Deepak Hooda : ದೀಪಕ್ ಹೂಡ ವಿನೂತನ ವಿಶ್ವದಾಖಲೆ, ಪ್ಲೇಯಿಂಗ್ XIನಲ್ಲಿದ್ದಾಗ ಸತತ 16 ಪಂದ್ಯಗಳಲ್ಲಿ ಗೆಲುವು

ಹರಾರೆ: (Deepak Hooda innovative world record) ಭಾರತ ತಂಡದ ಹೊಸ ಸ್ಟಾರ್ ದೀಪಕ್ ಹೂಡ ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ದೀಪಕ್ ಹೂಡ ಪ್ಲೇಯಿಂಗ್ XIನಲ್ಲಿದ್ದಾಗ ಭಾರತ ಸತತ 16 ಪಂದ್ಯಗಳನ್ನು ಗೆದ್ದಿದೆ. ಈ ಮೂಲಕ ದೀಪಕ್ ಹೂಡ ಟೀಮ್ ಇಂಡಿಯಾದ ಲಕ್ಕಿ ಸ್ಟಾರ್ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

ದೀಪಕ್ ಹೂಡ ಆಡುವ ಬಳಗದಲ್ಲಿದ್ದಾಗ ಭಾರತ ತಂಡದ ಒಂದೇ ಒಂದು ಪಂದ್ಯ ಸೋತಿಲ್ಲ. 27 ವರ್ಷದ ಆಲ್ರೌಂಡರ್ ದೀಪಕ್ ಹೂಡ ಕಳೆದ ಫೆಬ್ರವರಿ 6ರಂದು ಅಹ್ಮದಾಬಾದ್’ನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದರು. ಅಲ್ಲಿಂದ ಇಲ್ಲಿಯವರೆಗೆ ದೀಪಕ್ ಹೂಡ 7 ಏಕದಿನ ಹಾಗೂ 9 ಟಿ20 ಪಂದ್ಯಗಳು ಸೇರಿ ಒಟ್ಟು 16 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ. ವಿಶೇಷ ಎಂದರೆ ಈ 16 ಪಂದ್ಯಗಳಲ್ಲೂ ಭಾರತ ಸೋತಿಲ್ಲ. ಈ ಮೂಲಕ ಪದಾರ್ಪಣೆಯ ನಂತರ ಸತತ ಪಂದ್ಯಗಳಲ್ಲಿ ಆಡಿ ಗೆಲುವು ದಾಖಲಿಸಿದ ವಿಶ್ವದಾಖಲೆ ನಿರ್ಮಿಸಿದ್ದಾರೆ. ಇದುವರೆಗೆ ಈ ವಿಶ್ವದಾಖಲೆ ರೊಮೇನಿಯಾ ಪರ ಆಡುತ್ತಿರುವ ಭಾರತ ಮೂಲದ ಆಟಗಾರ ಸಾತ್ವಿಕ್ ನಡಿಗೋಟ್ಲಾ ಹೆಸಲ್ಲಿತ್ತು. ಅವರ ಪದಾರ್ಪಣೆಯ ನಂತರ ಆಡಿದ 15 ಸತತ ಪಂದ್ಯಗಳಲ್ಲಿ ರೊಮೇನಿಯಾ ಗೆದ್ದಿತ್ತು.

https://twitter.com/_BCCII/status/1560970690236338177?s=20&t=fYrAC7q5O6mfoMfsjmyg9w

ಜಿಂಬಾಬ್ವೆ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ (India Vs Zimbabwe) ದೀಪಕ್ ಹೂಡ ಆಡುವ ಬಳಗದಲ್ಲಿದ್ದರೂ ಬ್ಯಾಟಿಂಗ್ ಅವಕಾಶ ಸಿಕ್ಕಿರಲಿಲ್ಲ. 2ನೇ ಏಕದಿನ ಪಂದ್ಯದಲ್ಲಿ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿದ ಹೂಡ 25 ರನ್ ಗಳಿಸಿ ಔಟಾದರು. ಪಂದ್ಯವನ್ನು 5 ವಿಕೆಟ್’ಗಳಿಂದ ಗೆದ್ದುಕೊಂಡ ಭಾರತ ಸರಣಿಯಲ್ಲಿ 2-0 ಮುನ್ನಡೆ ಸಾಧಿಸುವ ಮೂಲಕ 3 ಪಂದ್ಯಗಳ ಸರಣಿಯನ್ನು ಇನ್ನೂ ಒಂದು ಪಂದ್ಯ ಬಾಕಿ ಇರುತ್ತಲೇ ಗೆದ್ದುಕೊಂಡಿತು.

