ಸದ್ದಿಲ್ಲದೇ ಏರುತ್ತಿದೆ ಕೊರೋನಾ ಸಂಖ್ಯೆ: ಚುನಾವಣೆಗೂ ಆರೋಗ್ಯ ಇಲಾಖೆ ಗೈಡ್ ಲೈನ್ಸ್ ರಿಲೀಸ್

ಬೆಂಗಳೂರು : (Health department guidelines for elections) ಕಳೆದ ಎರಡು ಮೂರು ವರ್ಷಗಳ ಹಿಂದೆ ಪ್ರಪಂಚವನ್ನೇ ನಡುಗಿಸಿದ್ದ ಕೊರೋನಾ ಮಹಾಮಾರಿ ಪ್ರಭಾವ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ಕೊರೋನಾ ನಮ್ಮಿಂದ ದೂರವಾಗಿಲ್ಲ. ಈಗ ಚುನಾವಣೆ ಅಬ್ಬರದೊಂದಿಗೆ ನಿಧಾನಕ್ಕೆ ಕೊರೋನಾ ಸೋಂಕಿತರ ಸಂಖ್ಯೆಯೂ ಏರತೊಡಗಿದ್ದು, ಹೀಗಾಗಿ ಚುನಾವಣಾ ನೀತಿ ಸಂಹಿತೆ, ಚುನಾವಣೆ ಹೊತ್ತಲ್ಲೂ ಕಾಳಜಿ ವಹಿಸುವಂತೆ ಸೂಚಿಸಿರುವ ಆರೋಗ್ಯ ಇಲಾಖೆ ಕೋವಿಡ್ ಗೈಡ್ ಲೈನ್ಸ್ ಬಿಡುಗಡೆ ಮಾಡಿದೆ. ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಕೊರೋನಾ ಪೀಡಿತರ ಸಂಖ್ಯೆಯಲ್ಲಿ ಕಳೆದ ಒಂದು ವಾರದಿಂದ ಏರಿಕೆ ಕಂಡುಬಂದಿದೆ‌. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಕೋವಿಡ್ ಮಾರ್ಗಸೂಚಿ ಪ್ರಕಟಿಸಿದೆ.

ಚುನಾವಣಾ ಪ್ರಚಾರದ ಅಬ್ಬರದಲ್ಲಿ ಮೈ ಮರೆಯಬೇಡಿ ಎಂದಿರುವ ಇಲಾಖೆ ಹೆಚ್ಚುತ್ತಿರುವ ಕೋವಿಡ್ ಹರಡದಂತೆ ಎಚ್ಚರ ವಹಿಸುವುದು ಮುಖ್ಯ ಎಂದಿದೆ‌. ಅಲ್ಲದೇ ಚುನಾವಣಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಚುನಾವಣಾ ಸಿಬ್ಬಂದಿಗಳಿಗೆ ಬೂಸ್ಟರ್ ಡೋಸ್ ಕಡ್ಡಾಯಗೊಳಿಸಿದೆ.

ಚುನಾವಣಾ ರ್ಯಾಲಿ ಸಂದರ್ಭದಲ್ಲಿ ಕೋವಿಡ್ ಹರಡುವಿಕೆ ಪ್ರಕ್ರಿಯೆ ಹೆಚ್ಚಾದಲ್ಲಿ ಆಯಾ ರಾಜಕೀಯ ಪಕ್ಷವೇ ಹೊಣೆ ಹೊರಬೇಕು. ಸಾರ್ವಜನಿಕ ಪ್ರದೇಶಗಳ ಆಯ್ಕೆ ಪ್ರಕಾರ ಸುವಿಧ ಆಪ್ ಮೂಲಕವೇ ನೀಡಬೇಕು.ಮತದಾನದ ದಿನ ಹೆಲ್ಪ್ ಡೆಸ್ಕ್ ಆರಂಭಿಸಬೇಕು.ಮತ ಹಾಕಲು ಮೊದಲು ಬಂದವರಿಗೆ ಮೊದಲ ಆದ್ಯತೆ ಎಂಬ ನಿಯಮಾನುಸಾರ ಟೋಕನ್ ವಿತರಿಸಬೇಕು. ಸಾಮಾಜಿಕ ಅಂತರ ಕಾಪಾಡಲು ಮತಗಟ್ಟೆ ಹಾಗೂ ಹೊರಭಾಗದಲ್ಲಿ ಮಾರ್ಕ್ ಮಾಡಬೇಕು. ಎಲ್ಲಾ ಮತಗಟ್ಟೆಗಳ ಮುಂದೆ ಕೋವಿಡ್ ಜಾಗೃತಿ ಬಗ್ಗೆ ಪೋಸ್ಟರ್ ಅಳವಡಿಸಬೇಕು

