Gayle bats for Agarwal : “ಮಯಾಂಕ್ ಅಗರ್ವಾಲ್‌ರನ್ನು ನಡೆಸಿಕೊಂಡ ರೀತಿ ಸರಿಯಲ್ಲ”.. ವಿಂಡೀಸ್ ದೈತ್ಯ ಕ್ರಿಸ್ ಗೇಲ್ ಹೀಗಂದಿದ್ಯಾಕೆ?

ಬೆಂಗಳೂರು: ವೆಸ್ಟ್ ಇಂಡೀಸ್’ನ ದೈತ್ಯ ದಾಂಡಿಗ ಕ್ರಿಸ್ ಗೇಲ್ (Chris Gayle) ಟಿ20 ಕ್ರಿಕೆಟ್’ನ ವಿಶ್ವದಾಖಲೆ ವೀರ. ಐಪಿಎಲ್’ನಲ್ಲಿ ಕೋಲ್ಕತಾ ನೈಟ್ ರೈಡರ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ತಂಡಗಳ ಪರ ಆಡಿರುವ ಗೇಲ್ ದಾಖಲೆಗಳ (Gayle bats for Agarwal) ಮೇಲೆ ದಾಖಲೆಗಳನ್ನು ಬರೆದ ಆಟಗಾರ.

ವೆಸ್ಟ್ ಇಂಡೀಸ್’ನ ವಿಧ್ವಂಸಕ ದಾಂಡಿಗ ಕ್ರಿಸ್ ಗೇಲ್, ಇದೀಗ ಕನ್ನಡಿಗ ಮಯಾಂಕ್ ಅಗರ್ವಾಲ್ (Mayank Agarwal) ಬಗ್ಗೆ ಅನುಕಂಪದ ಮಾತುಗಳನ್ನಾಡದ್ದಾರೆ. “ಮಯಾಂಕ್ ಅಗರ್ವಾಲ್ ಅವರನ್ನು ನಡೆಸಿಕೊಂಡ ರೀತಿ ಸರಿಯಲ್ಲ” ಎಂದಿದ್ದಾರೆ. ಅಷ್ಟಕ್ಕೂ ಮಯಾಂಕ್ ಬಗ್ಗೆ ಕ್ರಿಸ್ ಗೇಲ್ ಸಹಾನುಭೂತಿಯ ಮಾತುಗಳನ್ನಾಡಿದ್ದು ಯಾಕೆ ಗೊತ್ತಾ? ಪಂಜಾಬ್ ಕಿಂಗ್ಸ್ (Punjab Kings) ತಂಡದಲ್ಲಿ ಮಯಾಂಕ್’ರನ್ನು ನಡೆಸಿಕೊಂಡ ರೀತಿ ಗೇಲ್ ಅವರಿಗೆ ಇಷ್ಟವಾಗಿಲ್ಲ. ಐಪಿಎಲ್ 2023 ಆಟಗಾರರ ಹರಾಜು ಪ್ರಕ್ರಿಯೆಯೂ ಮುನ್ನಾ ದಿನ ಜಿಯೊ ಸಿನಿಮಾ ವಾಹಿನಿಯೊಂದಿಗೆ ಮಾತನಾಡಿದ ಕ್ರಿಲ್ಸ ಗೇಲ್, ಕನ್ನಡಿಗ ಮಯಾಂಕ್ ಅಗರ್ವಾಲ್ ಅವರನ್ನು ನಡೆಸಿಕೊಂಡ ರೀತಿಯ ಬಗ್ಗೆ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ವಿರುದ್ಧ ಕಿಡಿ ಕಾರಿದ್ದಾರೆ.