ಅಂತಾರಾಷ್ಟ್ರೀಯ ಕ್ರಿಕೆಟ್ ಪದಾರ್ಪಣೆಯ ನಂತರ ಸತತ ಪಂದ್ಯಗಳಲ್ಲಿ ಗೆಲುವು
ದೀಪಕ್ ಹೂಡ (ಭಾರತ) : 16*
ಸಾತ್ವಿಕ್ ನಡಿಗೋಟ್ಲಾ (ರೊಮೇನಿಯಾ) : 15
ಡೇವಿಡ್ ಮಿಲ್ಲರ್ (ದಕ್ಷಿಣ ಆಫ್ರಿಕಾ) : 13
ಶಂತನು ವಶಿಷ್ಟ (ರೊಮೇನಿಯಾ) : 13
ಕಾಲಿಸ್ ಕಿಂಗ್ (ವೆಸ್ಟ್ ಇಂಡೀಸ್) : 12

ದೀಪಕ್ ಹೂಡ ಪದಾರ್ಪಣೆಯ ನಂತರ ಭಾರತದ ಗೆಲುವುಗಳು:
ಮೊದಲ ಪಂದ್ಯ (ಏಕದಿನ): ವೆಸ್ಟ್ ಇಂಡೀಸ್ ವಿರುದ್ಧ 6 ವಿಕೆಟ್ ಗೆಲುವು
2ನೇ ಪಂದ್ಯ (ಏಕದಿನ): ವೆಸ್ಟ್ ಇಂಡೀಸ್ ವಿರುದ್ಧ 44 ರನ್ ಗೆಲುವು
3ನೇ ಪಂದ್ಯ (ಟಿ20): ಶ್ರೀಲಂಕಾ ವಿರುದ್ಧ 62 ರನ್ ಗೆಲುವು
4ನೇ ಪಂದ್ಯ (ಟಿ20): ಶ್ರೀಲಂಕಾ ವಿರುದ್ಧ 7 ವಿಕೆಟ್ ಗೆಲುವು
5ನೇ ಪಂದ್ಯ (ಟಿ20): ಶ್ರೀಲಂಕಾ ವಿರುದ್ಧ 6 ವಿಕೆಟ್ ಗೆಲುವು
6ನೇ ಪಂದ್ಯ (ಟಿ20): ಐರ್ಲೆಂಡ್ ವಿರುದ್ಧ 7 ವಿಕೆಟ್ ಗೆಲುವು
7ನೇ ಪಂದ್ಯ (ಟಿ20): ಐರ್ಲೆಂಡ್ ವಿರುದ್ಧ 4 ರನ್ ಗೆಲುವು
8ನೇ ಪಂದ್ಯ (ಟಿ20): ಇಂಗ್ಲೆಂಡ್ ವಿರುದ್ಧ 50 ರನ್ ಗೆಲುವು
9ನೇ ಪಂದ್ಯ (ಏಕದಿನ): ವೆಸ್ಟ್ ಇಂಡೀಸ್ ವಿರುದ್ಧ 3 ರನ್ ಗೆಲುವು
10ನೇ ಪಂದ್ಯ (ಏಕದಿನ): ವೆಸ್ಟ್ ಇಂಡೀಸ್ ವಿರುದ್ಧ 2 ವಿಕೆಟ್ ಗೆಲುವು
11ನೇ ಪಂದ್ಯ (ಏಕದಿನ): ವೆಸ್ಟ್ ಇಂಡೀಸ್ ವಿರುದ್ಧ 119 ರನ್ ಗೆಲುವು
12ನೇ ಪಂದ್ಯ (ಟಿ20): ವೆಸ್ಟ್ ಇಂಡೀಸ್ ವಿರುದ್ಧ 7 ವಿಕೆಟ್ ಗೆಲುವು
13ನೇ ಪಂದ್ಯ (ಟಿ20): ವೆಸ್ಟ್ ಇಂಡೀಸ್ ವಿರುದ್ಧ 59 ರನ್ ಗೆಲುವು
14ನೇ ಪಂದ್ಯ (ಟಿ20): ವೆಸ್ಟ್ ಇಂಡೀಸ್ ವಿರುದ್ಧ 88 ರನ್ ಗೆಲುವು
15ನೇ ಪಂದ್ಯ (ಏಕದಿನ): ಜಿಂಬಾಬ್ವೆ ವಿರುದ್ಧ 10 ವಿಕೆಟ್ ಗೆಲುವು
16ನೇ ಪಂದ್ಯ (ಏಕದಿನ): ಜಿಂಬಾಬ್ವೆ ವಿರುದ್ಧ 5 ವಿಕೆಟ್ ಗೆಲುವು

ಇದನ್ನೂ ಓದಿ : Gautam Gambhir : ಭಾರತ ಪರ ಮತ್ತೆ ಬ್ಯಾಟ್ ಹಿಡಿದು ಅಬ್ಬರಿಸಲಿದ್ದಾರೆ ವಿಶ್ವಕಪ್ ಹೀರೋ, ಸಂಸದ ಗೌತಮ್ ಗಂಭೀರ್

ಇದನ್ನೂ ಓದಿ : KL Rahul success in captaincy: ಬ್ಯಾಟಿಂಗ್‌ನಲ್ಲಿ ಫೆಲ್ಯೂರ್, ಕ್ಯಾಪ್ಟನ್ಸಿಯಲ್ಲಿ ಸಕ್ಸಸ್, ರಾಹುಲ್ ನಾಯಕತ್ವಕ್ಕೆ ಮೊದಲ ಸರಣಿ ಜಯ

Deepak Hooda innovative world record, winning in 16 consecutive matches while in the playing XI

Comments are closed.