Cheteshwar Pujara : ನಾಳೆಯಿಂದ ಭಾರತ Vs ಆಸೀಸ್ 2ನೇ ಟೆಸ್ಟ್, 100ನೇ ಟೆಸ್ಟ್ ಸಂಭ್ರಮದಲ್ಲಿ ಚೇತೇಶ್ವರ್ ಪೂಜಾರ

ದೆಹಲಿ: ಭಾರತ ಮತ್ತು ಪ್ರವಾಸಿ ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ (Border-Gavaskar test series) 2ನೇ ಪಂದ್ಯ ನಾಳೆ ದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಆರಂಭವಾಗಲಿದೆ. ಟೀಮ್ ಇಂಡಿಯಾದ ಅನುಭವಿ ಬ್ಯಾಟ್ಸ್’ಮನ್ ಚೇತೇಶ್ವರ್ ಪೂಜಾರ (Cheteshwar Pujara) ಪಾಲಿಗೆ ಇದು 100ನೇ ಟೆಸ್ಟ್ ಪಂದ್ಯ. ಟೆಸ್ಟ್ ವೃತ್ತಿಜೀವನದ 100ನೇ ಪಂದ್ಯವನ್ನು ಶತಕದೊಂದಿಗೆ ಸ್ಮರಣೀಯವಾಗಿಸಿಕೊಳ್ಳಲು ಪೂಜಾರ ಸಜ್ಜಾಗಿದ್ದಾರೆ. 2010ರಲ್ಲಿ ಟೆಸ್ಟ್ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದ ಪೂಜಾರ ಭಾರತ ಪರ ಇದುವರೆಗೆ 99 ಟೆಸ್ಟ್ ಪಂದ್ಯಗಳನ್ನಾಡಿದ್ದು, ಪೂಜಾರ 44.15ರ ಸರಾಸರಿಯಲ್ಲಿ 19 ಶತಕಗಳ ಸಹಿತ 7021 ರನ್ ಕಲೆ ಹಾಕಿದ್ದಾರೆ.

ಗಾಯದಿಂದ ಚೇತರಿಸಿಕೊಂಡಿರುವ ಮಧ್ಯಮ ಕ್ರಮಾಂಕದ ಬ್ಯಾಟ್ಸ್’ಮನ್ ಶ್ರೇಯಸ್ ಅಯ್ಯರ್ ಟೀಮ್ ಇಂಡಿಯಾಗೆ ಮರಳಿದ್ದು, ಆಸೀಸ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ 5ನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ಹೀಗಾಗಿ ನಾಗ್ಪುರ ಟೆಸ್ಟ್ ಪಂದ್ಯದ ಮೂಲಕ ಟೆಸ್ಟ್ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದ ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್ ಅವರಿಗಾಗಿ ಆಡುವ ಬಳಗದಲ್ಲಿ ಜಾಗ ಖಾಲಿ ಮಾಡಲಿದ್ದಾರೆ.

ಕನ್ನಡಿಗ ಕೆ.ಎಲ್ ರಾಹುಲ್ ಪಾಲಿಗೆ ದೆಹಲಿ ಟೆಸ್ಟ್ ಪಂದ್ಯ ಅತ್ಯಂತ ಮಹತ್ವದ್ದಾಗಿದೆ. ಕಳೆದ ಕೆಲ ಟೆಸ್ಟ್ ಇನ್ನಿಂಗ್ಸ್’ಗಳಲ್ಲಿ ದೊಡ್ಡ ಮೊತ್ತ ಗಳಿಸಲು ವಿಫಲರಾಗಿರುವ ರಾಹುಲ್ ಮೇಲೆ ಒತ್ತಡವಿದ್ದು, ತಂಡ ತಮ್ಮ ಮೇಲಿಟ್ಟಿರುವ ನಿರೀಕ್ಷೆಯನ್ನು ಉಳಿಸಿಕೊಳ್ಳಲೇಬೇಕಾದ ಒತ್ತಡದಲ್ಲಿದ್ದಾರೆ. ನಾಗ್ಪುರದಲ್ಲಿ ನಡೆದಿದ್ದ ಆಸೀಸ್ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯವನ್ನು ಇನ್ನಿಂಗ್ಸ್ ಹಾಗೂ 132 ರನ್’ಗಳಿಂದ ಗೆದ್ದುಕೊಂಡಿದ್ದ ಭಾರತ, 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಭಾರತ Vs ಆಸ್ಟ್ರೇಲಿಯಾ ದ್ವಿತೀಯ ಟೆಸ್ಟ್ :
ಪಂದ್ಯ ಆರಂಭ: ಬೆಳಗ್ಗೆ 9.30ಕ್ಕೆ
ಸ್ಥಳ: ಫಿರೋಜ್ ಷಾ ಕೋಟ್ಲಾ ಮೈದಾನ, ದೆಹಲಿ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್
ಲೈವ್ ಸ್ಟ್ರೀಮಿಂಗ್: ಡಿಸ್ನಿ+ಹಾಟ್ ಸ್ಟಾರ್

ಇದನ್ನೂ ಓದಿ : Babar Azam Vs Smriti Mandhana : ಪಾಕಿಸ್ತಾನದ ಬಾಬರ್ ಅಜಮ್ PSL ಸಂಬಳಕ್ಕಿಂತ ಸ್ಮೃತಿ ಮಂಧನ WPL ಸಂಭಾವನೆಯೇ ಹೆಚ್ಚು

ಇದನ್ನೂ ಓದಿ : Jasprit Bumrah : ಆಸೀಸ್ ವಿರುದ್ಧದ ಏಕದಿನ ಸರಣಿಗೂ ಟೀಮ್ ಇಂಡಿಯಾ ಸ್ಟಾರ್ ಔಟ್, ಐಪಿಎಲ್‌ನಲ್ಲಿ ಆಡಲು ಇಷ್ಟೆಲ್ಲಾ ನಾಟಕ

ಇದನ್ನೂ ಓದಿ : Women’s Premier League : ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡಕ್ಕೆ ಕನ್ನಡಿಗ RX ಮುರಳಿ ಬ್ಯಾಟಿಂಗ್ ಕೋಚ್

ಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್ XI:
1.ರೋಹಿತ್ ಶರ್ಮಾ (ನಾಯಕ), 2.ಕೆ.ಎಲ್ ರಾಹುಲ್, 3.ಚೇತೇಶ್ವರ್ ಪೂಜಾರ, 4.ವಿರಾಟ್ ಕೊಹ್ಲಿ, 5.ಶ್ರೇಯಸ್ ಅಯ್ಯರ್, 6.ರವೀಂದ್ರ ಜಡೇಜ, 7. ಕೆ.ಎಸ್ ಭರತ್ (ವಿಕೆಟ್ ಕೀಪರ್), 8.ರವಿಚಂದ್ರನ್ ಅಶ್ವಿನ್, 9.ಅಕ್ಷರ್ ಪಟೇಲ್/ಉಮೇಶ್ ಯಾದವ್, 10.ಮೊಹಮ್ಮದ್ ಶಮಿ, 11.ಮೊಹಮ್ಮದ್ ಸಿರಾಜ್.

India vs Aussies 2nd Test from tomorrow, Cheteshwar Pujara in 100th Test celebration

Comments are closed.