T20 World Cup 2022: ಭಾರತದ ಕೈಯಲ್ಲಿ ಪಾಕ್ ಭವಿಷ್ಯ, ಟೀಮ್ ಇಂಡಿಯಾ ಗೆಲುವಿಗೆ ಪಾಕಿಸ್ತಾನ ಪ್ರಾರ್ಥನೆ

ಸಿಡ್ನಿ: Pakistan prays India victory : ಭಾರತ ಮತ್ತು ಪಾಕಿಸ್ತಾನ ತಂಡಗಳು ಕ್ರಿಕೆಟ್ ಜಗತ್ತಿನಲ್ಲಿ ಸಾಂಪ್ರದಾಯಿಕ ಎದುರಾಳಿಗಳು. ಒಬ್ಬರ ವಿರುದ್ಧ ಮತ್ತೊಬ್ಬರು ಜಿದ್ದಿಗೆ ಬಿದ್ದಂತೆ ಆಡೋದೇ ಇಂಡಿಯಾ Vs ಪಾಕಿಸ್ತಾನ ಪಂದ್ಯಗಳ ವಿಶೇಷತೆ. ಟಿ20 ವಿಶ್ವಕಪ್ ಟೂರ್ನಿಯಲ್ಲಿ (T20 World Cup 2022) ಅಂತಹ ಜಿದ್ದಿನ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ 4 ವಿಕೆಟ್’ಗಳ ರೋಚಕ ಗೆಲುವು ಸಾಧಿಸಿರುವ ವಿಚಾರ ನಿಮ್ಗೆ ಗೊತ್ತೇ ಇದೆ.

ಭಾರತ ವಿರುದ್ಧ ಸೋತು ಮುಖಭಂಗಕ್ಕೊಳಗಾಗಿದ್ದ ಪಾಕಿಸ್ತಾನ,ತನ್ನ 2ನೇ ಲೀಗ್ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ 1 ರನ್ನಿಂದ ಸೋತು ಸೆಮಿಫೈನಲ್ ಹಾದಿಯನ್ನು ದುರ್ಗಮ ಮಾಡಿಕೊಂಡಿದೆ. ಪಾಕಿಸ್ತಾನ ತಂಡ ಸೆಮಿಫೈನಲ್ ಪ್ರವೇಶಿಸಬೇಕಾದರೆ ಮುಂದಿನ ಮೂರೂ ಲೀಗ್ ಪಂದ್ಯಗಳನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ.

Pakistan prays India victory : ಟಿ20 ವಿಶ್ವಕಪ್ 2022: ಪಾಕಿಸ್ತಾನದ ಮುಂದಿನ ಪಂದ್ಯಗಳು

Vs ನೆದರ್ಲೆಂಡ್ಸ್: ಅಕ್ಟೋಬರ್ 30 (ಪರ್ತ್)
Vs ದಕ್ಷಿಣ ಆಫ್ರಿಕಾ: ನವೆಂಬರ್ 03 (ಸಿಡ್ನಿ)
Vs ಬಾಂಗ್ಲಾದೇಶ: ನವೆಂಬರ್ 06 (ಸಿಡ್ನಿ)

ಮುಂದಿನ 3 ಲೀಗ್ ಪಂದ್ಯಗಳನ್ನು ಗೆದ್ದರೂ ಪಾಕಿಸ್ತಾನದ ಸೆಮಿಫೈನಲ್ ಹಾದಿ ಸುಗಮವಲ್ಲ. ಕುತೂಹಲಕಾರಿ ಸಂಗತಿ ಏನಂದ್ರೆ ಪಾಕ್ ತಂಡದ ಸೆಮಫೈನಲ್ ಕನಸಿನ ಭವಿಷ್ಯ ಭಾರತದ ಕೈಯಲ್ಲಿದೆ. ಪಾಕಿಸ್ತಾನದ ಸೆಮಿಫೈನಲ್ ಕನಸು ಜೀವಂತವಾಗಿರಬೇಕಾದರೆ ಭಾನುವಾರ ನಡೆಯುವ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಭಾರತ ಗೆಲ್ಲಲೇಬೇಕು. ಒಂದು ವೇಳೆ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಸೋತರೆ ಪಾಕಿಸ್ತಾನದ ನಾಕೌಟ್ ಕನಸಿಗೆ ದೊಡ್ಡ ಪೆಟ್ಟು ಬೀಳಲಿದೆ. ಹೀಗಾಗಿ ಸೌತ್ ಆಫ್ರಿಕಾ ವಿರುದ್ಧ ಭಾರತ ಗೆಲ್ಲಲಿ ಎಂದು ಪಾಕ್ ಕ್ರಿಕೆಟ್ ಪ್ರಿಯರು ಪ್ರಾರ್ಥಿಸುತ್ತಿದ್ದಾರೆ. ಇದನ್ನೂ ಓದಿ : Virat Kohli Record: ಮತ್ತೊಂದು ವಿಶ್ವದಾಖಲೆಗೆ ಕಿಂಗ್ಸ್ ಕೊಹ್ಲಿ ಸಜ್ಜು, ಈ ಬಾರಿ ವಿರಾಟ ಕಣ್ಣು ಬಿದ್ದಿರೋದು ಅದ್ಯಾವ ದಾಖಲೆಯ ಮೇಲೆ ?