ಇದನ್ನೂ ಓದಿ : Karnataka Election ticket Fight :ಸಿದ್ಧರಾಮಯ್ಯ ವಿರುದ್ಧ ವಿಜಯೇಂದ್ರ ಸ್ಪರ್ಧೆ : ನಿರ್ಧಾರಕ್ಕೆ ಬಿಜೆಪಿಯಲ್ಲೇ ಶುರುವಾಯ್ತು ವಿರೋಧ

ಮತದಾನದ ಕೊನೆಯ ಒಂದು ಗಂಟೆ ಕೋವಿಡ್ ಸೋಂಕಿತರಿಗೆ ಮತದಾನ ಮಾಡಲು ಮೀಸಲಿಡಬೇಕು ಎಂದು ಸೂಚಿಸಿದೆ. ಅಲ್ಲದೇ ಕ್ವಾರಂಟೈನ್ ನಲ್ಲಿರೋ ರೋಗಿಗಳಿಗೆ ಅಲ್ಲಿಂದಲೇ ಮತಹಾಕಲು ಪೋಸ್ಟಲ್ ಬ್ಯಾಲೆಟ್ ಆಫ್ಸನ್ ಕೂಡ ಆರೋಗ್ಯ ಇಲಾಖೆ ಹಾಗೂ ಚುನಾವಣಾ ಆಯೋಗದ ನೀಡಿದೆ. ಮತ ಎಣಿಕೆ ಕೇಂದ್ರದ ಹೊರಗೆ ಕೊರೋನಾ ಭೀತಿಯ ಹಿನ್ನೆಲೆಯಲ್ಲಿ ಜನ ಸೇರುವುದನ್ನು ನಿಷೇಧಿಸಲಾಗಿದೆ. ಒಂದೊಮ್ಮೆ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಸಿಬ್ಬಂದಿ ಕೊರೋನಾ ತುತ್ತಾದರೇ, ಬದಲಿ ಸಿಬ್ಬಂದಿಯನ್ನು ನೇಮಿಸಬೇಕು. ಚುನಾವಣೆಯ ಸಂಪೂರ್ಣ ಪ್ರಕ್ರಿಯೆ ವೇಳೆಯೂ ಸಿಬ್ಬಂದಿ ಹಾಗೂ ಸರ್ಕಾರ ಕೊರೋನಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕೆಂದು ಗೈಡ್ ಲೈನ್ಸ್ ನಲ್ಲಿ ಉಲ್ಲೇಖಿಸಲಾಗಿದೆ. ಮೂಲಗಳ ಮಾಹಿತಿ ಪ್ರಕಾರ ರಾಜ್ಯದಲ್ಲಿ ಪ್ರತಿನಿತ್ಯ ನೂರಕ್ಕೂ ಅಧಿಕ ಕೊರೋನಾ ಪ್ರಕರಣಗಳು ದಾಖಲಾಗುತ್ತಿದ್ದು, ಸಾವಿನ ಸಂಖ್ಯೆಯೂ ಹತ್ತರ ಗಡಿ ದಾಟಿದೆ.

Health department guidelines for elections: Corona number is rising silently: Health department guidelines release for elections

Comments are closed.