KL Rahul success in captaincy: ಬ್ಯಾಟಿಂಗ್‌ನಲ್ಲಿ ಫೆಲ್ಯೂರ್, ಕ್ಯಾಪ್ಟನ್ಸಿಯಲ್ಲಿ ಸಕ್ಸಸ್, ರಾಹುಲ್ ನಾಯಕತ್ವಕ್ಕೆ ಮೊದಲ ಸರಣಿ ಜಯ

ಹರಾರೆ: (KL Rahul success in captaincy) ಕನ್ನಡಿಗ ಕೆ.ಎಲ್ ರಾಹುಲ್ ಅವರಿಗೆ ಸ್ವಲ್ಪ ಸಿಹಿ-ಸ್ವಲ್ಪ ಕಹಿ. ಬ್ಯಾಟಿಂಗ್’ನಲ್ಲಿ ಕಹಿ, ನಾಯತ್ವದಲ್ಲಿ ಸಿಹಿ. ಜಿಂಬಾಬ್ವೆ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಭಾರತ 5 ವಿಕೆಟ್’ಗಳ ಭರ್ಜರಿ ಗೆಲುವು ದಾಖಲಿಸುವ ಮೂಲಕ 3 ಪಂದ್ಯಗಳ ಸರಣಿಯನ್ನು ಇನ್ನೂ ಒಂದು ಪಂದ್ಯ ಬಾಕಿ ಇರುತ್ತಲೇ ಗೆದ್ದುಕೊಂಡಿದೆ.

ಮೊದಲ ಪಂದ್ಯದಲ್ಲಿ ಭಾರತ 10 ವಿಕೆಟ್’ಗಳ ಗೆಲುವು ದಾಖಲಿಸಿದ್ದ ಕಾರಣ ನಾಯಕ ರಾಹುಲ್ ಅವರಿಗೆ ಬ್ಯಾಟಿಂಗ್ ಅವಕಾಶ ಸಿಕ್ಕಿರಲಿಲ್ಲ. ಹೀಗಾಗಿ 2ನೇ ಪಂದ್ಯದಲ್ಲಿ ರಾಹುಲ್ ಆರಂಭಿಕನಾಗಿ ಕಣಕ್ಕಿಳಿದರು. ಆದರೆ ಕೇವಲ ಐದು ಎಸೆತಗಳನ್ನೆದುರಿಸಿ ಒಂದು ರನ್ನಿಗೆ ಔಟಾದರು. ಬ್ಯಾಟಿಂಗ್’ನಲ್ಲಿ ವಿಫಲರಾದರೂ, ನಾಯಕತ್ವದಲ್ಲಿ ರಾಹುಲ್ ಅವರಿಗೆ ಯಶಸ್ಸು ಸಿಕ್ಕಿದೆ. ರಾಹುಲ್ ನಾಯಕತ್ವದಲ್ಲಿ ಭಾರತ ತಂಡ ಜಿಂಬಾಬ್ವೆ (India Vs Zimbabwe ODI Series) ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯನ್ನು ಗೆದ್ದುಕೊಂಡಿದೆ.

ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ಶನಿವಾರ ನಡೆದ 2ನೇ ಪಂದ್ಯದಲ್ಲೂ ಟಾಸ್ ಗೆದ್ದ ನಾಯಕ ರಾಹುಲ್ ಆತಿಥೇಯ ಜಿಂಬಾಬ್ವೆಯನ್ನು ಬ್ಯಾಟಿಂಗ್’ಗೆ ಆಹ್ವಾನಿಸಿದರು.