ದಕ್ಷಿಣ ಆಫ್ರಿಕಾ ತಂಡ ಆಡಿರುವ 2 ಪಂದ್ಯಗಳಲ್ಲಿ ಬಾಂಗ್ಲಾದೇಶ ವಿರುದ್ಧ ಗೆದ್ದಿದ್ದು, ಜಿಂಬಾಬ್ವೆ ವಿರುದ್ಧದ ಪಂದ್ಯ ಮಳೆಯಿಂದ ರದ್ದಾಗಿದೆ. ಸದ್ಯ ದಕ್ಷಿಣ ಆಫ್ರಿಕಾ ಕೈಯಲ್ಲಿ 3 ಅಂಕಗಳಿದ್ದು, ಮುಂದಿನ 3 ಪಂದ್ಯಗಳಲ್ಲಿ ಕನಿಷ್ಠ ಎರಡರಲ್ಲಿ ಗೆದ್ದರೂ ಸೆಮಿಫೈನಲ್ ಪ್ರವೇಶಿಸಲಿದೆ.

ಟಿ20 ವಿಶ್ವಕಪ್ 2022: ದಕ್ಷಿಣ ಆಫ್ರಿಕಾದ ಮುಂದಿನ ಪಂದ್ಯಗಳು

Vs ಭಾರತ: ಅಕ್ಟೋಬರ್ 30 (ಪರ್ತ್)
Vs ಪಾಕಿಸ್ತಾನ: ನವೆಂಬರ್ 03 (ಸಿಡ್ನಿ)
Vs ನೆದರ್ಲೆಂಡ್ಸ್: ನವೆಂಬರ್ 06 (ಅಡಿಲೇಡ್)

ಸೂಪರ್-12 ಹಂತದ ಗ್ರೂಪ್-2ರಲ್ಲಿ ಭಾರತ ಈಗಾಗಲೇ ಆಡಿದ ಎರಡೂ ಪಂದ್ಯಗಳನ್ನು ಗೆದ್ದು ಸೆಮಿಫೈನಲ್ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಂಡಿದೆ. ಮುಂದಿನ ಮೂರು ಪಂದ್ಯಗಳನ್ನು ಭಾರತ ತಂಡ ದಕ್ಷಿಣ ಆಫ್ರಿಕಾ (ಅಕ್ಟೋಬರ್ 30), ಬಾಂಗ್ಲಾದೇಶ (ನವೆಂಬರ್ 02) ಮತ್ತು ಜಿಂಬಾಬ್ವೆ (ನವೆಂಬರ್ 06) ವಿರುದ್ದ ಆಡಲಿದೆ. ಇದನ್ನೂ ಓದಿ : Dinesh Karthik: ದಿನೇಶ್ ಕಾರ್ತಿಕ್ ಪವರ್ ಹಿಟ್ಟಿಂಗ್ ಸಕ್ಸಸ್ ಹಿಂದೆ ಬೆಂಗಳೂರು ಕೋಚ್ RX

ಟಿ20 ವಿಶ್ವಕಪ್ 2022: ಸೂಪರ್-12 ಗ್ರೂಪ್-2ರ ಅಂಕಪಟ್ಟಿ

ತಂಡ ಪಂದ್ಯ ಗೆಲುವು ಸೋಲು ನೋ ರಿಸಲ್ಟ್ ಅಂಕ
ಭಾರತ 02 02 00 00 04
ದಕ್ಷಿಣ ಆಫ್ರಿಕಾ 02 01 00 01 03
ಜಿಂಬಾಬ್ವೆ 02 01 00 01 03
ಬಾಂಗ್ಲಾದೇಶ 02 01 01 00 02
ಪಾಕಿಸ್ತಾನ 02 00 02 00 00
ನೆದರ್ಲೆಂಡ್ಸ್ 02 00 02 00 00

Pakistan’s fate in India’s hands, Pakistan prays for Team India victory in T20 World Cup 2022

Comments are closed.