Parking Policy: ಬೆಂಗಳೂರಿಗರೇ ಗಮನಿಸಿ; ಇನ್ಮುಂದೆ ಬೇಕಾಬಿಟ್ಟಿ ಗಾಡಿ ಪಾರ್ಕ್ ಮಾಡಿದ್ರೆ ಬೀಳುತ್ತೆ ಫೈನ್

ಬೆಂಗಳೂರು: Parking Policy: ರಾಜಧಾನಿ ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ವಾಹನಗಳದ್ದೇ ಸೌಂಡ್.. ಮನೆಬಿಟ್ಟು ಹೊರಟ್ರೆ ಸಾಕು ನೂರಾರು ವೆಹಿಕಲ್ ಗಳು ನಾಲ್ಕು ದಿಕ್ಕಿನಲ್ಲೂ ಹಾರ್ನ್ ಮಾಡಿ ತಲೆ ನೋವು ತಂದಿಡುತ್ತವೆ. ಅದ್ರಲ್ಲೂ ಟ್ರಾಫಿಕ್ ನಲ್ಲಿ ಸಿಕ್ಕಾಕೊಂಡ್ರೆ ಕಥೆನೇ ಬೇರೆ. ಇದೊಂದು ಸಮಸ್ಯೆ ಆದ್ರೆ ಪಾರ್ಕಿಂಗ್ ಪ್ರಾಬ್ಲಂ ಅನ್ನೋದು ಕಟ್ಟಿಟ್ಟ ಬುತ್ತಿ. ಮನೆಗೆ ನಾಲ್ಕೈದರಂತೆ ಗಾಡಿಗಳನ್ನು ಹೊಂದಿರುವ ಬೆಂಗಳೂರಿನಲ್ಲಿ ಪಾರ್ಕಿಂಗ್ ಅನ್ನೋದು ಪೊಲೀಸರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಅಂಕಿ ಅಂಶಗಳ ಪ್ರಕಾರ ಬೆಂಗಳೂರಿನಲ್ಲಿ ಒಂದೂವರೆ ಕೋಟಿ ವಾಹನಗಳಿದ್ದು, ನಗರದಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದೆ. ಒಂದು ಸಿಗ್ನಲ್ ದಾಟಬೇಕು ಅಂದರೂ ಕನಿಷ್ಟ 3 ನಿಮಿಷನಾದ್ರೂ ಕಾಯಲೇಬೇಕು. ವಾಹನಗಳ ಸಂಖ್ಯೆಗೆ ತಕ್ಕಂತೆ ಹಲವೆಡೆ ಟ್ರಾಫಿಕ್ ಪೊಲೀಸ್ ಇಲ್ಲದೇ ಇರುವುದರಿಂದ ಎಲ್ಲೆಂದರಲ್ಲಿ ವಾಹನ ಪಾರ್ಕಿಂಗ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಇದು ಟ್ರಾಫಿಕ್ ಸಮಸ್ಯೆಯನ್ನು ದುಪ್ಪಟ್ಟುಗೊಳಿಸಲು ಇನ್ನೊಂದು ಕಾರಣ ಕೂಡಾ ಹೌದು.

ಈ ಹಿನ್ನೆಲೆ ಜನರು ಸರ್ಕಾರದ ಸಾರಿಗೆಯನ್ನು ಉತ್ತೇಜಿಸಲು ಮತ್ತು ಖಾಸಗಿ ವಾಹನಗಳಿಗೆ ಕಡಿವಾಣ ಹಾಕುವ ಸಲುವಾಗಿ ನಗರ ಭೂ ಸಾರಿಗೆ ಇಲಾಖೆ ಪಾರ್ಕಿಂಗ್ ನಿಯಮಗಳನ್ನು ಜಾರಿಗೆ ತರಲು ಮುಂದಾಗಿದೆ. ಬೆಂಗಳೂರಿನ 700 ರಸ್ತೆಗಳಲ್ಲಿ ಪಾರ್ಕಿಂಗ್ ಗೆ ಸ್ಥಳ ಗುರುತು ಮಾಡಿದ್ದು, ಈ ರಸ್ತೆಗಳಲ್ಲಿ ಪಾರ್ಕಿಂಗ್ ಮಾಡಲು ಶುಲ್ಕ ಕಟ್ಟಬೇಕಿದೆ.

ರಾಜಧಾನಿಯ 700 ರಸ್ತೆಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ:
ಬಿಬಿಎಂಪಿ ವ್ಯಾಪ್ತಿಯ 8 ವಲಯಗಳಲ್ಲಿನ 700 ರಸ್ತೆಗಳಲ್ಲಿ ಹಣ ಪಾವತಿಸಿ ವಾಹನ ನಿಲುಗಡೆ ಮಾಡಲು ಅವಕಾಶ ಕಲ್ಪಿಸಲಾಗುತ್ತಿದೆ. ಯಲಹಂಕ ವಲಯ- 60, ಬೊಮ್ಮನಹಳ್ಳಿ- 58, ದಾಸರಹಳ್ಳಿ- 104, ಮಹದೇವಪುರ- 50, ಪೂರ್ವ ವಲಯ- 59, ರಾಜರಾಜೇಶ್ವರಿ ನಗರ- 58, ದಕ್ಷಿಣ ವಲಯ- 197, ಪಶ್ಚಿಮ ವಲಯ- 137 ರಸ್ತೆಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗುತ್ತಿದೆ, ಎ, ಬಿ, ಸಿ ಎಂಬ ಮೂರು ಪಾರ್ಕಿಂಗ್ ವಲಯಗಳನ್ನಾಗಿ ಮಾಡಲಾಗಿದ್ದು, ಈ ಝೋನ್ ಗಳಲ್ಲಿ ಪಾರ್ಕ್ ಮಾಡುವ ವಾಹನಗಳಿಗೆ ಗಂಟೆಗೆ ದರ ನಿಗದಿ ಮಾಡಲಾಗಿದೆ.

