Gary Balance : ಎರಡು ದೇಶಗಳ ಪರ ಟೆಸ್ಟ್ ಶತಕ ಸಿಡಿಸಿ ಅಪರೂಪದ ದಾಖಲೆ ಬರೆದ ಜಿಂಬಾಬ್ವೆ ಕ್ರಿಕೆಟಿಗ

ಬುಲಾವಾಯೊ : ದೇಶದ ಪರ ಟೆಸ್ಟ್ ಕ್ರಿಕೆಟ್ ಆಡುವುದು ದೊಡ್ಡ ಸಾಧನೆ. ಟೆಸ್ಟ್ ಕ್ರಿಕೆಟ್’ನಲ್ಲಿ ಶತಕ ಬಾರಿಸುವುದು ಮತ್ತೊಂದು ದೊಡ್ಡ ಸಾಧನೆ. ಅದೇ ಟೆಸ್ಟ್ ಕ್ರಿಕೆಟ್’ನಲ್ಲಿ ಎರಡು ದೇಶಗಳ ಪರ ಶತರ ಬಾರಿಸುವುದು ವಿಶಿಷ್ಠ ಮತ್ತು ವಿಶೇಷ ಸಾಧನೆ. ಜಿಂಬಾಬ್ವೆ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್’ಮನ್ ಗ್ಯಾರಿ ಬ್ಯಾಲೆನ್ಸ್ (Gary Balance) ಅಂತಹ ವಿಶಿಷ್ಟ ಸಾಧನೆ ಮಾಡಿದ್ದಾರೆ.

ಬುಲವಾಯೊದಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದ 4ನೇ ದಿನ ಅಜೇಯ 137 ರನ್ ಬಾರಿಸುವ ಗ್ಯಾರಿ ಬ್ಯಾಲೆನ್ಸ್ ಎರಡು ದೇಶಗಳ ಪರ ಟೆಸ್ಟ್ ಶತಕ ಬಾರಿಸಿದ ಸಾಧನೆ ಮಾಡಿದರು. ಟೆಸ್ಟ್ ಕ್ರಿಕೆಟ್’ನಲ್ಲಿ ಎರಡು ರಾಷ್ಟ್ರಗಳ ಪರ ಶತಕ ಸಿಡಿಸಿದ ವಿಶ್ವದ 2ನೇ ಆಟಗಾರನೆಂಬ ಹಿರಿಮೆಗೆ ಗ್ಯಾರಿ ಬ್ಯಾಲೆನ್ಸ್ ಪಾತ್ರರಾದರು. ಇದಕ್ಕೂ ಮೊದಲು ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ ಕೆಪ್ಲರ್ ವೆಸೆಲ್ಸ್ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ಪರ ಟೆಸ್ಟ್ ಕ್ರಿಕೆಟ್’ನಲ್ಲಿ ಶತಕ ಬಾರಿಸಿದ್ದರು.

ಇದನ್ನೂ ಓದಿ : Duplicate Ashwin – Ravichandran Ashwin : ಟೀಮ್ ಇಂಡಿಯಾ ಕ್ಯಾಂಪ್‌ನಲ್ಲಿ ಕಾಂಗರೂಗಳ ಗೇಮ್ ಪ್ಲಾನ್ ಸೀಕ್ರೆಟ್ ಬಿಚ್ಚಿಟ್ಟ ಡುಪ್ಲಿಕೇಟ್ ಅಶ್ವಿನ್

ಇದನ್ನೂ ಓದಿ : Border-Gavaskar test series: ನಾಳೆಯಿಂದ ಪ್ರಥಮ ಟೆಸ್ಟ್, ಕಾಂಗರೂಬೇಟೆಗೆ ಹೀಗಿದೆ ಭಾರತದ ಪ್ಲೇಯಿಂಗ್ XI

