Jasprit Bumrah : ಆಸೀಸ್ ವಿರುದ್ಧದ ಏಕದಿನ ಸರಣಿಗೂ ಟೀಮ್ ಇಂಡಿಯಾ ಸ್ಟಾರ್ ಔಟ್, ಐಪಿಎಲ್‌ನಲ್ಲಿ ಆಡಲು ಇಷ್ಟೆಲ್ಲಾ ನಾಟಕ

ಬೆಂಗಳೂರು : ಟೀಮ್ ಇಂಡಿಯಾದ ಕೆಲ ಸ್ಟಾರ್ ಆಟಗಾರರಿಗೆ ದೇಶಕ್ಕಿಂತ ಐಪಿಎಲ್ ಮುಖ್ಯ ಎಂಬುದು ಪದೇ ಪದೇ ಸಾಬೀತಾಗುತ್ತಿದೆ. ಐಪಿಎಲ್’ನಲ್ಲಿ ಆಡಲು ಟೀಮ್ ಇಂಡಿಯಾ ಡ್ಯೂಟಿಗೆ ಆಟಗಾರರು ಚಕ್ಕರ್ ಹಾಕುತ್ತಿರುವುದು ಹೊಸತೇನಲ್ಲ. ಈ ಸಾಲಿಗೆ ಹೊಸ ಸೇರ್ಪಡೆ ಟೀಮ್ ಇಂಡಿಯಾದ ಪ್ರಮುಖ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ (Fast bowler Jasprit Bumrah). ಕಳೆದ ಕೆಲ ತಿಂಗಳುಗಳಿಂದ ಟೀಮ್ ಇಂಡಿಯಾದಿಂದ ಹೊರಗಿರುವ ಪ್ರೀಮಿಯರ್ ಫಾಸ್ಟ್ ಬೌಲರ್ ಜಸ್ಪ್ರೀತ್ ಬುಮ್ರಾ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೂ (India Vs Australia ODI series) ಅಲಭ್ಯರಾಗಿದ್ದಾರೆ.

ಕಳೆದ ನಾಲ್ಕೈದು ತಿಂಗಳುಗಳಿಂದ ಬೆನ್ನು ನೋವಿನಿಂದ ಬಳಲುತ್ತಿರುವ ಜಸ್ಪ್ರೀತ್ ಈಗಾಗಲೇ ಆಸೀಸ್ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಿಂದ (India Vs Australia Border-Gavaskar test series) ಹೊರಗುಳಿದಿದ್ದಾರೆ. ಇತ್ತೀಚಿನ ವರದಿಗಳ ಪ್ರಕಾರ ಕಾಂಗರೂಗಳ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಗೂ ಅಲಭ್ಯರಾಗಲಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಮಾರ್ಚ್ 17ರಿಂದ 22ರವರೆಗೆ ನಡೆಯಲಿದ್ದು, ಸರಣಿಯ ಮೊದಲ ಪಂದ್ಯ ಮಾರ್ಚ್ 17ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ.29 ವರ್ಷದ ಬೂಮ್ರಾ ಕಳೆದ ವರ್ಷದ ಸೆಪ್ಟೆಂಬರ್ 25ರಂದು ಟೀಮ್ ಇಂಡಿಯಾ ಪರ ಕೊನೆಯ ಪಂದ್ಯವಾಡಿದ್ದರು. ನಂತರ ಬೆನ್ನು ನೋವಿನ ಗಾಯದಿಂದ ಬಳಲಿದ್ದ ಬುಮ್ರಾ, ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೂ ಅಲಭ್ಯರಾಗಿದ್ದರು.

ಇದನ್ನೂ ಓದಿ : Babar Azam Vs Smriti Mandhana : ಪಾಕಿಸ್ತಾನದ ಬಾಬರ್ ಅಜಮ್ PSL ಸಂಬಳಕ್ಕಿಂತ ಸ್ಮೃತಿ ಮಂಧನ WPL ಸಂಭಾವನೆಯೇ ಹೆಚ್ಚು

ಇದನ್ನೂ ಓದಿ : Women’s Premier League : ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡಕ್ಕೆ ಕನ್ನಡಿಗ RX ಮುರಳಿ ಬ್ಯಾಟಿಂಗ್ ಕೋಚ್

ಇದನ್ನೂ ಓದಿ : Virat Kohli and Sourav Ganguly : ವಿರಾಟ್ ಕೊಹ್ಲಿ ನಾಯಕತ್ವ ಕಳೆದುಕೊಳ್ಳಲು ಕಾರಣ ಸೌರವ್ ಗಂಗೂಲಿ, ತೆರೆಯ ಹಿಂದಿನ ಸತ್ಯ ಬಿಚ್ಚಿಟ್ಟ ಚೀಫ್ ಸೆಲೆಕ್ಟರ್

ಟೀಮ್ ಇಂಡಿಯಾ ಪರ ಆಡಲು ಗಾಯದ ನೆಪವೊಡ್ಡುತ್ತಿರುವ ಬುಮ್ರಾ, ಐಪಿಎಲ್ ವೇಳೆ ಚೇತರಿಸಿಕೊಳ್ಳಲಿದ್ದು, ಮುಂಬೈ ಇಂಡಿಯನ್ಸ್ ಪರ ಆಡಲಿದ್ದಾರೆ. ಐಪಿಎಲ್’ನಲ್ಲಿ ಮುಂಬೈ ಇಂಡಿಯನ್ಸ್ ತಂಡ ಬುಮ್ರಾ ಅವರಿಗೆ ವರ್ಷಕ್ಕೆ 12 ಕೋಟಿ ರೂ.ಗಳ ಸಂಭಾವನೆ ನೀಡುತ್ತದೆ. ಇದಕ್ಕೆ ಹೋಲಿಸಿದರೆ ಟೀಮ್ ಇಂಡಿಯಾ ಪರ ಆಡುವಾಗ ಸಿಗುವ ಮೊತ್ತ ಕಡಿಮೆ. ಹೀಗಾಗಿ ಬುಮ್ರಾ ದುಡ್ಡಿನ ಹಿಂದೆ ಬಿದ್ದು ರಾಷ್ಟ್ರೀಯ ತಂಡದ ಪರ ಆಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಕ್ರಿಕೆಟ್ ಪ್ರಿಯರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರ ಹಾಕುತ್ತಿದ್ದಾರೆ.

ಇದನ್ನೂ ಓದಿ : Chetan Sharma sting operation : ಫಿಟ್’ನೆಸ್‌ಗಾಗಿ ಇಂಜೆಕ್ಷನ್ ತೆಗೆದುಕೊಳ್ತಾರಂತೆ ಟೀಮ್ ಇಂಡಿಯಾ ಆಟಗಾರರು; ಶಾಕಿಂಗ್ ರಹಸ್ಯ ಬಿಚ್ಚಿಟ್ಟ ಆಯ್ಕೆ ಸಮಿತಿಯ ಮುಖ್ಯಸ್ಥ

Fast bowler Jasprit Bumrah: Team India star out for ODI series against Aussies, all this drama to play in IPL

Comments are closed.