ಎಲ್ಲೆಲ್ಲಿ ಎಷ್ಟೆಷ್ಟು ಹಣ ಪಾವತಿಸಬೇಕು..?
ಎ ವರ್ಗದಲ್ಲಿ ಪಾರ್ಕಿಂಗ್ ಮಾಡುವ ದ್ವಿಚಕ್ರ ವಾಹನಗಳಿಗೆ ಪ್ರತಿ ಗಂಟೆಗೆ 15 ರೂ. ಕಾರುಗಳಿಗೆ 30 ರೂ. ಬಿ ವರ್ಗದಲ್ಲಿ ಪಾರ್ಕಿಂಗ್ ಮಾಡುವ ದ್ವಿಚಕ್ರ ವಾಹನಗಳಿಗೆ ಗಂಟೆಗೆ 10 ರೂ. ಕಾರುಗಳಿಗೆ 20 ರೂ. ಸಿ ವರ್ಗದಲ್ಲಿ ಪಾರ್ಕಿಂಗ್ ಮಾಡುವ ದ್ವಿಚಕ್ರ ವಾಹನಗಳಿಗೆ 5 ರೂ. ಕಾರುಗಳಿಗೆ 15 ರೂ. ದರ ನಿಗದಿ ಮಾಡಲಾಗಿದೆ.

ಪಾರ್ಕಿಂಗ್ ಪಾಲಿಸಿ ತರುವ ಹಿಂದಿನ ಉದ್ದೇಶವೇನು..?
ಇನ್ಮುಂದೆ ಬೇಕಾಬಿಟ್ಟಿಯಾಗಿ ಪಾರ್ಕಿಂಗ್ ಮಾಡಲು ಅವಕಾಶವಿಲ್ಲ. ಪಾರ್ಕಿಂಗ್ ಪಾಲಿಸಿ ಜಾರಿಗೆ ಬಂದರೆ ಜನ ಶುಲ್ಕಕ್ಕೆ ಹೆದರಿ ಸಾಮೂಹಿಕ ಸಾರಿಗೆ ಬಳಸುವ ಸಾಧ್ಯತೆಗಳಿವೆ ಎಂಬ ನಿಟ್ಟಿನಲ್ಲಿ ಸರ್ಕಾರ ಈ ನಿಯಮಗಳನ್ನು ಜಾರಿಗೆ ತರಲು ಚಿಂತಿಸಿದೆ. ಮುಂದಿನ ವಾರದಿಂದಲೇ ಬೆಂಗಳೂರಿನಲ್ಲಿ ಪೇ ಪಾರ್ಕಿಂಗ್ ನಿಯಮ ಜಾರಿಗೆ ಬರಲಿದೆ ಎಂದು ಹೇಳಲಾಗುತ್ತಿದೆ. ಇನ್ನು ಮೋಟಾರು ರಹಿತ ಸಾರಿಗೆಯನ್ನು ಉತ್ತೇಜಿಸುವ ಸಲುವಾಗಿ ಪೇ ಪಾರ್ಕಿಂಗ್ ಏರಿಯಾದಲ್ಲಿ ಸೈಕಲ್ ಗಳಿಗೂ ಜಾಗ ಮೀಸಲಿಡಲಾಗುತ್ತದೆ. ಆದರೆ ಸೈಕಲ್ ನಿಲುಗಡೆಗೆ ಶುಲ್ಕ ಪಾವತಿಸಬೇಕಿಲ್ಲ.

ಇದನ್ನೂ ಓದಿ: Punith Rajkumar : ನಾಳೆ ಅಪ್ಪು ಮೊದಲ ವರ್ಷದ ಪುಣ್ಯಸ್ಮರಣೆ : ಕಠೀರವ ಸ್ಟುಡಿಯೋದಲ್ಲಿ ಸಕಲ ಸಿದ್ದತೆ

ಇದನ್ನೂ ಓದಿ: Girl’s auction: ರಾಜಸ್ಥಾನದಲ್ಲಿ ಸಾಲ ತೀರಿಸದಿದ್ದರೆ ಹೆಣ್ಣುಮಕ್ಕಳ ಮೇಲೆ ನಡೆಯುತ್ತೆ ಇಂಥ ದೌರ್ಜನ್ಯ..!

Parking Policy: karnataka govt introducing new parking policy in bangalore

Comments are closed.