ಇದನ್ನೂ ಓದಿ : ಮಾರ್ಚ್ 4ರಿಂದ ಮಹಿಳಾ ಐಪಿಎಲ್; ಫೆಬ್ರವರಿ 13ಕ್ಕೆ ಆಟಗಾರ್ತಿಯರ ಹರಾಜು, ಯಾರ ಮೂಲ ಬೆಲೆ ಎಷ್ಟು? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಇಂಗ್ಲೆಂಡ್ ಪರ 4 ಟೆಸ್ಟ್ ಶತಕ ಬಾರಿಸಿದ್ದ ಗ್ಯಾರಿ ಬ್ಯಾಲೆನ್ಸ್:
ಜಿಂಬಾಬ್ವೆ ಮೂಲದ ಗ್ಯಾರಿ ಬ್ಯಾಲೆನ್ಸ್ ಟೆಸ್ಟ್ ಕರಿಯರ್ ಶುರು ಮಾಡಿದ್ದು ಇಂಗ್ಲೆಂಡ್ ಪರ. 2014ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸಿಡ್ನಿ ಟೆಸ್ಟ್ ಪಂದ್ಯದ ಮೂಲಕ ಟೆಸ್ಟ್ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದ 33 ವರ್ಷದ ಗ್ಯಾರಿ ಬ್ಯಾಲೆನ್ಸ್, ಇಂಗ್ಲೆಂಡ್ ಪರ 4 ಟೆಸ್ಟ್ ಶತಕಗಳನ್ನು ಬಾರಿಸಿದ್ದಾರೆ. 2014ರಿಂದ 2017ರವರೆಗೆ ಇಂಗ್ಲೆಂಡ್ ಪರ 23 ಟೆಸ್ಟ್ ಪಂದ್ಯಗಳನ್ನಾಡಿರುವ ಬ್ಯಾಲೆನ್ಸ್, 37.45ರ ಸರಾಸರಿಯಲ್ಲಿ 4 ಶತಕ ಹಾಗೂ 7 ಅರ್ಧಶತಕ ನೆರವಿನಿಂದ 1498 ರನ್ ಕಲೆ ಹಾಕಿದ್ದಾರೆ.

ಇಂಗ್ಲೆಂಡ್ ತಂಡದಲ್ಲಿ ಸ್ಥಾನ ಕಳೆದುಕೊಂಡ ನಂತರ ತಮ್ಮ ತವರು ದೇಶ ಜಿಂಬಾಬ್ವೆಗೆ ಮರಳಿದ್ದ ಗ್ಯಾರಿ ಬ್ಯಾಲೆನ್ಸ್ ಜಿಂಬಾಬ್ವೆ ಪರ ಇದೇ ಮೊದಲ ಬಾರಿ ಟೆಸ್ಟ್ ಕ್ರಿಕೆಟ್ ಆಡುತ್ತಿದ್ದು, ಆಡಿದ ಮೊದಲ ಟೆಸ್ಟ್’ನಲ್ಲಿ ಅಮೋಘ ಶತಕ ಬಾರಿಸಿ ಗಮನ ಸೆಳೆದಿದ್ದಾರೆ. 231 ಎಸೆತಗಳನ್ನೆದುರಿಸಿದ ಗ್ಯಾರಿ ಬ್ಯಾಲೆನ್ಸ್ 12 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ ಅಜೇಯ 137 ರನ್ ಬಾರಿಸಿದರು.ಗ್ಯಾರಿ ಬ್ಯಾಲೆನ್ಸ್ ಶತಕದ ನೆರವಿನಿಂದ ಜಿಂಬಾಬ್ವೆ ತಂಡ ತನ್ನ ಪ್ರಥಮ ಇನ್ನಿಂಗ್ಸ್’ನಲ್ಲಿ 9 ವಿಕೆಟ್ ನಷ್ಟಕ್ಕೆ 379 ರನ್ ಗಳಿಸಿ ಡಿಕ್ಲೇರ್ ಘೋಷಿಸಿತು. ಇದಕ್ಕೂ ಮೊದಲು ವೆಸ್ಟ್ ಇಂಡೀಸ್ ತನ್ನ ಪ್ರಥಮ ಇನ್ನಿಂಗ್ಸ್’ನಲ್ಲಿ 6 ವಿಕೆಟ್‌ಗೆ 447 ರನ್‌ಗಳಿಗೆ ಡಿಕ್ಲೇರ್ ಮಾಡಿಕೊಂಡಿತ್ತು.

Gary Balance: Zimbabwean cricketer who has scored a rare Test century for two countries

Comments are closed.