್ ಕೋಚ್ ಕೂಡ ಆಗಿದ್ದಾರೆ. ರಣಜಿ ಟ್ರೋಫಿಯಲ್ಲಿ ರನ್ ಗಳಿಸಲು ಪರದಾಡುತ್ತಿದ್ದ ಮಯಾಂಕ್, ಮುರಳೀಧರ್ ಅವರ ಗರಡಿ ಸೇರಿದ ನಂತರ ಆಟ ಗಣನೀಯವಾಗಿ ಸುಧಾರಿಸಿತ್ತು. 2017-28ನೇ ಸಾಲಿನ ರಣಜಿ ಟ್ರೋಫಿ ಟೂರ್ನಿಯಲ್ಲಿ ಸಾವಿರಕ್ಕೂ ಹೆಚ್ಚು ರನ್ ಕಲೆ ಹಾಕಿದ್ದ ಮಯಾಂಕ್, 2018ರಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದರು. ಮಯಾಂಕ್ ಅವರ ಯಶಸ್ಸಿನ ಹಿಂದಿನ ಶಕ್ತಿಯಾಗಿದ್ದ ಆರ್.ಎಕ್ಸ್ ಮುರಳೀಧರ್, ಇದೀಗ ದಿನೇಶ್ ಕಾರ್ತಿಕ್ ಅವರ ಯಶಸ್ಸಿಗೂ ಕಾರಣರಾಗಿದ್ದಾರೆ. 2007ರಲ್ಲಿ ಚೊಚ್ಚಲ ಟಿ20 ವಿಶ್ವಕಪ್ ಗೆದ್ದ ಭಾರತ ತಂಡದಲ್ಲಿದ್ದ ದಿನೇಶ್ ಕಾರ್ತಿಕ್, 15 ವರ್ಷಗಳ ನಂತರ ಮತ್ತೊಂದು ಚುಟುಕು ವಿಶ್ವಕಪ್’ನಲ್ಲಿ ಆಡುತ್ತಿದ್ದಾರೆ.

ಇದನ್ನೂ ಓದಿ :‌ Dinesh Karthik retirement : ಕ್ರಿಕೆಟ್‌ ವೃತ್ತಿ ಬದುಕಿಗೆ ದಿನೇಶ್‌ ಕಾರ್ತಿಕ್‌ ನಿವೃತ್ತಿ ?

ಇದನ್ನೂ ಓದಿ : Virat Kohli Vs Pakistan : ರಣಬೇಟೆಗಾರನ ಮತ್ತೊಂದು ಮಹಾಬೇಟೆ, ಪಾಕಿಸ್ತಾನ ವಿರುದ್ಧ ವಿಶ್ವಕಪ್’ನಲ್ಲಿ ವಿರಾಟ್ ದಾಖಲೆ ನೋಡಿದ್ರೆ ದಂಗಾಗಿ ಹೋಗ್ತೀರಿ

Dinesh Karthik Power Hitting Success Behind Bengaluru Coach RX Murali

Comments are closed.