“ಪಂಜಾಬ್ ಫ್ರಾಂಚೈಸಿ ತಮ್ಮನ್ನು ರೀಟೇನ್ ಮಾಡದ ಬಗ್ಗೆ ಮಯಾಂಕ್ ಅಗರ್ವಾಲ್ ಅವರಿಗೆ ತುಂಬಾ ನೋವಾಗಿರುತ್ತದೆ. ಯಾಕಂದ್ರೆ ತಂಡಕ್ಕಾಗಿ ಮಯಾಂಕ್ ಸಾಕಷ್ಟು ತ್ಯಾಗಗಳನ್ನು ಮಾಡಿದ್ದಾರೆ. ಆದರೆ ಅವರನ್ನು ನಡೆಸಿಕೊಂಡ ರೀತಿಯನ್ನು ನೋಡಿದಾಗ ತುಂಬಾ ಬೇಸರವಾಯಿತು. ಅವರನ್ನು ಯಾವುದಾದರೊಂದು ತಂಡ ಒಳ್ಳೆಯ ಮೊತ್ತಕ್ಕೆ ಖರೀದಿಸುತ್ತದೆ ಎಂಬ ನಂಬಿಕೆ ನನಗಿದೆ. ಅವರೊಬ್ಬ ಅದ್ಭುತ ಟೀಮ್ ಮ್ಯಾನ್” ಎಂದು ಕ್ರಿಸ್ ಗೇಲ್ ಹೇಳಿದ್ದಾರೆ.

ಇದನ್ನೂ ಓದಿ : Ranji Trophy : ಕರ್ನಾಟಕಕ್ಕೆ ಮೊದಲ ಜಯ, 3ನೇ ದಿನಗಳಲ್ಲಿ ಗೆದ್ದು ಬೀಗಿದ ಮಯಾಂಕ್ ಬಾಯ್ಸ್

ಇದನ್ನೂ ಓದಿ : ಕೆ.ಎಲ್ ರಾಹುಲ್‌ಗೆ ಏನಾಯ್ತು? ಸತತ 5 ಇನ್ನಿಂಗ್ಸ್‌ನಲ್ಲೂ ಫೇಲ್, ಹೀಗೆ ಆದ್ರೆ ಕರಿಯರ್ ಕಷ್ಟ ಕಷ್ಟ!

ಇದನ್ನೂ ಓದಿ : Jaydev Unadkat : 12 ವರ್ಷಗಳ ನಂತರ ಭಾರತ ಪರ ಟೆಸ್ಟ್ ಆಡುವ ಅವಕಾಶ, ಇದು ಸೌರಷ್ಟ್ರದ ಛಲದಂಕಮಲ್ಲನ ಕಥೆ

20222ರ ಐಪಿಎಲ್ ಟೂರ್ನಿಯಲ್ಲಿ ಮತ್ತೊಬ್ಬ ಕನ್ನಡಿಗಗ ಕೆ.ಎಲ್ ರಾಹುಲ್ ಪಂಜಾಬ್ ಕಿಂಗ್ಸ್ ತಂಡವನ್ನು ತೊರೆದಾಗ ಮಯಾಂಕ್ ಅಗರ್ವಾಲ್ ಅವರಿಗೆ ನಾಯಕತ್ವ ವಹಿಸಲಾಗಿತ್ತು. ಮಯಾಂಕ್ ನಾಯಕತ್ವದಲ್ಲಿ ಆಡಿದ 13 ಪಂದ್ಯಗಳಲ್ಲಿ ಪಂಜಾಬ್ 7 ಗೆಲುವು ದಾಖಲಿಸಿತ್ತು. ಆದರೂ ಮಯಾಂಕ್ ಅವರನ್ನು ರೀಟೇನ್ ಮಾಡಿಕೊಳ್ಳದ ಪಂಜಾಬ್ ಕಿಂಗ್ಸ್ ತಂಡದಿಂದ ರಿಲೀಸ್ ಮಾಡಿದೆ. ಶುಕ್ರವಾರ ನಡೆಯಲಿರುವ ಆಟಗಾರರ ಹರಾಜಿನಲ್ಲಿ ಮಯಾಂಕ್ ಅಗರ್ವಾಲ್ ಕೂಡ ಇದ್ದು 1 ಕೋಟಿ ರೂ.ಗಳ ಮೂಲ ಬೆಲೆ ಹೊಂದಿದ್ದಾರೆ.

Gayle bats for Agarwal : “The way Mayank Agarwal was treated is not right”.. Why did Windies giant Chris Gayle say this?

Comments are closed.