ಆದರೆ ಭಾರತದ ಸಂಘಟಿತ ಬೌಲಿಂಗ್ ದಾಳಿಗೆ ತತ್ತರಿಸಿದ ಜಿಂಬಾಬ್ವೆ, 38.1 ಓವರ್’ಗಳಲ್ಲಿ ಕೇವಲ 161 ರನ್ನಿಗೆ ಆಲೌಟಾಯಿತು. ಗಾಯಾಳು ದೀಪಕ್ ಚಹರ್ ಬದಲು ಆಡುವ ಬಳಗದಲ್ಲಿ ಕಾಣಿಸಿಕೊಂಡ ಮಧ್ಯಮ ವೇಗಿ ಶಾರ್ದೂಲ್ ಠಾಕೂರ್ 38 ರನ್ನಿತ್ತು 3 ವಿಕೆಟ್ ಪಡೆದರೆ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್ ಮತ್ತು ದೀಪಕ್ ಹೂಡ ತಲಾ ಒಂದು ವಿಕೆಟ್ ಉರುಳಿಸಿದರು.

ನಂತರ 162 ರನ್’ಗಳ ಸುಲಭ ಗುರಿ ಬೆನ್ನಟ್ಟಿದ ಭಾರತ 2ನೇ ಓವರ್’ನಲ್ಲಿ ನಾಯಕ ರಾಹುಲ್ ಅವರನ್ನು ಕಳೆದುಕೊಂಡಿತು. ಕಳೆದ ಪಂದ್ಯದಲ್ಲಿ ಇನ್ನಿಂಗ್ಸ್ ಆರಂಭಿಸಿದ್ದ ಶುಭಮನ್ ಗಿಲ್ ಈ ಪಂದ್ಯದಲ್ಲಿ 3ನೇ ಕ್ರಮಾಂಕದಲ್ಲಿ ಕ್ರೀಸ್’ಗಿಳಿದು 33 ರನ್ನಿಗೆ ಔಟಾದರು. ಎಡಗೈ ಓಪನರ್ ಶಿಖರ್ ಧವನ್ ಕೂಡ 33 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಮಧ್ಯಮ ಕ್ರಮಾಂಕ ದಲ್ಲಿ ದೀಪಕ್ ಹೂಡ 25 ರನ್ ಗಳಿಸಿದರೆ, ಬಿರುಸಿನ ಆಟವಾಡಿದ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ 39 ಎಸೆತಗಳಲ್ಲಿ 3 ಬೌಂಡರಿ ಮತ್ತು 4 ಸಿಕ್ಸರ್’ಗಳ ನೆರವಿನಿಂದ ಅಜೇಯ 43 ರನ್ ಬಾರಿಸಿ 26ನೇ ಓವರ್’ನಲ್ಲಿ ಭಾರತಕ್ಕೆ 5 ವಿಕೆಟ್’ಗಳ ಭರ್ಜರಿ ಗೆಲುವು ತಂದುಕೊಟ್ಟರು. ಸರಣಿಯ 3ನೇ ಹಾಗೂ ಅಂತಿಮ ಏಕದಿನ ಪಂದ್ಯ ಸೋಮವಾರ ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಡೆಯಲಿದ್ದು, ಭಾರತ ಸರಣಿ ಕ್ಲೀನ್ ಸ್ವೀಪ್ ಮೇಲೆ ಕಣ್ಣಿಟ್ಟಿದೆ.

ಇದನ್ನೂ ಓದಿ : Shreyas Gopal : ಕರ್ನಾಟಕ ತೊರೆಯಲು ಮತ್ತೊಬ್ಬ ಸ್ಟಾರ್ ಆಟಗಾರ ಸಜ್ಜು, ಅನ್ಯ ರಾಜ್ಯದ ಪರ ಆಡಲಿದ್ದಾರೆ ಶ್ರೇಯಸ್ ಗೋಪಾಲ್ ?

ಇದನ್ನೂ ಓದಿ : T20 World Cup Team India : ಸೆಪ್ಟೆಂಬರ್ 15ಕ್ಕೆ ಟೀಮ್ ಇಂಡಿಯಾ ಆಯ್ಕೆ; Follow Live Updates

Failure in batting KL Rahul success in captaincy first series win for Rahul leadership

Comments are closed.